Allu Arjun ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಪುಷ್ಪ' (Pushpa) ಚಿತ್ರವು ಸಾಹಸ ದೃಶ್ಯಗಳಿಂದ ಸಂಗೀತದವರೆಗೆ ಬಿಡುಗಡೆಯಾದಾಗಿನಿಂದ ಜನರ ಹೃದಯದಲ್ಲಿ ಮನೆಮಾಡಿದೆ. ಈ ಚಿತ್ರದ ಹಾಡುಗಳು ಕೂಡ ಸೂಪರ್ ಹಿಟ್ ಎಂದು ಸಾಬೀತಾಗಿವೆ. ಇದೇವೇಳೆ, ಇತ್ತೀಚೆಗೆ, ರಶ್ಮಿಕಾ ಮೇಲೆ ಚಿತ್ರೀಕರಿಸಲಾದ ಹಾಡಿಗೆ ಸಂಬಂಧಿಸಿದ ಕೆಲ ಆಸಕ್ತಿದಾಯಕ ಸಂಗತಿಗಳು ಭಾರಿ ಚರ್ಚೆಗೆ ಒಳಗಾಗಿವೆ. ಖ್ಯಾತ ಹಿನ್ನೆಲೆ ಗಾಯಕಿ ಸುನಿಧಿ ಚೌಹಾಣ್ (Sunidhi Chauhan) ಈ ಚಿತ್ರದಲ್ಲಿ ಮೂಡಿಬಂದಿರುವ 'ಸಾಮಿ ಸಾಮಿ' ಹಾಡಿಗೆ (Saami Saami Song) ತಮ್ಮ ಧ್ವನಿ ನೀಡಿದ್ದಾರೆ.  ಸುನಿಧಿಯವರ ಗಟ್ಟಿಯಾದ ಧ್ವನಿ ಈ ಹಾಡಿಗೆ ಭಾರಿ ಬಲ ನೀಡಿದೆ. ಆದರೆ, ಹಾಡಿನ ಸಾಹಿತ್ಯದಲ್ಲಿನ ಕೆಲ ಪದಗಳಿಗೆ ಸುನಿಧಿ ತುಂಬಾ ಆಕ್ಷೇಪ ಎತ್ತಿದ್ದರು ಎಂದು ಹೇಳಿದರೆ ನಿಮಗೂ ಕೂಡ ಆಶ್ಚರ್ಯವಾದೀತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Pushpa 2: 'Pushpa: The Rise' ದಾಖಲೆಯ ಗಳಿಕೆಯ ಬಳಿಕ ಸಂಭಾವನೆ ಹೆಚ್ಚಿಸಿದ Rashmika Mandanna, Allu Arjun ಕೇಳಿದ್ದೆಷ್ಟು ಗೊತ್ತಾ?


ಬಳಿಕ ಸಾಹಿತ್ಯವನ್ನು ಬದಲಾಯಿಸಲಾಗಿದೆ
‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಎಂಬ ಹಿಟ್ ಹಾಡಿನಲ್ಲಿ ಸುನಿಧಿ ಅವರ ಅದ್ಬುತ ಶೈಲಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ ಈ ಹಾಡಿನ ರೆಕಾರ್ಡಿಂಗ್‌ಗೆ ಸಂಬಂಧಿಸಿದ ವಿಷಯವೊಂದು ಹೊರಬಿದ್ದಿದ್ದು, ಅದರಲ್ಲಿ ಸುನಿಧಿ ಈ ಹಾಡಿನ ಕೆಲವು ಸಾಲುಗಳನ್ನು ಬದಲಾಯಿಸಿರುವುದು ತಿಳಿದುಬಂದಿದೆ. ಹೌದು, 'ಸಾಮಿ ಸಾಮಿ' ಹಿಂದಿ ಹಾಡಿನಲ್ಲಿ 'ಲುಂಗಿ ಲಪೇಟೆ ಪಿಯಾ' ಎಂಬ ಸಾಲಿನ ಉಲ್ಲೇಖವಿದೆ. ಇದು ಮೊದಲಿಗೆ 'ಲುಂಗಿ ಊಟಾ ಕೆ ಪಿಯಾ ಎಂದಿತ್ತು'. ಆದರೆ, ಸುನಿಧಿ ಈ ಲೈನ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅದನ್ನು ಬದಲಾಯಿಸಲಾಯಿತು ಎನ್ನಲಾಗಿದೆ. ಈ ಹಾಡಿನ ಇನ್ನೊಂದು ಲೈನ್ ನಲ್ಲಿದ್ದ ' ಗುಟಕಾ ಚಬಾಕೆ' ಎಂಬ ಪದಗಳ ಬದಲಿಗೆ ಸುನಿಧಿ 'ಬೀಡಾ ಚಬಾಕೆ' ಹಾಕಿಸಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ-Pushpa Box Office Collection:ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಗೆ ಶಾಮೀಲಾದ 'ಪುಷ್ಪಾ'


ಹಾಡಿಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ
ಸುನಿಧಿ ಚೌಹಾಣ್ ಅವರ ಈ ನಡೆಯ ಬಗ್ಗೆ 'ಸಾಮಿ ಸಾಮಿ' ಚಿತ್ರದ ಗೀತರಚನೆಕಾರ ರಕೀಬ್ ಆಲಂ ಹೇಳಿದ್ದಾರೆ. ಈ ಪದಗಳನ್ನು ಬದಲಾಯಿಸಿದ ನಂತರ, ಸುನಿಧಿ ಹಾಡನ್ನು ರೆಕಾರ್ಡ್ ಮಾಡಿದ್ದಾರೆ ಎಂದು ರಕೀಬ್ ಹೇಳಿದ್ದಾರೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ ಮತ್ತು 'ಸಾಮಿ ಸಾಮಿ' ಹಾಡು ಸುನಿಧಿ ಅವರ ಧ್ವನಿಯಲ್ಲಿ ಜನರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಲ್ಲದೇ ಹಾಡಿನಲ್ಲಿ ರಶ್ಮಿಕಾ ಅವರ ಮೂವ್ಸ್ ಕೂಡ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿವೆ.


ಇದನ್ನೂ ಓದಿ-David Warner: ‘ಪುಷ್ಪ’ ಸಿನಿಮಾದಲ್ಲಿ ಕಾಣಿಸಿಕೊಂಡ ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.