Allu Arjun ಅಭಿನಯದ 'Pushpa: The Rise' ಹೊಗಳಿ Cute Cartoon ಬಿಡುಗಡೆ ಮಾಡಿದ Amul

Amul's Viral Cartoon On Pushpa: ಬಾಕ್ಸ್ ಆಫೀಸ್ ನಲ್ಲಿ 'Pushpa: The Rise' ಸಕ್ಸೆಸ್ ನಿಂದ ಪ್ರಭಾವಿತಗೊಂಡ Amul, ಚಿತ್ರಕ್ಕೆ ಸಂಬಂಧಿಸಿದ ಕಾರ್ಟೂನ್ ವೊಂದನ್ನು ರಚಿಸಿ ಶುಭಾಷಯಗಳನ್ನು ಕೋರಿದ್ದು, ಈ ಕಾರ್ಟೂನ್ ಇದೀಗ ಜನರ ಭಾರಿ ಮೆಚ್ಚುಗೆಯನ್ನು ಪಡೆಯುತ್ತಿದೆ. ವಿಶೇಷ ಸಂಗತಿ ಎಂದರೆ, ಅಲ್ಲು ಅರ್ಜುನ್ ಅವರೂ ಕೂಡ ಈ ಕಾರ್ಟೂನ್ ಗೆ ತಮ್ಮ ಕಾಮೆಂಟ್ ಗಳನ್ನು ನೀಡಿದ್ದಾರೆ. 

Written by - Nitin Tabib | Last Updated : Jan 17, 2022, 02:35 PM IST
  • ಪುಷ್ಪಾ ಯಶಸ್ಸಿನ ಕುರಿತು ಕ್ಯೂಟ್ ಕಾರ್ಟೂನ್ ಬಿಡುಗಡೆ ಮಾಡಿದ ಅಮೂಲ್
  • ತನ್ನನ್ನು ತಾನು ತಡೆದುಕೊಳ್ಳಲಾಗದೆ ಕಾಮೆಂಟ್ ಮಾಡಿದ ಅಲ್ಲು ಅರ್ಜುನ್
  • ಪ್ರಸ್ತುತ ಅಮೂಲ್ ನ ಈ ಕಾರ್ಟೂನ್ ಭಾರಿ ವೈರಲ್ ಆಗುತ್ತಿದೆ.
Allu Arjun ಅಭಿನಯದ 'Pushpa: The Rise' ಹೊಗಳಿ Cute Cartoon ಬಿಡುಗಡೆ ಮಾಡಿದ Amul title=
Amul's Viral Cartoon On Pushpa(Courtesy: Amul Twittter Account)

Amul's Viral Cartoon On Pushpa: ಡೈರಿ ಬ್ರಾಂಡ್ ಅಮುಲ್ (Dairy Brand Amul) ಅಲ್ಲು ಅರ್ಜುನ್ ಅಭಿನಯದ ಚಿತ್ರ 'ಪುಷ್ಪ: ದಿ ರೈಸ್' (Pushpa: The Rise) ಗೆ ಸಂಬಂಧಿಸಿದಂತೆ ಮುದ್ದಾದ ಕಾರ್ಟೂನ್ ಅನ್ನು ರಚಿಸಿದೆ. ಈ ಕಾರ್ಟೂನ್ ನಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಂಡಿದ್ದಾರೆ. ಕಾರ್ಟೂನ್‌ನಲ್ಲಿ ಪಾತ್ರವೊಂದು ಅಲ್ಲು ಶೈಲಿಯಲ್ಲಿ ಕುಳಿತು ಕೈಯಲ್ಲಿ ಬೆಣ್ಣೆಯನ್ನು ಹಿಡಿದಿರುವುದನ್ನು ನೀವು ನೋಡಬಹುದು. ಇದೇ ವೇಳೆ ರಶ್ಮಿಕಾ ಲುಕ್‌ನಲ್ಲಿರುವ ಪಾತ್ರವೊಂದು 'ಸಾಮಿ ಸಾಮಿ' ಹಾಡಿನ (Sami Sami Song) ಪೋಸ್‌ನಲ್ಲಿದೆ.

ಅಮುಲ್ ಹಿಟ್ ಆಗಿದ್ದಕ್ಕೆ ಪುಷ್ಪರಾಜ್ ಅವರನ್ನು ಅಭಿನಂದಿಸಿದ ರೀತಿಯನ್ನು ಜನ ಮೆಚ್ಚುತ್ತಿದ್ದಾರೆ. ಇದನ್ನು ನೋಡಿದ ಅಲ್ಲು ಅರ್ಜುನ್ ಕೂಡ ಕಾಮೆಂಟ್ ಮಾಡುವುದರಿಂದ ತನ್ನನ್ನು ತಾನು ತಡೆದಿಲ್ಲ. Allu to Mallu to Amullu Arjun ಎಂದು ಈ ಕಾರ್ಟೂನ್ ಮೇಲೆ ಬರೆಯಲಾಗಿದೆ.

ಈ ಚಿತ್ರ ವಿಶ್ವಾದ್ಯಂತ ಇದುವರೆಗೆ ಸುಮಾರು 300 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂಬುದು ಇಲ್ಲಿ ಗಮನಾರ್ಹ. ಪ್ರಸ್ತುತ ಈ ಚಿತ್ರವು ಅಮೆಜಾನ್ ಪ್ರೈಮ್‌ನಲ್ಲಿ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ. ಸುಮಾರು ನಾಲ್ಕು ವಾರಗಳ ಕಾಲ ಬಾಕ್ಸ್ ಆಫೀಸ್ ಅನ್ನು ಆಳಿದ ಈ ಚಿತ್ರ ಇದೀಗ OTT ನಲ್ಲಿಯೂ ಕೂಡ ಭಾರಿ ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ-Pushpa 2: 'Pushpa: The Rise' ದಾಖಲೆಯ ಗಳಿಕೆಯ ಬಳಿಕ ಸಂಭಾವನೆ ಹೆಚ್ಚಿಸಿದ Rashmika Mandanna, Allu Arjun ಕೇಳಿದ್ದೆಷ್ಟು ಗೊತ್ತಾ?

ಪುಷ್ಪಾಗೆ ಸಿಕ್ಕ ಭಾರಿ ಯಶಸ್ಸಿನಿಂದ ಪುಳಕಿತಗೊಂಡ ಅಲ್ಲು ಅರ್ಜುನ್, ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಭಾವುಕರಾಗಿದ್ದಾರೆ. ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ ಅವರು, ಸುಕುಮಾರ್ ನಿರ್ದೇಶನದಲ್ಲಿ ತಯಾರಾದ 'ಆರ್ಯ' ಚಿತ್ರವು ತಮ್ಮ ಚಲನಚಿತ್ರ ವೃತ್ತಿಜೀವನಕ್ಕೆ  ತಿರುವು ನೀಡಿದೆ ಎಂದಿದ್ದಾರೆ. ಮಾತನಾಡುವ ವೇಳೆ ಭಾವುಕರಾದ ಅಲ್ಲು ಅರ್ಜುನ್, 'ಆರ್ಯ ಇಲ್ಲದೆ ನಾನು ಏನೂ ಅಲ್ಲ. ಸುಕುಮಾರ್ ಇಲ್ಲದೆ ನಾನೇನೂ ಅಲ್ಲ. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಕಾರಿನ ಬಗ್ಗೆಯೂ ಹೇಳಿದ್ದಾರೆ.

ಇದನ್ನೂ ಓದಿ-Pushpa Box Office Collection:ಕೇವಲ ಎರಡೇ ದಿನಗಳಲ್ಲಿ 100 ಕೋಟಿ ಕ್ಲಬ್ ಗೆ ಶಾಮೀಲಾದ 'ಪುಷ್ಪಾ'

'ಆರ್ಯ ಚಿತ್ರ ಬಿಡುಗಡೆಯಾದ ನಂತರ ನಾನು ನನ್ನ ಮೊದಲ ಕಾರನ್ನು ಖರೀದಿಸಿದ್ದು, ಅದರ ಬೆಲೆ ಸುಮಾರು 85 ಲಕ್ಷ ರೂ. ಆ ಸಮಯದಲ್ಲಿ ಡ್ರೈವಿಂಗ್ ಸೀಟಿನಲ್ಲಿ ಕುಳಿತ ಕೂಡಲೇ ನನ್ನ ಕನಸನ್ನು ನನಸಾಗಿಸಲು ನನಗೆ ಬೆಂಬಲ ನೀಡಿದವರು ನೆನಪಾದರು. ಆ ಸಮಯದಲ್ಲಿ ನನ್ನ ನೆನಪಿಗೆ ಬಂದ ಮೊದಲ ವ್ಯಕ್ತಿ ಸುಕುಮಾರ್ (Sukumar). ಸುಕ್ಕು ನೀನಿಲ್ಲದೆ ನಾನೇನೂ ಅಲ್ಲ. ಆರ್ಯ ಇಲ್ಲದೆ ನಾನೇನೂ ಇಲ್ಲ. ನಾನು ಭಾವೋದ್ವೇಗಕ್ಕೆ ಒಳಗಾಗಲು ಬಯಸಲಿಲ್ಲ. ಆದರೆ, ನನ್ನನ್ನು ನಾನು ತಡೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. 

ಇದನ್ನೂ ಓದಿ-Oo Antava Mava: ಕೇವಲ ಮೂರೇ ನಿಮಿಷದ ಐಟಂ ಸಾಂಗ್ ಗಾಗಿ Samantha Ruth ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News