ನವದೆಹಲಿ: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ‘ಪುಷ್ಪ’ ಚಿತ್ರ ಬಿಡುಗಡೆ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. ದೇಶ-ವಿದೇಶಗಳಲ್ಲಿ ಸಖತ್ ಸೌಂಡ್ ಮಾಡಿರುವ ಈ ಚಿತ್ರ ಗಲ್ಲಾಪೆಟ್ಟೆಗೆಯಲ್ಲಿ ಕೊಳ್ಳೆ ಹೊಡೆದಿದೆ.


COMMERCIAL BREAK
SCROLL TO CONTINUE READING

ಪುಷ್ಪ ಸಿನಿಮಾ ಕಥೆ ಜೊತೆಗೆ ಅದರಲ್ಲಿರುವ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದು, ಕೋಟ್ಯಂತರ ಅಭಿಮಾನಿಗಳ ಮನಸ್ಸು ಕದ್ದಿವೆ. ಈ ಸಿನಿಮಾದ ‘ಸಾಮಿ-ಸಾಮಿ’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದ ತಾಂಜಾನಿಯಾದ ಯುವಕ ಕಿಲಿ ಪಾಲ್(Kylie Paul) ಇದೀಗ ಇದೇ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ಗೆ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.


 

 

 

 



 

 

 

 

 

 

 

 

 

 

 

A post shared by Kili Paul (@kili_paul)


ಇದನ್ನೂ ಓದಿ: Shivarajkumar : ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ!


 ಹೌದು, ಹಲವಾರು ಬಾಲಿವುಡ್(Bollywood) ಸಿನಿಮಾಗಳಿಗೆ ಟಿಕ್ ಟಾಕ್ ವಿಡಿಯೋ(TikTok Video) ಮಾಡಿ ಪ್ರಸಿದ್ಧಿಯಾಗಿರುವ ತಾಂಜಾನಿಯಾದ ಕಿಲಿ ಪಾಲ್ ಪುಷ್ಪ ಸಿನಿಮಾದ  Oo Antava..Oo Oo Antava ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಕಿಲಿ ಪಾಲ್ ತನ್ನ ಸಾಂಪ್ರದಾಯಿಕ ಮಸಾಯಿ ಉಡುಪಿನಲ್ಲಿ ಭರ್ಜರಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.


Instagram Reels) ಹಂಚಿಕೊಂಡಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕಿಲಿ ಪಾಲ್ ಡ್ಯಾನ್ಸ್ ಅನೇಕರು ಫಿದಾ ಆಗಿದ್ದು ನೂರಾರು ಜನರು ಲೈಕ್ ಜೊತೆಗೆ ಶೇರ್ ಕೂಡ ಮಾಡಿದ್ದಾರೆ. ಕಿಲಿ ಅವರ ಡ್ಯಾನ್ಸ್​ ಅನ್ನು ಮೆಚ್ಚಿಕೊಂಡಿರುವ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್​ ಮಾಡಿದ್ದಾರೆ.


ಇದನ್ನೂ ಓದಿ: ನಾಯಕತ್ವದಿಂದ ಕೆಳಗಿಳಿದ ಪತಿ ವಿರಾಟ್ ಗೆ 'ಪ್ರೇಮ ಬರಹ' ಬರೆದ ಅನುಷ್ಕಾ ಶರ್ಮಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.