ರಿಲೀಸ್ ಆಗುತ್ತಿದ್ದಂತೆ ಸದ್ದು ಮಾಡುತ್ತಿದೆ ಸುಶಾಂತ್ ಸಿಂಗ್ ರಜಪೂತ್ ಜೀವನಾಧಾರಿತ ಚಿತ್ರ Nyay : The Justice ಟ್ರೇಲರ್
Nyay : The Justice : ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದೆ ಎನ್ನಲಾಗುವ Nyay: The Justice ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸುಶಾಂತ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ನವದೆಹಲಿ : ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಇಹಲೋಕ ತ್ಯಜಿಸಿ ಒಂದು ವರ್ಷವಾಗುತ್ತಿದೆ. ಆದರೆ ಇದುವರೆಗೂ ಅವರ ಸಾವಿನ ರಹಸ್ಯ ಬಹಿರಂಗಗೊಂಡಿಲ್ಲ. ಸಿಬಿಐ (CBI ) ತನಿಖೆ ಮುಂದುವರೆದಿದೆ. ಎನ್‌ಸಿಬಿ (NCB ) ಕೂಡ ಈ ಪ್ರಕರಣದ ಬಗ್ಗೆ ನಿರಂತರವಾಗಿ ವಿಚಾರಣೆ ನಡೆಸುತ್ತಲೇ ಇದೆ. ಈ ಮಧ್ಯೆ, ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿದೆ ಎನ್ನಲಾಗುವ Nyay: The Justice ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಸುಶಾಂತ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಚಿತ್ರ ನಿಷೇಧಕ್ಕೆ ಸುಶಾಂತ್ ಕುಟುಂಬದ ಒತ್ತಾಯ :
ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಆದರೆ ಚಿತ್ರ ಬಿಡುಗಡಗೆ ಸುಶಾಂತ್ (Sushant Singh Rajput) ಕುಟುಂಬ ವಿರೋಧ ವ್ಯಕ್ತಪಡಿಸಿ, ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಜೂನ್ 10 ರಂದು ದೆಹಲಿ ಹೈಕೋರ್ಟ್‌ನ (Delhi high court) ನ್ಯಾಯಮೂರ್ತಿ ಸಂಜೀವ್ ನರುಲಾ ಕುಟುಂಬದ ಈ ಅರ್ಜಿಯನ್ನು ತಿರಸ್ಕರಿಸಿ ತೀರ್ಪು ಪ್ರಕಟಿಸಿದ್ದರು. ಇದಾದ ನಂತರ ಚಿತ್ರ ತಂಡ Nyay: The Justice ಸಿನೆಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ಸುಶಾಂತ್ ಅಭಿಮಾನಿಗಳು ಸೋಶಿಯಲ್ ಮಿಡಿಯಾಗಳಲ್ಲಿ ಚಿತ್ರದ ಟ್ರೇಲರ್ ಅನ್ನು ಶೇರ್ ಮಾಡುತ್ತಿದ್ದಾರೆ. ಟ್ರೇಲರ್ ಗೆ ಉತ್ತಮ ಸ್ಪಂದನೆಯೂ ದೊರೆತಿದೆ.
ಇದನ್ನೂ ಓದಿ : The Kapil Sharma show ನಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆಯೇ ಸುನಿಲ್ ಗ್ರೋವರ್?
Sushanth Death) ಸಂದರ್ಭವನ್ನೇ ನೆನಪಿಸುತ್ತದೆ.
ಚಿತ್ರದಲ್ಲಿ ಜುಬೈರ್ ಖಾನ್ (Zubair khan )ಮತ್ತು ಶ್ರೇಯಾ ಶುಕ್ಲಾ (Shreya Shukla) ಮುಖ್ಯ ಪಾತ್ರದಲ್ಲಿದ್ದಾರೆ. ಇದಲ್ಲದೆ ಅಸ್ರಾನಿ, ಶಕ್ತಿ ಕಪೂರ್, ಅಮನ್ ವರ್ಮಾ ಮುಂತಾದ ಅನೇಕ ಹಿರಿಯ ನಟರು ಅಭಿನಯಿಸಿದ್ದಾರೆ. ಚಿತ್ರವನ್ನು ಸರ್ಲಾ ಎ ಸರೋಗಿ ಮತ್ತು ರಾಹುಲ್ ಶರ್ಮಾ ನಿರ್ಮಿಸಿದ್ದು, ಚಿತ್ರಕ್ಕೆ (Cinema) ದಿಲೀಪ್ ಗುಲಾಟಿ ನಿರ್ದೇಶನವಿದೆ.
ಇದನ್ನೂ ಓದಿ : ನಟಿ ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿರುವ ಆ ನಟ ಯಾರು ಗೊತ್ತಾ?
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ