ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಆಸ್ಟ್ರೇಲಿಯಾದಲ್ಲಿ ಸುಶಾಂತ್ ಸಿಂಗ್ ಸ್ಮರಣಾರ್ಥ ನಿರ್ಮಿಸಲಾದ ಬೆಂಚ್ ಒಂದರ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಬೆಂಚ್ ಮೇಲೆ ಅಂಟಿಸಲಾದ ನಾಮಫಲಕದಲ್ಲಿ ಸುಶಾಂತ್ ಸಿಂಗ್(Sushant Singh Rajput)ರನ್ನ ಖಗೋಳ ವಿಜ್ಞಾನಿ, ಪರಿಸರ ಪ್ರಿಯ ಹಾಗೂ ಮಾನವೀಯ ಗುಣವುಳ್ಳ ವ್ಯಕ್ತಿ ಎಂದು ಬಣ್ಣಿಸಲಾಗಿದೆ.
See Photo- ಇಟಲಿಯಲ್ಲಿ ಟಾಲಿವುಡ್ ಸೂಪರ್ಸ್ಟಾರ್ ರವಿ ತೇಜ ಸ್ಟಂಟ್
ಈ ಫೋಟೋಗಳನ್ನ ಶೇರ್ ಮಾಡಿರುವ ಶ್ವೇತಾ ಸಿಂಗ್(Shweta Sing), ಅವನು ಇನ್ನು ಜೀವಂತವಾಗಿದ್ದಾನೆ. ಆತನ ಹೆಸರು ಜೀವಂತವಾಗಿದೆ. ಆತನ ಕಂಪು ಇನ್ನೂ ಜೀವಂತವಾಗಿದೆ. ಇದು ಶುದ್ಧ ಆತ್ಮವಿರುವವರಿಗೆ ಸಿಗುವ ಫಲಶ್ರುತಿಯಾಗಿದೆ. ನೀವು ದೇವರ ಮಗು. ನೀನು ಎಂದಿಗೂ ಜೀವಂತವಾಗಿರುತ್ತೀಯಾ ಎಂದು ಶೀರ್ಷಿಕೆ ನೀಡಿದ್ದಾರೆ.
Bollywood ನಟ ಅಮೀರ್ ಖಾನ್ ಗೆ ಕರೋನಾ ಸೋಂಕು
ಇತ್ತೀಚಿಗೆ ದಿವಂಗತ ನಟ ಸುಶಾಂತ್ ಸಿಂಗ್ ನಟನೆಯ 'ಚಿಚೋರೆ' ಸಿನಿಮಾ(Chhichhore Movie)ಗೆ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನ ಬೆಸ್ಟ್ ಹಿಂದಿ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ಹಣ್ಣು ಖರೀದಿ ವೇಳೆ Farah Khan ಮಾಡಿರುವ ಎಡವಟ್ಟು ; ವೈರಲ್ ಆಗುತ್ತಿದೆ ವಿಡಿಯೋ
2020ರ ಜೂನ್ 14ರಂದು ಮುಂಬೈ(Mumbai)ನ ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬರುವ ಮೊದಲು ಸುಶಾಂತ್ ಅಭಿನಯದ ಕೊನೆಯ ಚಿತ್ರ 'ಚಿಚೋರೆ'.
Kareena Kapoor: ಎರಡನೇ ಮಗುವಿಗೆ ಜನ್ಮ ನೀಡಿ ತಿಂಗಳಲ್ಲೇ ಕೆಲಸಕ್ಕೆ ಹಾಜರಾದ ಬೆಬೋ
'ಚಿಚೋರೆ' ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದು, ತಿವಾರಿ ಹಾಗೂ ಪಿಯೂಷ್ ಗುಪ್ತಾ ಹಾಗೂ ನಿಖಿಲ್ ಮೆಹ್ರೋತ್ರಾ ಚಿತ್ರಕಥೆ ಬರೆದಿದ್ದರು. ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್, ಶ್ರದ್ಧಾ ಕಪೂರ್(Khraddha Kapoor), ವರುಣ್ ಶರ್ಮಾ, ತಾಹಿರ್ ರಾಜ್ ಭಾಸಿನ್, ನವೀನ್ ಪೊಲಿಶೆಟ್ಟಿ, ತುಷಾರ್ ಪಾಂಡೆ ಹಾಗೂ ಸಹರ್ಷ್ ಕುಮಾರ್ ಶುಕ್ಲಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
National Film Awards 2021 - ರಾಷ್ಟ್ರೀಯ ಪ್ರಶಸ್ತಿ ಪಡೆದು ಭಾವುಕರಾದ Manoj Bajpayee ಹೇಳಿದ್ದೇನು ಗೊತ್ತಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.