Gangubai Kathiawadi Controversy: ಅಲಿಯಾ ಭಟ್ ಸಿನಿಮಾಗೆ ಎದುರಾಯ್ತು ಕಂಟಕ..!! ಸುಪ್ರೀಂಕೋರ್ಟ್ ಹೇಳಿದ್ದೇನು ಗೊತ್ತೇ?
ಬಾಲಿವುಡ್ ನಟಿ ಅಲಿಯಾ ಭಟ್ ನಟಿಸಿರುವ ಚಿತ್ರ ಗಂಗೂಬಾಯಿ ಕಥಿಯಾವಾಡಿ ಈಗ ಬಿಡುಗಡೆಗೂ ಮೊದಲೇ ಸಂಕಷ್ಟವನ್ನು ಎದುರಿಸುತ್ತಿದೆ.
ನವದೆಹಲಿ: ಬಾಲಿವುಡ್ ನಟಿ ಅಲಿಯಾ ಭಟ್ ನಟಿಸಿರುವ ಚಿತ್ರ ಗಂಗೂಬಾಯಿ ಕಥಿಯಾವಾಡಿ ಈಗ ಬಿಡುಗಡೆಗೂ ಮೊದಲೇ ಸಂಕಷ್ಟವನ್ನು ಎದುರಿಸುತ್ತಿದೆ.
ಇದೇ ಶುಕ್ರವಾರದಂದು ಬಿಡುಗಡೆಯಾಗಬೇಕಾಗಿದ್ದ ಈ ಚಿತ್ರಕ್ಕೆ ಈಗ ಚಿತ್ರದ ಟೈಟಲ್ ನ್ನು ಬದಲಾಯಿಸಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ.ಈ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಲು ಕೋರಿ ನ್ಯಾಯಾಲಯಗಳ ಮುಂದೆ ಹಲವಾರು ಪ್ರಕರಣಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಲಹೆಯನ್ನು ನೀಡಿದೆ.
ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'
ಬನ್ಸಾಲಿ ಪ್ರೊಡಕ್ಷನ್ಸ್‌ನ ವಕೀಲ ಸಿದ್ಧಾರ್ಥ ದವೆ ಅವರು ಸಲಹೆಯ ಬಗ್ಗೆ ತಮ್ಮ ಕಕ್ಷಿದಾರರಿಂದ ಸೂಚನೆಗಳನ್ನು ಪಡೆಯುವುದಾಗಿ ಇಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಲಿದೆ.
ಗಂಗೂಬಾಯಿ ಕಥೈವಾಡಿ (Gangubai Kathiawadi) ಮುಂಬೈನ ಕಾಮತಿಪುರದ ನೆರೆಹೊರೆಯಲ್ಲಿ ರಾಜಕೀಯ ಪ್ರಾಮುಖ್ಯತೆಗೆ ಏರಿದ ನಿಜ ಜೀವನದ ಲೈಂಗಿಕ ಕಾರ್ಯಕರ್ತೆಯನ್ನು ಆಧರಿಸಿದೆ.ಗಂಗೂಬಾಯಿಯ ದತ್ತುಪುತ್ರ ಬಾಬು ರಾವ್ಜಿ ಶಾ ಕೂಡ ಇದನ್ನು ವಿರೋಧಿಸಿ ಈಗ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದಾರೆ.
ಗಂಗೂಬಾಯಿ ಕಥಿಯಾವಾಡಿ ಚಿತ್ರದ ಕಥೆಯು ಹುಸೇನ್ ಜೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನಿಂದ ಅಳವಡಿಸಲಾಗಿದೆ ಮತ್ತು ಆಲಿಯಾ ಭಟ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಈ ಚಿತ್ರವು ತನ್ನ ತಾಯಿಗೆ ಅಪಮಾನವನ್ನು ಮಾಡುತ್ತದೆ ಎಂದು ಬಾಬು ರಾವ್ಜಿ ಶಾ ಆರೋಪಿಸಿದ್ದಾರೆ.ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಅವರು ಪ್ರಶ್ನಿಸಿದ್ದಾರೆ.ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರದ ವಿರುದ್ಧ ಮಹಾರಾಷ್ಟ್ರದ ಶಾಸಕ ಅಮೀನ್ ಪಟೇಲ್ ಮತ್ತು ಕಾಮತಿಪುರ ನಿವಾಸಿ ಶ್ರದ್ಧಾ ಸುರ್ವೆ ಸೇರಿದಂತೆ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ.
ಒಂದು ವೇಳೆ ಈಗ ಗಂಗೂಬಾಯಿ ಕಥಿಯಾವಾಡಿ ಹೆಸರು ಬದಲಾವಣೆಗೆ ಒಳಪಟ್ಟರೆ, ಗೋಲಿಯೋನ್ ಕಾ ರಾಸ್ಲೀಲಾ ರಾಮ್-ಲೀಲಾ ಮತ್ತು ಪದ್ಮಾವತ್ ನಂತರ ವಿಭಿನ್ನ ಶೀರ್ಷಿಕೆಯೊಂದಿಗೆ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿಯವರ ಇತರ ಚಿತ್ರಗಳಲ್ಲಿ ಇದು ಇತ್ತೀಚಿನದಾಗಲಿದೆ.
ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ: ಎಚ್ಡಿಕೆ ಆಕ್ರೋಶ
ಚಿತ್ರದ ಟ್ರೇಲರ್‌ನಲ್ಲಿ ಗಂಗೂಬಾಯಿ ಕಥಿಯಾವಾಡಿ ಪಾತ್ರದಲ್ಲಿ ಅವರ ಅಭಿನಯವು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ, ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟಿ ಅಲಿಯಾ ಭಟ್ ಅವರು "ಯಾವುದೇ ವಿವಾದವಾಗಲಿ ಅಥವಾ ಯಾವುದೇ ಕಾಮೆಂಟ್‌ಗಳಾಗಲಿ ನನ್ನನ್ನು ಕಾಡುವುದಿಲ್ಲ.ಒಂದು ಹಂತವನ್ನು ಮೀರಿ ಯಾವುದೂ ನನ್ನನ್ನು ಕಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ.ಚಲನಚಿತ್ರವು ಉತ್ತಮ ಚಲನಚಿತ್ರವಾಗಿದೆಯೇ...ಅಥವಾ ಕೆಟ್ಟ ಚಿತ್ರ ಎನ್ನುವುದು ಮುಖ್ಯವಾಗುವುದಿಲ್ಲ, ಈ ಚಲನಚಿತ್ರವನ್ನು ನೋಡಿದ ನಂತರವೇ ಪ್ರೇಕ್ಷಕರು ತಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.ಮೊದಲು ಅಥವಾ ನಂತರ ಸಂಭವಿಸುವ ಯಾವುದೂ ನಿಜವಾಗಿಯೂ ಅದೃಷ್ಟವನ್ನು ಬದಲಾಯಿಸುವುದಿಲ್ಲ, ”ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.