"ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್

Vijay Prakash: ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಗಾಯಕ ವಿಜಯ್‌ ಪ್ರಕಾಶ್, ಅಪ್ಪು ಸರ್ ನಮ್ಮನ್ನು ಬಿಟ್ಟು ಹೋದಮೇಲೆ ನನಗೆ ಈ ಹಾಡು ಹಾಡಲು ಭಯವಾಗುತ್ತಿತ್ತು ಎಂದಿದ್ದಾರೆ.

Written by - Malathesha M | Edited by - Chetana Devarmani | Last Updated : Feb 23, 2022, 04:32 PM IST
  • ದಶಕಗಳ ಹಿಂದೆ ವರನಟ ಡಾ.ರಾಜ್‌ಕುಮಾರ್‌ ಹಾಡಿದ್ದ ಹಾಡಿನ ಮರುರೂಪ
  • ಈ ಅಂದದ ಹಾಡಿಗೆ ವಿಜಯ್‌‌ ಪ್ರಕಾಶ್‌ ಧ್ವನಿಯಾಗಿದ್ದರು
  • "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ"
  • ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್
"ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್  title=
ವಿಜಯ್‌‌ ಪ್ರಕಾಶ್‌

ಗೊಂಬೆ ಹೇಳುತೈತೆ ಹಾಡು ಕಿವಿಗೆ ಬಿದ್ದರೆ ಸಾಕು ಕನ್ನಡಿಗರು ಒಮ್ಮೆಯಾದರೂ ಆ ಹಾಡನ್ನ ಗುನುಗದೇ ಇರಲಾರರು. ಹೀಗೆ ಕನ್ನಡಿಗರ ಹೃದಯಲ್ಲಿ ಈ ಹಾಡು ಚಿರಂಜೀವಿ. ದಶಕಗಳ ಹಿಂದೆ ವರನಟ ಡಾ.ರಾಜ್‌ಕುಮಾರ್‌ (Rajkumar) ಹಾಡಿದ್ದ ಹಾಡಿನ ಮರುರೂಪ ರಾಜಕುಮಾರ ಸಿನಿಮಾದಲ್ಲಿ ಮೂಡಿಬಂದಿತ್ತು. ಈ ಅಂದದ ಹಾಡಿಗೆ ವಿಜಯ್‌‌ ಪ್ರಕಾಶ್‌ ಧ್ವನಿಯಾಗಿದ್ದರು. "ಆದರೆ ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ ಎಂದಿದ್ದಾರೆ" ವಿಜಯ್‌ ಪ್ರಕಾಶ್.

ಇದನ್ನೂ ಓದಿ: ಹಾಲಿವುಡ್‌ ಅಂಗಳದಲ್ಲೂ ಕನ್ನಡಿಗರು ಮಿಂಚಿಂಗ್..? 'ಕೆಜಿಎಫ್-2'‌ ಇಂಗ್ಲಿಷ್‌ನಲ್ಲೂ ರಿಲೀಸ್..?

ವಿಜಯ್‌ ಪ್ರಕಾಶ್...‌ ಈ ಹೆಸರು ಕೇಳುತ್ತಿದ್ದಂತೆ ಕನ್ನಡದ ಸೂಪರ್‌ ಹಿಟ್‌ ಹಾಡುಗಳು ಕಿವಿಯಲ್ಲಿ ಒಮ್ಮೆ ಗುನುಗಿಬಿಡುತ್ತವೆ. ಅದೆಷ್ಟೋ ಹಿಟ್‌ ಗೀತೆಗಳನ್ನ ಹಾಡಿ, ಕನ್ನಡಿಗರ ಹೃದಯ ಗೆದ್ದಿರುವ ಗಾಯಕ ವಿಜಯ್‌ ಪ್ರಕಾಶ್‌ (Vijay Prakash) ಅವರು, ಗೊಂಬೆ ಹೇಳುತೈತೆ ಹಾಡನ್ನೂ ಹಾಡಿದ್ದರು. ಕನ್ನಡದ ಬ್ಲಾಕ್‌ ಬಸ್ಟರ್‌ ಮೂವಿ ರಾಜಕುಮಾರ ಸಿನಿಮಾದಲ್ಲಿ ಗೊಂಬೆ ಹೇಳುತೈತೆ ಸಾಂಗ್‌ ಹೈಪ್‌ ಕ್ರಿಯೇಟ್‌ ಮಾಡಿತ್ತು. ಆ ಹಾಡಿಗೆ ಧ್ವನಿ ನೀಡಿದ್ದು ಇದೇ ವಿಜಯ್‌ ಪ್ರಕಾಶ್‌ ಅವರು.

ಗೊಂಬೆಯ ಹಾಡು!

ಅಷ್ಟಕ್ಕೂ 70ರ ದಶಕದಲ್ಲಿ ವರನಟ ಡಾ.ರಾಜ್‌ಕುಮಾರ್‌ ಅಭಿನಯಿಸಿದ್ದ ಕಸ್ತೂರಿ ನಿವಾಸ (Kasturi Nivasa) ಸಿನಿಮಾದ ಆಡಿಸಿ ನೋಡು, ಬೀಳಿಸಿ ನೋಡು ಹಾಡು ಮನೆ ಮನೆ ಮಾತಾಗಿತ್ತು. ಇನ್ನೂ ಈ ಹಾಡಿನಲ್ಲಿ ಕಂಡಿದ್ದ ಗೊಂಬೆಯ ಕಥೆಯೇ ಮತ್ತೊಮ್ಮೆ ಹಾಡಿನ ರೂಪದಲ್ಲಿ ಕನ್ನಡಿಗರ ಮನೆ ಹಾಗೂ ಮನ ತಲುಪಿತ್ತು. ರಾಜಕುಮಾರ ಸಿನಿಮಾದಲ್ಲಿ ಆಡಿಸಿ ನೋಡು, ಬೀಳಿಸಿ ನೋಡು ಹಾಡು ಹೊಸ ರೂಪದಲ್ಲಿ ಪ್ರೇಕ್ಷಕರ ಎದುರು ಬಂದಿತ್ತು. ಹೀಗೆ ಅರ್ಥಗರ್ಭಿತ ಗೊಂಬೆ ಹೇಳುತೈತೆ ಸಾಲುಗಳಿಗೆ ವಿಜಯ್‌ ಪ್ರಕಾಶ್‌ ಅವರೇ ಧ್ವನಿಯಾಗಿದ್ದರು.

ಶತಕೋಟಿ ಬಜೆಟ್‌ನ ಚಿತ್ರ ರಾಜಕುಮಾರ ಸಿನಿಮಾದಲ್ಲಿ ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಮಿಂಚಿದ್ದರು. ಅವರ ಅಭಿನಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದರು. ಅದೇ ರೀತಿ ‌ಗಾಯಕ ವಿಜಯ್‌ ಪ್ರಕಾಶ್‌ ಹಾಡಿದ್ದ ಗೊಂಬೆ ಹೇಳುತೈತೆ ಹಾಡಿಗೂ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಪವರ್‌ ಸ್ಟಾರ್‌ ನಮ್ಮನ್ನು ಅಗಲಿದ ನಂತರ ಈ ಹಾಡನ್ನ ಹಾಡಲು ನನಗೆ ಭಯವಾಗುತ್ತಿದೆ ಎಂದಿದ್ದಾರೆ ಗಾಯಕ ವಿಜಯ್‌ ಪ್ರಕಾಶ್.

'ಹಾಡಲು ಭಯವಾಗಿತ್ತು' 

ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಗಾಯಕ ವಿಜಯ್‌ ಪ್ರಕಾಶ್, ಅಪ್ಪು ಸರ್ ನಮ್ಮನ್ನು ಬಿಟ್ಟು ಹೋದಮೇಲೆ ನನಗೆ ಗೊಂಬೆ ಹೇಳುತೈತೆ ಹಾಡು ಹಾಡಲು ಭಯವಾಗುತ್ತಿತ್ತು. ಈ ಹಾಡನ್ನು ಹಾಡೋಕೆ ನನ್ನಿಂದ ಮತ್ತೆ ಸಾಧ್ಯವಾಗುತ್ತಾ ಎಂದುಕೊಂಡಿದ್ದೆ. ಆದರೆ ಈ ಹಾಡು ಹಾಡುವುದು ನನ್ನ ಕರ್ತವ್ಯ. ಹೀಗಾಗಿಯೇ ಫೆಬ್ರವರಿ 19ರಂದು ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೊಂಬೆ ಹೇಳುತೈತೆ ಹಾಡು ಹಾಡಿದೆ ಎಂದಿದ್ದಾರೆ ಗಾಯಕ ವಿಜಯ್‌ ಪ್ರಕಾಶ್‌. ಹಾಗೇ ಈ ಕಾರ್ಯಕ್ರಮದಲ್ಲಿ 3 ಬಾರಿ ಗೊಂಬೆ ಹೇಳುತೈತೆ ಹಾಡು ಹಾಡಿದ್ದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 47 ಮಿಲಿಯನ್ ವ್ಯೂವ್ ಪಡೆದ 'ಬಚ್ಚನ್ ಪಾಂಡೆ' ಟ್ರೈಲರ್.. ಅಕ್ಷಯ್ ಕುಮಾರ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ

ಒಟ್ಟಾರೆ ಪವರಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಮ್ಮಿಂದ ಮರೆಯಾದರೂ ಅವರ ನೆನಪು ಹಾಗೇ ಹಸಿರಾಗಿದೆ. ಅದರಲ್ಲೂ ಗೊಂಬೆ ಹೇಳುತೈತೆ ಹಾಡಿನ ಮೂಲಕ ಅಪ್ಪು ಕನ್ನಡಿಗರಿಗೆ ಪದೇ ಪದೆ ನೆನಪಾಗುತ್ತಾರೆ. ಹಾಗೇ ಅವರ ಸಿನಿಮಾಗಳು, ಆ ಸಿನಿಮಾಗಳ ಮೂಲಕ ಸಮಾಜಕ್ಕೆ ಅವರು ನೀಡಿದ ಸಂದೇಶ ಎಂದೆಂದಿಗೂ ಮರೆಯಾಗದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News