ಬೆಂಗಳೂರು: ನಾಳೆ ಪ್ರೇಮ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಏಕ್‌ ಲವ್‌ ಯಾ’ ರಿಲೀಸ್‌ ಆಗಲಿದ್ದು, ಅಭಿಮಾನಿಗಳ ಕಾತರ ಮತ್ತಷ್ಟು ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ಟ್ರೈಲರ್‌ ಹಾಗೂ ಮೇಕಿಂಗ್‌ ವಿಡಿಯೋಗಳ ಮೂಲಕ ಮತ್ತು ಪೋಸ್ಟರ್‌ಗಳ ಮೂಲಕವೇ ‘ಏಕ್‌ ಲವ್‌ ಯಾ (Ek Love Ya)’ ಸದ್ದು ಮಾಡಿತ್ತು. ನಾಳೆ ಸಿನಿಮಾ ರಿಲೀಸ್‌ ಆಗಲಿದ್ದು, ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದೆ.


ಡೈರೆಕ್ಟರ್‌ ಪ್ರೇಮ್‌ ತಮ್ಮ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿಯೇ ಈ ಬಾರಿ ಪ್ರಮೋಷನ್‌ ಆರಂಭಿಸಿದ್ದರು.ಜೊತೆಗೆ ಟ್ರೈಲರ್‌ ಮೂಲಕ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದ್ದರು. ಹಾಗೇ ಚಿತ್ರದ ಪ್ರಮೋಷನ್‌ ಕೂಡ ಅದ್ಧೂರಿಯಾಗಿ ನಡೆದಿತ್ತು.


ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'


ಹೊಸ ಹುರುಪು…!


ಕೊರೊನಾ ಕಂಟಕಕ್ಕೆ ಬ್ರೇಕ್‌ ಬಿದ್ದಿದ್ದೇ ಬಿದ್ದಿದ್ದು, ಚಂದನವನಕ್ಕೆ ಹೊಸ ಹುರುಪು ಬಂದಿದೆ.ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ.‌ಇದೀಗ ಕನ್ನಡದ ಸ್ಟಾರ್‌ ನಿರ್ದೇಶಕ ಪ್ರೇಮ್‌ ಚಿತ್ರವು ರಿಲೀಸ್‌ಗೆ ಸಿದ್ಧವಾಗಿದೆ.ನಾಳೆ ಪ್ರೇಮ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಏಕ್‌ ಲವ್‌ ಯಾ’ ಬಿಡುಗಡೆಯಾಗಲಿದೆ.


ಇದನ್ನೂ ಓದಿ: ರಾಷ್ಟ್ರೀಯ ಪಕ್ಷಗಳಿಂದ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ: ಎಚ್​ಡಿಕೆ ಆಕ್ರೋಶ


ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ರಾಣಾ, ರಚಿತಾ ರಾಮ್‌ ಹಾಗೂ ರೀಷ್ಮಾ ಕಾಣಿಸಿಕೊಂಡಿದ್ದಾರೆ.ಹಾಗೇ ಚಿತ್ರದ ಮ್ಯೂಸಿಕ್‌ ಸಿನಿಮಾದ ಮೇಲಿನ ನಿರೀಕ್ಷೆ ಭಾರವನ್ನ ಹೆಚ್ಚಿಸಿದೆ.ಒಟ್ಟಾರೆ ಹೇಳೋದಾದ್ರೆ ಡಿಫ್ರೆಂಟ್‌ ಕಥೆ ಹೊತ್ತು, ಚಿತ್ರದ ನಿರ್ದೇಶಕ ಪ್ರೇಮ್‌ ಸ್ಯಾಂಡಲ್‌ವುಡ್‌ಗೆ ಹೊಸ ಪ್ರೇಮಕಥೆ ನೀಡಲು ಸಜ್ಜಾಗಿದ್ದಾರೆ.ಇನ್ನೇನು ಚಿತ್ರ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಪ್ರೇಕ್ಷಕ ಪ್ರಭುವಿನ ಪ್ರತಿಕ್ರಿಯೆ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.