Toolsidas Junior Trailer Release: ಖ್ಯಾತ ಹಿರಿಯ ನಟ ರಾಜೀವ್ ಕಪೂರ್ (Rajeev Kapoor) ಕಳೆದ ವರ್ಷ ಇಹಲೋಕ ತ್ಯಜಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ನಟಿಸಿರುವ ಕೊನೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ, ಇದರಲ್ಲಿ ಪ್ರೇಕ್ಷಕರು ಅವರನ್ನು ಕೊನೆಯ ಬಾರಿಗೆ (Rajeev Kapoor Last Movie) ತೆರೆಯ ಮೇಲೆ ನೋಡಬಹುದು. ರಾಜೀವ್ ಕಪೂರ್ ನಿಧನರಾದ ಒಂದು ವರ್ಷದ ನಂತರ ಅವರ ಚಿತ್ರ 'ತೂಲ್ಸಿದಾಸ್ ಜೂನಿಯರ್' ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೇಲರ್ ಜೊತೆಗೆ ಚಿತ್ರ ಬಿಡುಗಡೆ ದಿನಾಂಕವನ್ನೂ ಸಹ ಪ್ರಕಟಿಸಲಾಗಿದೆ. ‘ತೂಲಸಿದಾಸ್ ಜೂನಿಯರ್’ನಲ್ಲಿ ಅಪ್ಪ-ಮಗನ ಭಾವನಾತ್ಮಕ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರದ ಟ್ರೇಲರ್‌ನಲ್ಲಿ ನಟ ಸಂಜಯ್ ದತ್ ಕೂಡ ಜಬರ್ದಸ್ತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-'ಕೆಜಿಎಫ್-2' ಲೋಕಕ್ಕೆ ಶ್ರುತಿ ಹಾಗೂ ಸುಧಾರಾಣಿ ಎಂಟ್ರಿ ಕೊಟ್ರಾ..?


ಟ್ರೇಲರ್ ವೈರಲ್ ಆಗಿದೆ
ರಾಜೀವ್ ಕಪೂರ್ ಅಭಿನಯದ ‘ತೂಲಸಿದಾಸ್ ಜೂನಿಯರ್’ ಚಿತ್ರದ ಬಗ್ಗೆ ಬಹಳ ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಇದೇ ವೇಳೆ ಈ ಚಿತ್ರದ ಟ್ರೇಲರ್ ಅಂತಿಮವಾಗಿ ಶನಿವಾರ ಬಿಡುಗಡೆಯಾಗಿದೆ. ಟ್ರೈಲರ್‌ನ ಕಥೆ 1994 ರ ಕಲ್ಕತ್ತಾದಿಂದ ಪ್ರಾರಂಭವಾಗುತ್ತದೆ. ರಾಜೀವ್ ತನ್ನ ಮಗನಿಗಾಗಿ ಸ್ನೂಕರ್ ಆಡುತ್ತಾರೆ ಮತ್ತು ಸೋತು ಕುಸಿದು ಬೀಳುತ್ತಾರೆ. ಇದರ ನಂತರ ಅವರ ಮಗ ತನ್ನ ತಂದೆಯನ್ನು ಹೇಗಾದರೂ ಮಾಡಿ ಗೆಲ್ಲಿಸಿಯೇ ತೀರುತ್ತೇನೆ ಎಂದು ನಿರ್ಧರಿಸುತ್ತಾನೆ ಮತ್ತು ಇದರಲ್ಲಿ ನಟ ಸಂಜಯ್ ದತ್ (Sanjay Dutt) ಆ ಮಗುವಿಗೆ ಸಹಾಯ ಮಾಡಲು ತರಬೇತುದಾರರಾಗಿ ಬರುತ್ತಾರೆ. ವೈರಲ್ ಆಗುತ್ತಿರುವ ರಾಜೀವ್ ಕಪೂರ್ ಚಿತ್ರದ ಟ್ರೈಲರ್ ಅನ್ನು ಇಲ್ಲಿ ನೋಡಿ-


ಇದನ್ನೂ ಓದಿ-By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!


 

 

 

 



 

 

 

 

 

 

 

 

 

 

 

A post shared by Sanjay Dutt (@duttsanjay)


ಚಿತ್ರ ಬಿಡುಗಡೆ ಯಾವಾಗ?
ಈ ಚಿತ್ರ ಮಾರ್ಚ್ 4 ರಂದು ಬಿಡುಗಡೆಯಾಗುತ್ತಿದೆ. ಭೂಷಣ್ ಕುಮಾರ್, ಕೃಷ್ಣಕುಮಾರ್, ಅಶುತೋಷ್ ಗೋವಾರಿಕರ್ ಮತ್ತು ಸುನೀತಾ ಗೋವಿರ್ಕರ್ ಅವರ 'ತೂಲಸಿದಾಸ್ ಜೂನಿಯರ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ ಅಭಿಮಾನಿಗಳಿಗೆ ಸಾಕಷ್ಟು ಇಷ್ಟವಾಗುತ್ತಿದೆ. ಸ್ನೂಕರ್ ಆಟವನ್ನು ಆಧರಿಸಿರುವ ಈ ಚಿತ್ರವನ್ನು ಮೃದುಲ್ ನಿರ್ದೇಶಿಸಿದ್ದಾರೆ ಮತ್ತು ಬರೆದಿದ್ದಾರೆ. ಈ ಚಿತ್ರದ ಟ್ರೇಲರ್  ಹಂಚಿಕೊಂಡಿರುವ ನಟ ಸಂಜಯ್ ದತ್, ಕ್ಯಾಪ್ಶನ್ ನಲ್ಲಿ 'ಬಚ್ಚಾ ಹೈ ಫಾಡ್ ದೇಗಾ' ಎಂದು ಬರೆದುಕೊಂಡಿದ್ದಾರೆ. 


ಇದನ್ನೂ ಓದಿ -ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.