'ಕೆಜಿಎಫ್-2' ಲೋಕಕ್ಕೆ ಶ್ರುತಿ ಹಾಗೂ ಸುಧಾರಾಣಿ ಎಂಟ್ರಿ ಕೊಟ್ರಾ..?

'ಕೆಜಿಎಫ್' ಅನ್ನೋ ಹೆಸರಲ್ಲೇ ಕರೆಂಟ್‌ ಇದೆ. 'ಕೆಜಿಎಫ್' ಟೈಟಲ್ ಕೇಳುತ್ತಿದ್ದಂತೆ ಮೈಯಲ್ಲಿ ಕರೆಂಟ್‌ ಪಾಸ್‌ ಆಗೋದು ಪಕ್ಕಾ. ಹೀಗೆ ಇಡೀ ಜಗತ್ತಿನ ಗಮನ ಸೆಳೆದಿರುವ 'ಕೆಜಿಎಫ್-2' ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್‌ ಆಗಲಿದೆ. ಆದರೆ ವಿಚಾರ ಅದಲ್ಲ, ಈಗಾಗಲೇ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿರುವ 'ಕೆಜಿಎಫ್-2' ಲೋಕಕ್ಕೆ ಕನ್ನಡದ ಇಬ್ಬರು ದಿಗ್ಗಜ ನಟಿಯರ ಎಂಟ್ರಿ ಕೂಡ ಆಗಿದೆಯಂತೆ.

Written by - Malathesha M | Edited by - Manjunath N | Last Updated : Feb 18, 2022, 07:20 PM IST
  • ಹೌದು, 'ಕೆಜಿಎಫ್-2' ಸ್ಟಾರ್‌ ಕಾಸ್ಟ್‌ ಹೇಗಿದೆ ಅಂದ್ರೆ ಅದರಲ್ಲಿರುವ ದಿಗ್ಗಜರ ಪಟ್ಟಿ ಬೆಳೆಯುತ್ತಲೇ ಇದೆ.
  • ತೆಲುಗು, ತಮಿಳು ಹಾಗೂ ಹಿಂದಿ ಭಾಷೆ ಕಲಾವಿದರು ಮೇಕಪ್ ಮಾಡಿಕೊಂಡು 'ಕೆಜಿಎಫ್-2' ಅಖಾಡಕ್ಕಿಳಿದಿದ್ದಾರೆ.
  • ಈ ಹೊತ್ತಲ್ಲೇ ಕನ್ನಡದ ದಿಗ್ಗಜ ನಟಿಯರಾದ ಶ್ರುತಿ ಹಾಗೂ ಸುಧಾರಾಣಿ ಕೂಡ 'ಕೆಜಿಎಫ್-2' ಟೀಂಗೆ ಸಾಥ್‌ ನೀಡಿದ್ದಾರೆ.
'ಕೆಜಿಎಫ್-2' ಲೋಕಕ್ಕೆ ಶ್ರುತಿ ಹಾಗೂ ಸುಧಾರಾಣಿ ಎಂಟ್ರಿ ಕೊಟ್ರಾ..? title=

ಬೆಂಗಳೂರು: 'ಕೆಜಿಎಫ್' ಅನ್ನೋ ಹೆಸರಲ್ಲೇ ಕರೆಂಟ್‌ ಇದೆ. 'ಕೆಜಿಎಫ್' ಟೈಟಲ್ ಕೇಳುತ್ತಿದ್ದಂತೆ ಮೈಯಲ್ಲಿ ಕರೆಂಟ್‌ ಪಾಸ್‌ ಆಗೋದು ಪಕ್ಕಾ. ಹೀಗೆ ಇಡೀ ಜಗತ್ತಿನ ಗಮನ ಸೆಳೆದಿರುವ 'ಕೆಜಿಎಫ್-2' ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್‌ ಆಗಲಿದೆ. ಆದರೆ ವಿಚಾರ ಅದಲ್ಲ, ಈಗಾಗಲೇ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿರುವ 'ಕೆಜಿಎಫ್-2' ಲೋಕಕ್ಕೆ ಕನ್ನಡದ ಇಬ್ಬರು ದಿಗ್ಗಜ ನಟಿಯರ ಎಂಟ್ರಿ ಕೂಡ ಆಗಿದೆಯಂತೆ.

ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!

'ಕೆಜಿಎಫ್-1' ಏನೆಲ್ಲಾ ಸಾಧನೆ ಮಾಡಿತ್ತೋ ಅದರ ಹತ್ತರಷ್ಟು 'ಕೆಜಿಎಫ್-2' ಮಾಡುತ್ತೆ ಅನ್ನೋ ಮಾತುಗಳು ಗಾಂಧಿನಗರದ ಗಲ್ಲಿಗಲ್ಲಿಗೂ ಹಬ್ಬಿವೆ. ಈಗಾಗಲೇ ತನ್ನ ಟೀಸರ್‌ ಮೂಲಕವೇ 1 ವರ್ಷದ ಹಿಂದೆ 'ಕೆಜಿಎಫ್-2' ತನ್ನ ತಾಕತ್‌ ಏನು ಅನ್ನೋದನ್ನ ತೋರಿಸಿತ್ತು. ಇದು ಇಡೀ ಜಗತ್ತೇ ಕಾಯುತ್ತಿರುವ ಕನ್ನಡ ಸಿನಿಮಾ ಎಂಬುದು ಕನ್ನಡಿಗರಿಗೂ ಹೆಮ್ಮೆ. ಇಂತಹ ಹೆಮ್ಮೆಯ ಚಿತ್ರಕ್ಕೆ ಒಂದಾನೊಂದು ಕಾಲದ ಕನ್ನಡ ಸಿನಿ ಪ್ರಿಯರ ಮನ ಗೆದ್ದಿದ್ದ ದಿಗ್ಗಜ ನಟಿಯರಿಬ್ಬರು  ಸಾಥ್‌ ನೀಡಿದ್ದಾರಂತೆ. ಯಾರು ಅನ್ನೋದನ್ನ ತಿಳಿಯಲು ಮುಂದೆ ಓದಿ.

'ಕೆಜಿಎಫ್-2'ನಲ್ಲಿ ಶ್ರುತಿ-ಸುಧಾರಾಣಿ

ಹೌದು, 'ಕೆಜಿಎಫ್-2' ಸ್ಟಾರ್‌ ಕಾಸ್ಟ್‌ ಹೇಗಿದೆ ಅಂದ್ರೆ ಅದರಲ್ಲಿರುವ ದಿಗ್ಗಜರ ಪಟ್ಟಿ ಬೆಳೆಯುತ್ತಲೇ ಇದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆ ಕಲಾವಿದರು ಮೇಕಪ್ ಮಾಡಿಕೊಂಡು 'ಕೆಜಿಎಫ್-2' ಅಖಾಡಕ್ಕಿಳಿದಿದ್ದಾರೆ. ಈ ಹೊತ್ತಲ್ಲೇ ಕನ್ನಡದ ದಿಗ್ಗಜ ನಟಿಯರಾದ ಶ್ರುತಿ ಹಾಗೂ ಸುಧಾರಾಣಿ ಕೂಡ 'ಕೆಜಿಎಫ್-2' ಟೀಂಗೆ ಸಾಥ್‌ ನೀಡಿದ್ದಾರೆ.

ಇದನ್ನೂ ಓದಿ: By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!

'ಕೆಜಿಎಫ್-2' ಮೂಲಕ ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟಿರುವ ರವೀನಾ ಟಂಡನ್‌ ಈಗಾಗಲೇ ತಮ್ಮ ಹಿಂದಿ ಡಬ್ಬಿಂಗ್‌ ಮುಗಿಸಿದ್ದಾರೆ. ಆದರೆ ಇವರ ಕನ್ನಡ ವಾಯ್ಸ್‌ಗೆ ಸುಧಾರಾಣಿ ಡಬ್ ಮಾಡಿದ್ದಾರಂತೆ. 'ಕೆಜಿಎಫ್-2' ಚಿತ್ರದಲ್ಲಿ ರವೀನಾ ಭಾರತದ ಪ್ರಧಾನಿಯಾಗಿ 'ರಮಿಕಾ ಸೇನ್' ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ತಮಿಳಿನ ಪೋಷಕ ನಟಿ ಈಶ್ವರಿ ರಾವ್  ಅವರಿಗೆ ಶ್ರುತಿ ವಾಯ್ಸ್‌ ಡಬ್‌ ಮಾಡಿದ್ದಾರಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News