Salmaan Khan: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಬಂದೂಕು ನೀಡಿದ್ದ ಇಬ್ಬರ ಬಂಧನ!!
Firing Near Salmaan Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹತ್ತಿರ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಆರೋಪಿಗಳಿಗೆ ಬಂದೂಕು ನೀಡಿದವರ ಇಬ್ಬರನ್ನು ಮುಂಬೈನ ಪೊಲೀಸರು ಬಂಧಿಸಿದ್ದಾರೆ. ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
Firing Near Salman Khan's Home Case Update: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಮುಂದೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಶೂಟರ್ಸ್‌ಗೆ ಬಂದೂಕು ನೀಡಿದವರ ಬಂಧವವಾಗಿದೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸಲ್ಮಾನ್ ಖಾನ್ ವಾಸವಾಗಿರುವ ಅಪಾರ್ಟ್‌ಮೆಂಟ್ ಮುಂದೆ ಏಪ್ರಿಲ್ 14 ಭಾನುವಾರದಂದು ಗುಂಡಿನ ದಾಳಿ ನಡೆದಿತ್ತು. ವಿಚಾರಣೆಯ ವೇಳೆ ಇಬ್ಬರು ವ್ಯಕಿಗಳ ಬಂಧನವಾಗಿತ್ತು. ಈ ಪ್ರಕರಣದಲ್ಲಿ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಇಬ್ಬರನ್ನು ಬಂಧಿಸಲಾಗಿತ್ತು.
ಗುಂಡಿನ ದಾಳಿ ಪ್ರಕರಣದಲ್ಲಿ ವಿಕ್ಕಿ ಗುಪ್ತಾ ಹಾಗೂ ಸಾಗರ್ ಪಾಲ್ ಇಬ್ಬರು ರೈಲಿನಲ್ಲಿ ಭುಜ್‌ಗೆ ಪರಾರಿಯಾಗುತ್ತಿದ್ದಾಗ ರೈಲ್ವೇ ಸೇತುವೆಯಿಂದ ತಾಪಿ ನದಿಗೆ ಶಸ್ತ್ರಾಸ್ತ್ರವನ್ನು ಎಸೆದಿದ್ದನು ಪೋಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಗುಜರಾತ್‌ನ ಸೂರತ್ ನಗರದ ತಾಪಿ ನದಿಯಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಳಸಲಾದ ಗನ್ ಮತ್ತು ಕೆಲವು ಲೈವ್ ಕಾರ್ಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್ ಮಾಡಿದ ದೊಡ್ಮನೆ ಮಂದಿ!
ಇದೀಗ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳಿಗೆ ಬಂದೂಕು ನೀಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಪೋಲೀಸರು ಪಂಜಾಬ್ ಮೂಲದ ಸೋನು ಸುಭಾಷ್ ಚಂದರ್ (37) ಮತ್ತು ಅನುಜ್ ಥಾಪನ್ (32) ಇಬ್ಬರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇವರಿಬ್ಬರು ಶೂಟರ್‌ಗಳಿಗೆ ಏಪ್ರಿಲ್ 13 ಶನಿವಾರದಂದು ರಾತ್ರಿ ಬಂದೂಕನ್ನು ಹಸ್ತಾಂತರಿಸಿದ್ದರು. ಮರುದಿನ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮೋಟಾರ್‌ಬೈಕ್‌ನಲ್ಲಿ ಬಂದು ಈ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದರು.
ಭಾನುವಾರ ಬೆಳಗ್ಗೆ ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು ಸಲ್ಮಾನ್ ಖಾನ್ ಮನೆಗೆ ಗುಂಡು ಹಾರಿಸಲು ಬಳಸಿದ ಬಂದೂಕನ್ನು ಶೂಟರ್‌ಗಳಿಗೆ ಸರಬರಾಜು ಮಾಡಲಾಗಿತ್ತು. ಇನ್ನೂ ಈ ಆರೋಪಿಗಳನ್ನು ಏಪ್ರಿಲ್ 16 ರಂದು ಮುಂಬೈ ಮತ್ತು ಕಚ್ ಪೊಲೀಸರ ಜಂಟಿ ತಂಡಗಳು ಭುಜ್ ಬಳಿಯ ಮಾತಾ ನೋ ಮಧ್‌ನಲ್ಲಿರುವ ದೇವಾಲಯದ ಆವರಣದಲ್ಲಿ ಬಂಧಿಸಿದೆ. ಮತ್ತೆ ಈ ಶೂಟರ್‌ಗಳಿಗೆ ಬಂದೂಕು ನೀಡಿದವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು ಪಿಸ್ತೂಲ್‌ಗಳನ್ನು ಸರಬರಾಜು ಮಾಡಿದವರನ್ನು ಕೂಡ ಬಂಧಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.