Kabzaa Title Track Kannada : ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʼಕಬ್ಜʼ ಸಿನಿಮಾದ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದೆ. ಇಂಡಿಯನ್‌ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಕಬ್ಬ ಸಿನಿಮಾದ ಮೊದಲ ಹಾಡಿನ ಬಿಡುಗಡೆ ಕಾರ್ಯಕ್ರಮ ಹೈದ್ರಾಬಾದ್‌ನಲ್ಲಿ ನಡೆಯುತ್ತಿದೆ. ಇದರ ಬೆನ್ನಲ್ಲೆ ಆನಂದ ಅಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಿರಿಕಲ್‌ ಹಾಡನ್ನು ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಭಾಯ್‌.. ಭಾಯ್‌.. ಎಂದು ಪ್ರಾರಂಭವಾಗುವ ಹಾಡಿನಲ್ಲಿ ಉಪ್ಪಿ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಬೈಕ್‌ ಮೇಲೆ ವಿಲನ್‌ಗಳ ಡೆಡ್‌ ಬಾಡಿ ಹಾಕಿಕೊಂಡು ಹೋಗುವ ದೃಶ್ಯಗಳು ಖತರ್ನಾಕ್‌ ಎನಿಸುವಂತಿವೆ. ʼದುನಿಯಾನೇ ಮಾಡು ನೀ ಕಬ್ಜಾʼ ಎಂದು ಸಾಂಗ್‌ ಶುರುವಾಗುತ್ತದೆ. ರಿಯಲ್‌ ಸ್ಟಾರ್‌ ಹಾಡಿನಲ್ಲಿ ಗನ್‌ ಹಿಡಿದರು ಅಬ್ಬರಿಸಿದ್ದಾರೆ. ರವಿ ಬಸ್ರೂರು ಕೆಜಿಎಫ್‌ ನಂತರ ಮತ್ತೊಮ್ಮೆ ತಮ್ಮ ಮ್ಯೂಸಿಕ್‌ ನಿಂದ ಕಮಾಲ್‌ ಮಾಡಿದ್ದಾರೆ. 


Pathaan : ಬಾಕ್ಸ್‌ ಆಫೀಸ್‌ನಲ್ಲಿ ʼಕಿಂಗ್‌ʼ ಖಾನ್‌ ಅಬ್ಬರ.. ʼದಂಗಲ್‌ʼಗೆ ಟಕ್ಕರ್‌ ಕೊಟ್ಟ ʼಪಠಾಣ್‌ʼ..!


ಕಬ್ಜಾ ಸಿನಿಮಾಗೆ ಆರ್​. ಚಂದ್ರು ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್​ ಮುಖ್ಯ ಭೂಮಿಕೆ ನಟಿಸಿದ್ದಾರೆ. ಶ್ರೀಯಾ ಶರಣ್​ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನದ ಜೊತೆ ಗೀತೆಗೆ ಅವರೇ ಸಾಹಿತ್ಯ ಬರೆದಿದ್ದಾರೆ. ಮಾರ್ಚ್​ 17 ಪುನೀತ್‌ ರಾಜಕುಮಾರ್‌ ಅವರ ಹುಟ್ಟುಹಬ್ಬದ ದಿನದಂದು ʼಕಬ್ಜʼ ಸಿನಿಮಾ ಬಿಡುಗಡೆ ಆಗಲಿದೆ. 


ಇನ್ನು ಟಾಲಿವುಡ್‌ನಲ್ಲಿಯೂ ಉಪೇಂದ್ರ, ಸುದೀಪ್​ ಹಾಗೂ ಶ್ರೀಯಾ ಶರಣ್​ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ʼಕೆಜಿಎಫ್​: ಚಾಪ್ಟರ್​ 2ʼ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಎಲ್ಲ ಕಾರಣ ಕಬ್ಜಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ದಾಖಲೆ ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.