Pathaan : ಬಾಕ್ಸ್‌ ಆಫೀಸ್‌ನಲ್ಲಿ ʼಕಿಂಗ್‌ʼ ಖಾನ್‌ ಅಬ್ಬರ.. ʼದಂಗಲ್‌ʼಗೆ ಟಕ್ಕರ್‌ ಕೊಟ್ಟ ʼಪಠಾಣ್‌ʼ..!

ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಮತ್ತು ಜಾನ್ ಅಬ್ರಹಾಂ ನಟನೆಯ ಪಠಾಣ್‌ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಪ್ರತಿ ದಿನ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ, ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಈಗ ಅಮೀರ್ ಖಾನ್‌ ʼದಂಗಲ್‌ʼ ಸಿನಿಮಾವನ್ನು ಹಿಂದಿಕ್ಕಿದೆ. ಅಲ್ಲದೆ, ವಿಶ್ವಾದ್ಯಂತ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ.

Written by - Krishna N K | Last Updated : Feb 4, 2023, 06:45 PM IST
  • ಪಠಾಣ್‌ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು.
  • ಅಂದಿನಿಂದ ಪ್ರತಿ ದಿನ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ.
  • ಇದೀಗ ಪಠಾಣ್‌ ಚಿತ್ರವು ಅಮೀರ್ ಖಾನ್ ನಟನೆಯ ದಂಗಲ್ ಅನ್ನು ಹಿಂದಿಕ್ಕಿದೆ.
Pathaan : ಬಾಕ್ಸ್‌ ಆಫೀಸ್‌ನಲ್ಲಿ ʼಕಿಂಗ್‌ʼ ಖಾನ್‌ ಅಬ್ಬರ.. ʼದಂಗಲ್‌ʼಗೆ ಟಕ್ಕರ್‌ ಕೊಟ್ಟ ʼಪಠಾಣ್‌ʼ..! title=

Shah Rukh Khan pathaan boxoffice : ಬಾಲಿವುಡ್‌ ಬಾದ್‌ ಶಾ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಮತ್ತು ಜಾನ್ ಅಬ್ರಹಾಂ ನಟನೆಯ ಪಠಾಣ್‌ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ ಪ್ರತಿ ದಿನ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ, ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಈಗ ಅಮೀರ್ ಖಾನ್‌ ʼದಂಗಲ್‌ʼ ಸಿನಿಮಾವನ್ನು ಹಿಂದಿಕ್ಕಿದೆ. ಅಲ್ಲದೆ, ವಿಶ್ವಾದ್ಯಂತ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ.

ಇನ್ನು ಈ ಕುರಿತು ಯಶ್ ರಾಜ್ ಫಿಲ್ಮ್ಸ್ ತನ್ನಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ. ಪಠಾಣ್‌ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ (ಮೂಲ ಭಾಷೆ) ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದೆ ಎಂದು ಬರೆದುಕೊಂಡಿದೆ. ಬಾಕ್ಸ್ ಆಫೀಸ್ ಬ್ರೇಕ್ ಅಪ್ ಪೋಸ್ಟರ್‌ನಲ್ಲಿ ರೂ 729 ಕೋಟಿ (ವಿಶ್ವಾದ್ಯಂತ $ 88.92 ಮಿಲಿಯನ್) ಎಂದು ತಿಳಿಸಲಾಗಿದೆ. ಈ ಚಿತ್ರವು ಭಾರತದಲ್ಲಿ ರೂ 453 ಕೋಟಿ (ರೂ 378.15 ಕೋಟಿ) ಮತ್ತು ವಿದೇಶದಿಂದ ರೂ 276 ಕೋಟಿ ಗಳಿಕೆ ($ 33.82 ಮಿಲಿಯನ್) ಗಳಿಸಿದೆ.

 
 
 
 

 
 
 
 
 
 
 
 
 
 
 

A post shared by Yash Raj Films (@yrf)

ಇದನ್ನೂ ಓದಿ: ಡಾಲಿ ʼಹೊಯ್ಸಳʼ ಚಿತ್ರಕ್ಕೆ ʼಕೆಂಪೇಗೌಡʼ ಕಿಚ್ಚ್‌ ಸುದೀಪ್‌ ಸಾಥ್‌..!

ಅಂದಹಾಗೆ, ಶಾರುಖ್ ಖಾನ್ ಅಭಿನಯದ ಪಠಾಣ್‌ ಚಿತ್ರವು ಅಮೀರ್ ಖಾನ್ ನಟನೆಯ ದಂಗಲ್ ಅನ್ನು ಹಿಂದಿಕ್ಕಿದೆ. ದಂಗಲ್‌ ಸಿನಿಮಾ BoxOfficeIndia.com ಪ್ರಕಾರ ಹಿಂದಿ ಆವೃತ್ತಿಯಲ್ಲಿಯೇ ವಿಶ್ವದಾದ್ಯಂತ 702 ಕೋಟಿ ರೂ. ಗಳಿಸಿತ್ತು. ಚೀನಾದಲ್ಲಿ ಡಬ್ಬಿಂಗ್ ಆವೃತ್ತಿಯ ಸಂಗ್ರಹವನ್ನು ಗಣನೆಗೆ ತೆಗೆದುಕೊಂಡರೆ, 2016 ರ  ವಿಶ್ವಾದ್ಯಂತ ಒಟ್ಟು 2000 ಕೋಟಿ ರೂಪಾಯಿಗಳನ್ನು ಗಳಿಸಿತ್ತು..́

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News