Hoysala : ಡಾಲಿ ʼಹೊಯ್ಸಳʼ ಚಿತ್ರಕ್ಕೆ ʼಕೆಂಪೇಗೌಡʼ ಕಿಚ್ಚ್‌ ಸುದೀಪ್‌ ಸಾಥ್‌..!

ಸ್ಯಾಂಡಲ್‌ವುಡ್‌ ನಟರಾಕ್ಷಸ ಧನಂಜಯ್ ಅವರ ಬಹುನಿರೀಕ್ಷಿತ 25ನೇ ಸಿನಿಮಾ ಹೊಯ್ಸಳ ಚಿತ್ರತಂಡ ಹೊಸ ಅಪ್‌ಡೆಟ್‌ ನೀಡಿದೆ. ಮಾರ್ಚ್‌ 30ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿನ ಡಾಲಿ ಫಸ್ಟ್‌ ಲುಕ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದ್ದು, ಇದೇ ತಿಂಗಳು (ಫೆ.5) 5ರಂದು ಪಾತ್ರದ ಗ್ಲಿಂಪ್ಸ್‌ ಅನ್ನು ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್‌ ಅವರು ರಿಲೀಸ್‌ ಮಾಡಲಿದ್ದಾರೆ.

Written by - Krishna N K | Last Updated : Feb 4, 2023, 06:22 PM IST
  • ನಟರಾಕ್ಷಸ ಧನಂಜಯ್ ಅವರ ಬಹುನಿರೀಕ್ಷಿತ 25ನೇ ಸಿನಿಮಾ ಹೊಯ್ಸಳ ಚಿತ್ರತಂಡ ಹೊಸ ಅಪ್‌ಡೆಟ್‌ ನೀಡಿದೆ.
  • ಮಾರ್ಚ್‌ 30ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿನ ಡಾಲಿ ಫಸ್ಟ್‌ ಲುಕ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದೆ.
  • ಇದೇ ತಿಂಗಳು (ಫೆ.5) 5ರಂದು ಪಾತ್ರದ ಗ್ಲಿಂಪ್ಸ್‌ ಅನ್ನು ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್‌ ಅವರು ರಿಲೀಸ್‌ ಮಾಡಲಿದ್ದಾರೆ.
Hoysala : ಡಾಲಿ ʼಹೊಯ್ಸಳʼ ಚಿತ್ರಕ್ಕೆ ʼಕೆಂಪೇಗೌಡʼ ಕಿಚ್ಚ್‌ ಸುದೀಪ್‌ ಸಾಥ್‌..! title=

Hoysala movie : ಸ್ಯಾಂಡಲ್‌ವುಡ್‌ ನಟರಾಕ್ಷಸ ಧನಂಜಯ್ ಅವರ ಬಹುನಿರೀಕ್ಷಿತ 25ನೇ ಸಿನಿಮಾ ಹೊಯ್ಸಳ ಚಿತ್ರತಂಡ ಹೊಸ ಅಪ್‌ಡೆಟ್‌ ನೀಡಿದೆ. ಮಾರ್ಚ್‌ 30ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿನ ಡಾಲಿ ಫಸ್ಟ್‌ ಲುಕ್ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸಿದ್ದು, ಇದೇ ತಿಂಗಳು (ಫೆ.5) 5ರಂದು ಪಾತ್ರದ ಗ್ಲಿಂಪ್ಸ್‌ ಅನ್ನು ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್‌ ಅವರು ರಿಲೀಸ್‌ ಮಾಡಲಿದ್ದಾರೆ.

ಯಸ್‌... ಡಾಲಿ ಸಿನಿ ಜರ್ನಿಯಲ್ಲಿ ಹೊಸ ಧಾಖಲೆ ಸೃಷ್ಟಿಸಲು ʼಹೊಯ್ಸಳʼ ಮೂಲಕ ಸಿದ್ದರಾಗಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಮಾರ್ಚ್ 30ರಂದು ತೆರೆ ಮೇಲೆ ಅಪ್ಪಳಿಸಲಿದೆ. ವಿಜಯ್ ಎನ್ ನಿರ್ದೇಶನದ ಈ ಚಿತ್ರಕ್ಕೆ ಕೆಆರ್‌ಜಿ ಸ್ಟುಡಿಯೊಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಪಕ ಕಾರ್ತಿಕ್ ಗೌಡ ಬಂಡವಾಳ ಹೂಡಿದ್ದಾರೆ. ಚಿತ್ರದ ಮೇಲೆ ಡಾಲಿ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಬೆಡ್ ರೂಮಿನಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ರಾ ʼಪದ್ಮಭೂಷಣ ವಾಣಿ ಜಯರಾಮ್ʼ..!?

ಕಳೆದ ವರ್ಷ ತೆರೆಕಂಡ ಧನಂಜಯ್ ನಟನೆಯ ಯಾವ ಚಿತ್ರಗಳು ಅಷ್ಟು ಸೌಂಡ್‌ ಮಾಡಲಿಲ್ಲ. ಇದೀಗ ಗಾಂಧಿನಗರದ ಮಂದಿಯ ಕಣ್ಣು ಹೊಯ್ಸಳದ ಮೇಲೆ ಬಿದ್ದಿದೆ. ಈಗಾಗಲೇ ಧನಂಜಯ್‌ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದು, ಈ ಸಿನಿಮಾ ಸಹ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ಭರವಸೆ ಇದೆ. ಏಕೆಂದ್ರೆ, ಡಾಲಿ ನಟನೆಯ ಟಾಲಿವುಡ್‌ ಪುಷ್ಪಾ ಸಿನಿಮಾ ಬ್ಲಾಕ್ಟಬಸ್ಟರ್‌ ಆಗಿತ್ತು. ಇದೇ ಸಿನಿಮಾ ಸಿಕ್ವೇಲ್‌ನ ಪುಷ್ಪಾ 2 ಬಿಡುಗಡೆಗೆ ರೆಡಿಯಾಗಿದೆ. 

ಸದ್ಯ ಹೊಯ್ಸಳ ಚಿತ್ರದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ʼಗುರುದೇವ್ʼ ಎಂಬ ಪಾತ್ರ ನಿರ್ವಹಿಸಲಿದ್ದಾರೆ. ನಾಳೆ ಇದೇ ಪಾತ್ರದ ಗ್ಲಿಂಪ್ಸ್ ವಿಡಿಯೋವನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 9.27ಕ್ಕೆ ʼಗ್ಲಿಂಪ್ಸ್ ಆಫ್ ಗುರುದೇವ್ʼ ಅನ್ನು ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News