ನವದೆಹಲಿ: ಅಶ್ಲೀಲ ಚಿತ್ರಗಳನ್ನು (ನೀಲಿ ಚಿತ್ರ) ತಯಾರಿಸಿದ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಹಂಚಿಕೆ ಮಾಡಿರುವ ಆರೋಪದ ಮೇರೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಮೇಲೆ ಅನೇಕರು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಕೆಲ ಇಂಟರಷ್ಟಿಂಗ್ ಮಾಹಿತಿಗಳು ಕೂಡ ಹೊರಬೀಳುತ್ತಿವೆ. ಈ ಹಿಂದೆ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ರಾಜ್ ಕುಂದ್ರಾ ತಮ್ಮ ಆದಾಯದ ಬಗ್ಗೆ ಹೇಳಿಕೊಂಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದೇನು..?


ಈ ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ ಜೊತೆಗೆ ರಾಜ್ ಕುಂದ್ರಾ(Raj Kundra) ಕಪಿಲ್ ಶರ್ಮಾ ಶೋ(Kapil Sharma Show)ದಲ್ಲಿ ಭಾಗಿಯಾಗಿದ್ದರು. ಆಗ ಕಪಿಲ್ ಶರ್ಮಾ ಅವರು ರಾಜ್ ಕುಂದ್ರಾ ಅವರ ಆದಾಯ ಮೂಲದ ಬಗ್ಗೆ ಪ್ರಶ್ನಿಸಿದ್ದರು. ‘ನೀವು ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಫುಟ್ ಬಾಲ್ ಆಡುತ್ತೀರಾ, ಆಗಾಗ ವಿದೇಶಿ ಪ್ರವಾಸ ಮಾಡುತ್ತೀರಾ, ಶಿಲ್ಪಾ ಶೆಟ್ಟಿ ಜೊತೆಗೆ ಶಾಪಿಂಗ್ ಹೋಗುತ್ತೀರಾ, ಆದರೆ ಏನು ಮಾಡದೆ ಹಣ ಹೇಗೆ ಸಂಪಾದಿಸುತ್ತಿದ್ದೀರಾ..?’ ಎಂದು ಕಪಿಲ್ ಶರ್ಮಾ ತಮಾಷೆಯಾಗಿ ಕೇಳಿದ್ದರು. ಈ ಪಶ್ನೆಗೆ ಸ್ವತಃ ರಾಜ್ ಕುಂದ್ರಾ ಪಕ್ಕದಲ್ಲಿಯೇ ಕುಳಿತಿದ್ದ ಪತ್ನಿ ಶಿಲ್ಪಾ ಶೆಟ್ಟಿ(Shilpa Shetty), ಶಮಿತಾ ಶೆಟ್ಟಿ ಬಿದ್ದು ಬಿದ್ದು ನಕ್ಕಿದ್ದರು.


Sandalwood StarWars: ಪುಡಂಗಿ ಎಂದ ನಟ ದರ್ಶನ್ ಗೆ ಜೋಗಿ ಪ್ರೇಮ್ ತಿರುಗೇಟು


ಇದೀಗ ಈ ವಿಡಿಯೋ ಕೂಡ ವೈರಲ್(Video Viral) ಆಗಿದ್ದು, ಅನೇಕ ನೆಟಿಜನ್ ಗಳು ರಾಜ್ ಕುಂದ್ರಾರನ್ನು ಟ್ರೋಲ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ‘ನಮ್ಮ ಜೀವನವು ಸರಿಯಾದ ಆಯ್ಕೆಗಳ ಮೇಲೆ ನಿರ್ಧಾರವಾಗಿರುತ್ತದೆ’ ಎಂದು ರಾಜ್ ಕುಂದ್ರಾ ಮಾಡಿರುವ ಇನ್ನೊಂದು ಪೋಸ್ಟ್ ಕೂಡ ವೈರಲ್ ಆಗುತ್ತಿದ್ದು, ಈ ಬಗ್ಗೆ ವಿವಿಧ ರೀತಿಯಲ್ಲಿ ಟ್ರೋಲ್(Troll), ಮೀಮ್ಸ್, ಜೋಕ್ಸ್ ಗಳು ಹರಿದಾಡುತ್ತಿವೆ.


ರಾಜ್ ಕುಂದ್ರಾ ಸದ್ಯ ಪೊಲೀಸ್ ಕಷ್ಟಡಿಯಲ್ಲಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 420(ಚೀಟಿಂಗ್) 34(ಸಾಮಾನ್ಯ ಉದ್ದೇಶ), 292 ಮತ್ತು 293 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತು, ಪ್ರದರ್ಶನಗಳಿಗೆ ಸಂಬಂಧಿಸಿದ) ಸೇರಿ ವಿವಿಧ ಪ್ರಕರಣ ದಾಖಲಿಸಲಾಗಿದೆ. ಅಶ್ಲೀಲ ಚಿತ್ರಗಳನ್ನು (ನೀಲಿ ಚಿತ್ರ) ತಯಾರಿಸಿದ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಹಂಚಿಕೆ ಮಾಡಿರುವ ಪ್ರಕರಣದಲ್ಲಿ ರಾಜ್ ಕುಂದ್ರಾ(Raj Kundra) ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಮತ್ತು ಈ  ಪ್ರಕರಣದಲ್ಲಿ ಅವರೇ ಮುಖ್ಯ ಆರೋಪಿ ಅಂತಾ ಮುಂಬೈ ಪೊಲೀಸ್ ಕಮಿಷನರ್ ಹೇಳಿಕೆ ನೀಡಿದ್ದರು. ವಿಚಾರಣೆ ವೇಳೆ ‘ನಾವು ಮಾಡಿದ್ದು ಬೋಲ್ಡ್ ಸಿನಿಮಾ, ಅದು ಪೋರ್ನ್ ಅಲ್ಲ’ ಅಂತಾ ರಾಜ್ ಕುಂದ್ರಾ ವಾದಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.