Sandalwood StarWars: ಪುಡಂಗಿ ಎಂದ ನಟ ದರ್ಶನ್ ಗೆ ಜೋಗಿ ಪ್ರೇಮ್ ತಿರುಗೇಟು

‘ದರ್ಶನ್ ಅವರೇ ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ ಪುಡಂಗಿನೂ ಅಲ್ಲ. ನನಗೆ ಕೊಂಬು ಇರಲಿಲ್ಲ'.

Written by - Zee Kannada News Desk | Last Updated : Jul 18, 2021, 11:57 AM IST
  • ಪುಡಂಗಿನಾ, ಕೊಂಬು ಇದ್ಯಾ ಎಂದು ಪ್ರಶ್ನಿಸಿದ್ದ ದರ್ಶನ್ ಗೆ ತಿರುಗೇಟು ನೀಡಿದ ಜೋಗಿ ಪ್ರೇಮ್
  • ನಾನು ಯಾವ ಪುಡಂಗಿನೂ ಅಲ್ಲ. ನನಗೆ ಕೊಂಬು ಇಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ
  • ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತನಾಡಿ ಎಂದ ಪ್ರೇಮ್
Sandalwood StarWars: ಪುಡಂಗಿ ಎಂದ ನಟ ದರ್ಶನ್ ಗೆ ಜೋಗಿ ಪ್ರೇಮ್ ತಿರುಗೇಟು title=
ನಟ ದರ್ಶನ್ ಗೆ ಜೋಗಿ ಪ್ರೇಮ್ ತಿರುಗೇಟು (Photo Courtesy: @Darshan Thoogudeepa/Facebook)

ಬೆಂಗಳೂರು: ಪ್ರೇಮ್ ಏನ್ ದೊಡ್ಡ ಪುಡಂಗಿ..? ಅವನಿಗೆ ಎರಡು ಕೊಂಬು ಇದ್ಯಾ ಎಂಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆಗೆ ನಿರ್ದೇಶಕ ಜೋಗಿ ಪ್ರೇಮ್ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಪತ್ರವೊಂದನ್ನು ಟ್ವೀಟ್ ಮಾಡಿರುವ ಅವರು, ‘ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ಸ್ವಲ್ಪ ಯೋಚಿಸಿ ಮಾತನಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.  

‘ದರ್ಶನ್ ಅವರೇ ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ ಪುಡಂಗಿನೂ ಅಲ್ಲ. ನನಗೆ ಕೊಂಬು ಇರಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್(Rajkumar), ವಿಷ್ಣುವರ್ಧನ್, ಅಂಬರೀಶ್ ಹಾಗೂ ರಜನಿಕಾಂತ್ ಅವರು ಒಬ್ಬ ಒಳ್ಳೆಯ ನಿರ್ದೇಶಕ ಎಂದು ಬೆನ್ನುತಟ್ಟಿದ್ದರು. ಇಡೀ ಕರ್ನಾಟಕದ ಜನತೆ ಹರಸಿ ನನಗೆ ಹ್ಯಾಟ್ರಿಕ್ ನಿರ್ದೇಶಕನೆಂಬ ಬಿರುದು ಕೊಟ್ಟಾಗಲೂ ನನ್ನ ಕೊಂಬು ಮೇಲಕ್ಕೇರಲಿಲ್ಲ. ನಾನು ನನ್ನದೇಯಾದ ಸ್ಟೈಲ್ ನಲ್ಲಿ ಸಿನಿಮಾ ಮಾಡಿಕೊಂಡು ಬಂದವನು’ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ಗೌತಮ್ ಬೆನೆಗಲ್ ಇನ್ನಿಲ್ಲ

‘ಅನೇಕ ನಿರ್ಮಾಪಕರು, ನಿರ್ದೇಶಕರು, ನಿಮ್ಮ ಹಾಗೂ ನನ್ನ ಅಭಿಮಾನಿಗಳು ದರ್ಶನ್(Darshan) ಹಾಗೂ ಪ್ರೇಮ್ ಕಾಂಬಿನೇಷನ್ ನಲ್ಲಿ ಯಾವಾಗ ಸಿನಿಮಾ ಬರುತ್ತದೆ ಎಂದು ಕೇಳುತ್ತಿದ್ದರು. ಇದರ ಬಗ್ಗೆ ನಿಮಗೂ ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವು. ನಮ್ಮ ಅಥವಾ ನಿಮ್ಮ ಬ್ಯಾನರ್ ನಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದೇವು. ಆದರೆ ಉಮಾಪತಿಯವರು ನೀವು ಮತ್ತು ದರ್ಶನ್ ಸೇರಿ ನನಗೆ ಸಿನಿಮಾ ಮಾಡಿಕೊಡಿ ಎಂದು ಕೇಳಿದ್ದರು. ಅದಕ್ಕೆ ನಾನು ಉಮಾಪತಿಯವರನ್ನು ನಿಮಗೆ ಪರಿಚಯಿಸಿದೆ. 3 ಜನ ಸೇರಿ ಸಿನಿಮಾ ಮಾಡೋಣವೆಂದು ಡಿಸೈಡ್ ಮಾಡಿದ್ದೇವು. ಆದರೆ ನನ್ನ ‘ದಿ ವಿಲನ್’ ಸಿನಿಮಾ ಲೇಟ್ ಆಗಿದ್ದಕ್ಕೆ ನಾನೇ ಉಮಾಪತಿಯವರಿಗೆ ದರ್ಶನ್ ಅವರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರ ಜೊತೆ ಸಿನಿಮಾ ಮಾಡಿ ಎಂದು ಹೇಳಿದ್ದೆ. ನನ್ನ ಸಂಭಾವನೆಯನ್ನು ಉಮಾಪತಿಯವರಿಗೆ ವಾಪಸ್ ನೀಡಿ ರಾಬರ್ಟ್ ಸಿನಿಮಾಗೆ ಹಾರೈಸಿದ್ದೆ. ರಾಬರ್ಟ್ ಸಿನಿಮಾ ಹಿಟ್ ಆಯ್ತು. ಎಲ್ಲರ ಹಾಗೆ ನಾನು ಖುಷಿಪಟ್ಟೆ’ ಎಂದಿದ್ದಾರೆ.  

ಇದನ್ನೂ ಓದಿ: Bhushan Kumar: T-Series ಕಂಪನಿಯ MD Bhushan Kumar ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

‘ಇದರ ಮಧ್ಯೆ ನನ್ನ ಹೆಸರು ಏಕೆ ಎಂದು ಪ್ರಶ್ನಿಸಿರುವ ಪ್ರೇಮ್(Prem), ದರ್ಶನ್ ಅವರರೇ ನಿರ್ದೇಶಕರು ಯಾವ ಪುಡಂಗಿಗಳು ಅಲ್ಲ. ಅವರಿಗೆ ಯಾವ ಕೊಂಬು ಇರುವುದಿಲ್ಲ. ತೆರೆಮೇಲೆ ಒಬ್ಬ ನಟನನ್ನು ಹುಟ್ಟುಹಾಕಿ  ಅವನಿಗೆ ಕೊಂಬು ಬರಬೇಕಾದರೆ ನಿರ್ದೇಶಕರ ಶ್ರಮ ಎಷ್ಟಿರುತ್ತದೆ ಅಂತಾ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದೂ ನಿಮಗೂ ಗೊತ್ತಿದೆ. ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತನಾಡಿ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಪ್ರೇಮ್ ಪ್ರತದಲ್ಲಿ ಮನವಿ ಮಾಡಿಕೊಂಡಿದ್ದಾರೆ.   

ಅಷ್ಟಕ್ಕೂ ಪ್ರೇಮ್ ವಿರುದ್ಧ ದರ್ಶನ್ ಹೇಳಿದ್ದಾದರೂ ಏನು..?

25 ಕೋಟಿ ರೂ. ಆಸ್ತಿ ಫೋರ್ಜರಿ ಕೇಸ್‌ ಮತ್ತು ಇಂದ್ರಜಿತ್ ಲಂಕೇಶ್(Indrajit Lankesh) ಹೇಳಿಕೆಗೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡುತ್ತಿದ್ದ ವೇಳೆ ದರ್ಶನ್, ಈ ಪ್ರಕರಣ ದೊಡ್ಮನೆ ಕಡೆ ತಿರುಗುತ್ತಿದೆ ಎಂದು ಗರಂ ಆಗಿದ್ದರು. ಈ ವೇಳೆ ಜೋಗಿ ಪ್ರೇಮ್ ವಿರುದ್ಧ ಪುಡಂಗಿ ಪದ ಪ್ರಯೋಗ ಮಾಡಿದ್ದರು.   

ಇದನ್ನೂ ಓದಿ: ಮೈಸೂರಿನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹಲ್ಲೆ: ಇಂದ್ರಜಿತ್ ಲಂಕೇಶ್ ದೂರು

‘ನಿರ್ಮಾಪಕ ಉಮಾಪತಿ(Umapati Dasappa) 2016ರಿಂದ ನನಗೆ ಪರಿಚಯ. ಜೋಗಿ ಪ್ರೇಮ್ ಅವರೇ ಉಮಾಪತಿಯವರನ್ನು ನನಗೆ ಪರಿಚಯಿಸಿದ್ದರು. ಪ್ರೇಮ್ ಮತ್ತು ಉಮಾಪತಿ ನನ್ನ ಮನಗೆ ಬಂದು ಸಿನಿಮಾ ಮಾಡೋಣ ಎಂದಿದ್ದರು. ನಾವು 3 ಜನ ಸೇರಿ ಸಿನಿಮಾ ಬಗ್ಗೆ ಮಾತನಾಡಿದ್ದೇವು. ನಾನು ಯಾರಿಗೇ ಆಗಲಿ 70 ದಿನದ ಮೇಲೆ ಸಿನಿಮಾ ಡೇಟ್ಸ್ ಕೊಡುವುದಿಲ್ಲವೆಂದು ಹೇಳಿದ್ದೆ. ಪ್ರೇಮ್ ಗೋಸ್ಕರ ದರ್ಶನ್ 100 ದಿನ ಡೇಟ್ಸ್ ಕೊಡುತ್ತಾರೆಂದು ಸುದ್ದಿಯಾಗಿತ್ತು. ಈ ಸುದ್ದಿಯನ್ನು ಯಾರು ಹೊರಗಡೆ ಬಿಟ್ಟಿದ್ದು ಎಂದು ನಾನು ಕೇಳಿದೆ. ಪ್ರೇಮ್ ಗೋಸ್ಕರ ದರ್ಶನ್ ಅಂತಾ ಹೇಳ್ತಾರೆ. ಪ್ರೇಮ್ ಏನ್ ದೊಡ್ಡ ಪುಡಂಗಿನಾ? ಅವನಿಗೆ ಎರಡು ಕೊಂಬು ಇದ್ಯಾ..? ಕರಿಯ ಸಿನಿಮಾ ಮಾಡಬೇಕಾದರೆ ನಾವು ಪ್ರೇಮ್ ಏನು ಅಂತಾ ನೋಡಿದ್ದೇವೆ’ ಎಂದು ದರ್ಶನ್ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News