ವಿಜಯಲಕ್ಷ್ಮೀ ದರ್ಶನ್ ಕೇವಲ ಅತ್ತಿಗೆ ಮಾತ್ರ ಅಲ್ಲ... ನಾವೇ ಲಕ್ಕಿ ಎಂದಿದ್ದೇಕೆ ದಿನಕರ್ ತೂಗುದೀಪ...
Dinakar Thoogudeepa Vijayalakshmi Darshan: ದರ್ಶನ್ ಮತ್ತು ದಿನಕರ್ ಬೇರೆಯಾಗಿದ್ದಾರೆ, ಅವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೋ? ಇಲ್ಲವೋ? ಎಂಬಿತ್ಯಾದಿ ಚರ್ಚೆಯಾಗಿತ್ತು.
Dinakar Thoogudeepa Vijayalakshmi Darshan: ಇತ್ತೀಚಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಬಿಡುಗಡೆಗೆ ಅವರ ಪತ್ನಿ ವಿಜಯಲಕ್ಷ್ಮೀ ಜೈಲು, ಕೋರ್ಟು, ಗುಡಿ-ಗುಂಡಾರಗಳನ್ನು ಸುತ್ತಿ ಹೈರಾಣವಾಗಿದ್ದರು. ತಮ್ಮ ಕುಟುಂಬಕ್ಕೆ ವಿಜಯಲಕ್ಷ್ಮೀ ಏನೆಲ್ಲಾ ಮಾಡಿದ್ದಾರೆ? ಎಂಬುದನ್ನು ಅವರ ಮೈದುನ ದಿನಕರ ತೂಗುದೀಪ ವಿವರಿಸಿದ್ದಾರೆ.
ದರ್ಶನ್ ಜೈಲಿನಲ್ಲಿದ್ದಾಗ ದಿನಕರ್ ಹೆಚ್ಚು ಮಾತನಾಡಲಿಲ್ಲ, ಹೆಚ್ಚು ಕಾಣಿಸಿಕೊಳ್ಳಲಿಲ್ಲ, ಅವರಿಬ್ಬರು ಬೇರೆಯಾಗಿದ್ದಾರೆ, ಮುಂದೆ ದರ್ಶನ್ ಮತ್ತು ದಿನಕರ್ ಒಟ್ಟಿಗೆ ಸಿನಿಮಾ ಮಾಡುತ್ತಾರೋ? ಇಲ್ಲವೋ? ಎಂಬಿತ್ಯಾದಿ ನಾನಾ ರೀತಿಯ ಮಾತುಗಳು ಕೇಳಿಬಂದಿದ್ದವು. ಇವುಗಳ ಬಗ್ಗೆ ಈಗ ದಿನಕರ ತೂಗುದೀಪ ಮಾತನಾಡಿದ್ದಾರೆ.
ಇದನ್ನೂ ಓದಿ- ಅಲ್ಲು ಅರ್ಜುನ್ ಜಾತಕದ ಬಗ್ಗೆ ಖ್ಯಾತ ಜ್ಯೋತಿಷಿಯಿಂದ ಸ್ಫೋಟಕ ಭವಿಷ್ಯ.! ಅಭಿಮಾನಿಗಳ ಎದೆಯಲ್ಲಿ ಢವ ಢವ..!
ಮೊದಲನೆಯದಾಗಿ ದರ್ಶನ್ ಮತ್ತು ನಾನು ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ಹೇಳಿದ ದಿನಕರ್ ತೂಗುದೀಪ, ಇದರ ನಂತರ ಅತ್ತಿಗೆ ವಿಜಯಲಕ್ಷ್ಮೀ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರು ಕೇವಲ ಅತ್ತಿಗೆ-ಮೈದುನ ಅಲ್ಲ. ಅದಕ್ಕಿಂತ ಹೆಚ್ಚಾಗಿ ಫ್ರೆಂಡ್ಸ್. ದರ್ಶನ್ ಅಂತಾ ಹೆಂಡತಿ ಪಡೆಯಲು, ನಮ್ಮಮ್ಮ ಅಂತಾ ಸೊಸೆ ಪಡೆಯಲು ಮತ್ತು ನನಗೆ ಅಂತಾ ಅತ್ತಿಗೆ ಸಿಗಲು ಅದೃಷ್ಟ ಕಾರಣ ಅಂತಾ ಹೇಳಿದ್ದಾರೆ.
ಇದನ್ನೂ ಓದಿ- ಮಗಳು ದುವಾ ಜೊತೆ ಮೊದಲ ಕ್ರಿಸ್ಮಸ್ ಆಚರಣೆ: ಫೋಟೋ ಶೇರ್ ಮಾಡಿದ ದೀಪಿಕಾ ಪಡುಕೋಣೆ!
ನಾನು ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಕಿತ್ತಾಡುವುದು ಅತ್ತಿಗೆ ವಿಜಯಲಕ್ಷ್ಮೀ ಜೊತೆ. ನಾವಿಬ್ಬರು ಜಗಳ ಮಾಡ್ಕೋತೀವಿ, ಅರ್ಧಗಂಟೆಯಲ್ಲಿ ಮತ್ತೆ ಒಂದಾಗ್ತಿವಿ. ನಾನು ಮತ್ತು ಅವರು ಜಗಳವಾಡುತ್ತಿದ್ದರೆ ನಮ್ಮ ಮನೆಯಲ್ಲಿ ಬೇರೆಯವರು ಯಾರು ಮಧ್ಯ ಬರಲ್ಲ, ಈಗ ಕಿತ್ತಾಡ್ತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಒಂದಾಗ್ತಾರೆ ಅಂತಾ ಸುಮ್ಮನಿರುತ್ತಾರೆ ಎಂದು ತಮ್ಮ ಮತ್ತು ಅತ್ತಿಗೆ ನಡುವಿನ ಸುಮಧುರ ಸಂಬಂಧವನ್ನು ಬಿಡಿಸಿ ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.