Instagram That's Not My Name Trend - ನೀವು ಯಾವುದೇ ಬಾಲಿವುಡ್ ನಟನ ಸಂಪೂರ್ಣ ವೃತ್ತಿಜೀವನದ ಒಂದು ನೋಟವನ್ನು ಹೊಂದಲು ಬಯಸಿದರೆ ನೀವು ಏನು ಮಾಡುತ್ತೀರಿ? ಬಹುಶಃ ಅವರ ಎಲ್ಲಾ ಚಲನಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸುವಿರಿ. ಅಥವಾ ಗೂಗಲ್‌ನಲ್ಲಿ ಅವರ ಫಿಲ್ಮೋಗ್ರಾಫಿಯನ್ನು ಹುಡುಕಿ. ಅಥವಾ YouTube ನಲ್ಲಿ ಅವರ ವೀಡಿಯೊಗಳನ್ನು ವೀಕ್ಷಿಸುವಿರಿ. ಈಗ ಈ ರೀತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಕಾರಣ ಇನ್ಸ್ಟಾಗ್ರಾಮ್ (Instagram Viral Trend) ನಲ್ಲಿ ವೈರಲ್ ಆಗುತ್ತಿರುವ ಹೊಸ ಟ್ರೆಂಡ್. ಈ ಟ್ರೆಂಡ್‌ನಲ್ಲಿ ಸ್ವತಃ ಬಾಲಿವುಡ್ ಸೆಲೆಬ್ರಿಟಿಗಳೂ ಭಾಗಿಯಾಗಿದ್ದಾರೆ. ಈ  ಟ್ರೆಂಡ್ ಹೆಸರು- 'ಅದು ನನ್ನ ಹೆಸರಲ್ಲ' ಅಂದರೆ 'That's Not My Name'.


COMMERCIAL BREAK
SCROLL TO CONTINUE READING

ಸಾರಾ ಅಲಿ ಖಾನ್‌ನಿಂದ ಆಯುಷ್ಮಾನ್ ಖುರಾನಾ ಮತ್ತು ದೀಪಿಕಾ ಪಡುಕೋಣೆವರೆಗೆ ಈ ಟ್ರೆಂಡ್‌ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದಾರೆ. ವಾಸ್ತವದಲ್ಲಿ ಈ ಟ್ರೆಂಡ್ ಮೂಲಕ, ಬಾಲಿವುಡ್ ತಾರೆಯರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಿಂದ ಇಲ್ಲಿಯವರೆಗೆ ರೀಲ್‌ನಲ್ಲಿ ನಟಿಸಿದ ಎಲ್ಲಾ ಪಾತ್ರಗಳ ಶಾಟ್‌ಗಳು ಮತ್ತು ಆವಳ ಹೆಸರನ್ನು ಪೋಸ್ಟ್ ಮಾಡುತ್ತಾರೆ. ಇದರೊಂದಿಗೆ, ಅಭಿಮಾನಿಗಳು ಕೂಡ  ತಮ್ಮ ನೆಚ್ಚಿನ ತಾರೆಯ ಚಲನಚಿತ್ರ ಪ್ರಯಾಣವನ್ನು ಒಂದೇ ಬಾರಿಗೆ ಕೆಲವೇ ಸೆಕೆಂಡುಗಳಲ್ಲಿ ನೋಡಬಹುದು.


ಸಾರಾ ಅಲಿ ಖಾನ್ (Sara Ali Khane) ಈ ರೀಲ್‌ನಲ್ಲಿ ಕೇದಾರನಾಥ ಚಿತ್ರದ ಮುಕ್ಕು ಪಾತ್ರ ಮತ್ತು ಅತರಂಗಿ ರೇ ಚಿತ್ರದ ರಿಂಕುವಿನ ಪ್ರಯಾಣವನ್ನು ಸೇರಿಸಿದ್ದು ಮಾತ್ರವಲ್ಲದೆ, ಅವರ ಮುಂಬರುವ ಚಿತ್ರದ ಪಾತ್ರದ ಹೆಸರನ್ನು ಸಹ ಈ ರೀಲ್ ಮೂಲಕ ಬಹಿರಂಗಪಡಿಸಿದ್ದಾರೆ, ಅದು ಸೌಮ್ಯಾ.


ಆಯುಷ್ಮಾನ್ ಖುರಾನಾ (Ayushmann Khurrana) ಕೂಡ ಟ್ರೆಂಡಿಂಗ್ ರೀಲ್‌ಗಳ ವಿಷಯದಲ್ಲಿ ಯಾರಿಗೇನು ಕಮ್ಮಿ ಇಲ್ಲ.  ಅವರೂ ಕೂಡ ಈ ರೀಲ್ ಮೂಲಕ 'ವಿಕ್ಕಿ ಡೋನರ್‌'ನ ವಿಕ್ಕಿ ಅರೋರಾದಿಂದ 'ಚಂಡೀಗಢ ಕರೇ ಆಶಿಕಿ'ಯ ಮನು ಮುಂಜಾಲ್‌ ವರೆಗಿನ ಪಾತ್ರಗಳನ್ನು ಪರಿಚಯಿಸಿದ್ದಾರೆ.


ಇದನ್ನೂ ಓದಿ-‘ಕೆಜಿಎಫ್‌-2ʼ ನಟಿಯಿಂದ ಬಿಗ್‌ ಅಪ್‌ಡೇಟ್..! ಕನ್ನಡದ ಸಿನಿಮಾಗಾಗಿ ಕಾಯುತ್ತಿದೆ ಜಗತ್ತು..!


ದೀಪಿಕಾ ಪಡುಕೋಣೆ (Deepika Padukone) ಕೂಡ ತಮ್ಮ ರೀಲ್‌ನಲ್ಲಿ 'ಓಂ ಶಾಂತಿ ಓಂ'ನ ಶಾಂತಿಪ್ರಿಯಾದಿಂದ 'ಗೆಹೆರಾಯಿಯಾ' ಅಲಿಶಾದವರೆಗೆ ಎಲ್ಲಾ ಪಾತ್ರಗಳನ್ನು ನೆನಪಿಸಿದ್ದಾರೆ. 


ಇದನ್ನೂ ಓದಿ-Cinema Theatres : ಸಿನಿ ರಸಿಕರಿಗೆ 'ಶುಭ ಶುಕ್ರವಾರ' : ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಅವಕಾಶ!


ಇದರಿಂದ ಬಾಲಿವುಡ್ ಸ್ಟಾರ್ಸ್ ಗಳಿಗೂ ತನ್ನ ಅಭಿಮಾನಿಗಳಿಗೆ ಒಂದು ಒಳ್ಳೆಯ ಟ್ರೀಟ್ ನೀಡುವ ಅಥವಾ ತಮ್ಮ ವೃತ್ತಿಬದುಕಿನ ಪಯಣದ ಮೇಲೆ ಕಣ್ಣು ಹಾಯಿಸುವ ಅವಕಾಶ ಸಿಕ್ಕಿದೆ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ-Rashmika ಗೆ ಟ್ರೋಲ್‌ ಕಾಟ..! ʼಲೆಜೆಂಡ್‌ʼ ಬಾಯಲ್ಲಿ ಕನ್ನಡ ಕವನ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.