‘ಕೆಜಿಎಫ್‌-2ʼ ನಟಿಯಿಂದ ಬಿಗ್‌ ಅಪ್‌ಡೇಟ್..! ಕನ್ನಡದ ಸಿನಿಮಾಗಾಗಿ ಕಾಯುತ್ತಿದೆ ಜಗತ್ತು..!

‘ಕೆಜಿಎಫ್‌-2ʼ ಡಬ್ಬಿಂಗ್ ಕೆಲಸ ಮುಗಿಸಿರುವ ಸಿಹಿ ಸುದ್ದಿಯನ್ನು ಸ್ವತಃ ನಟಿ ಶ್ರೀನಿಧಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Written by - Malathesha M | Last Updated : Feb 23, 2022, 06:20 PM IST
  • ‘ಕೆಜಿಎಫ್-2’ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಿಕ್ತು ಬಿಗ್ ಅಪ್‌ಡೇಟ್
  • ‘ಕೆಜಿಎಫ್‌-2ʼ ಡಬ್ಬಿಂಗ್ ಕೆಲಸ ಮುಗಿಸಿರುವ ಸಿಹಿಸುದ್ದಿ ತಿಳಿಸಿದ ನಟಿ ಶ್ರೀನಿಧಿ ಶೆಟ್ಟಿ
  • ನಿಮ್ಮನ್ನೆಲ್ಲ ಏಪ್ರಿಲ್ 14ರಂದು ಭೇಟಿ ಆಗಲಿದ್ದೇನೆ ಅಂತಾ ಶ್ರೀನಿಧಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌
‘ಕೆಜಿಎಫ್‌-2ʼ ನಟಿಯಿಂದ ಬಿಗ್‌ ಅಪ್‌ಡೇಟ್..! ಕನ್ನಡದ ಸಿನಿಮಾಗಾಗಿ ಕಾಯುತ್ತಿದೆ ಜಗತ್ತು..! title=
‘ಕೆಜಿಎಫ್-2’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್

ಬೆಂಗಳೂರು: ‘ಕೆಜಿಎಫ್‌-1ʼ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಊಹೆಗೂ ಮೀರಿ ʼಕೆಜಿಎಫ್‌-1ʼ ಸೂಪರ್ ಡೂಪರ್ ಹಿಟ್‌ ಆಗಿತ್ತು. ಹೀಗಾಗಿ ವರ್ಲ್ಡ್‌ ವೈಡ್ ನೂರಾರು ಕೋಟಿ ಅಭಿಮಾನಿಗಳು ಕೆಜಿಎಫ್‌ ಸೀಕ್ವೆಲ್‌(KGF Chapter 2)ಗೆ ಕಾಯ್ತಿದ್ದಾರೆ. ಈ ಹೊತ್ತಲ್ಲೇ ‘ಕೆಜಿಎಫ್‌-2ʼ ಕುರಿತು ಬಿಗ್‌ ಅಪ್ಡೇಟ್‌ ಸಿಕ್ಕಿದೆ. ಅದು ಏನು ಅಂತೀರಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕೆಜಿಎಫ್..‌. ಈ ಹೆಸರಿನಲ್ಲಿಯೇ ಒಂದು ಗತ್ತಿದೆ... ‘ಕೆಜಿಎಫ್‌’‌ ಪೋಸ್ಟರ್‌ಗಳ ಲುಕ್‌ ಅಲ್ಲೇ ಒಂದು ಸೆಳೆತವಿದೆ. 3 ವರ್ಷದ ಹಿಂದೆ ರಿಲೀಸ್‌ ಆಗಿದ್ದ ʼಕೆಜಿಎಫ್‌-1ʼ ಜಗತ್ತಿನಾದ್ಯಂತ ದೊಡ್ಡ ಹಿಟ್‌ ಕಂಡು ಗಲ್ಲಾ ಪೆಟ್ಟಿಗೆಯನ್ನೇ ಉಡೀಸ್‌ ಮಾಡಿತ್ತು. ಹೀಗೆ ‘ಕೆಜಿಎಫ್‌-1ʼ ಕ್ಲೈಮ್ಯಾಕ್ಸ್‌ ನಲ್ಲೇ ಪಾರ್ಟ್‌ 2 ಬಗ್ಗೆ ಹಿಂಟ್‌ ಕೊಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ‘ಕೆಜಿಎಫ್‌-2ʼ(KGF-2) ಕಣ್ತುಂಬಿಕೊಳ್ಳಲು ತುದಿಗಾಲ ಮೇಲೆ ನಿಂತು ಕಾತುರದಿಂದ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಯಾವಾಗ ಸಿನಿಮಾ ರಿಲೀಸ್ ಆಗುತ್ತೋ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ.

ಇದನ್ನೂ ಓದಿ: Cinema Theatres : ಸಿನಿ ರಸಿಕರಿಗೆ 'ಶುಭ ಶುಕ್ರವಾರ' : ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಅವಕಾಶ!

ನಟಿಯ ಡಬ್ಬಿಂಗ್‌ ಕಂಪ್ಲೀಟ್

ಅಂದಹಾಗೆ ‘ಕೆಜಿಎಫ್-2’ ಸಿನಿಮಾ ಏಪ್ರಿಲ್ 14ರಂದು ರಿಲೀಸ್‌(KGF 2 Release Date) ಆಗ್ತಿರೋದು ಈಗಾಗಲೇ ತಿಳಿದಿರೋ ಸಂಗತಿ. ಹೀಗೆ ರಿಲೀಸ್‌ ಡೇಟ್‌ ಹತ್ತಿರ, ಹತ್ತಿರ ಬರ್ತಿರೋ ಹಾಗೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಫಾಸ್ಟ್‌ ಆಗಿ ಮುಗಿಸುತ್ತಿದೆ ಚಿತ್ರತಂಡ. ಇದೀಗ ರಾಕಿಭಾಯ್ ಬೆಡಗಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಕೆಲಸವೂ ಪೂರ್ಣಗೊಂಡಿದೆಯಂತೆ.‌

ಸಂತಸದ ಸಂಗತಿ..!

ಅದ್ಭುತ ಮ್ಯೂಸಿಕ್‌, ಅತ್ಯುದ್ಭುತ ಕಥೆ ಹಾಗೂ ಇನ್ನೂ ಅತಿ ಅದ್ಭುತ ಎನಿಸುವ ನಿರ್ದೇಶನ ಮತ್ತು ಕ್ಯಾಮೆರಾ ವರ್ಕ್‌. ಹೀಗೆ ‘ಕೆಜಿಎಫ್‌’ ಸಿನಿಮಾದಲ್ಲಿ ಹೊಗಳದೇ ಇರುವ ಅಂಶಗಳೇ ಇಲ್ಲ. ಯಾಕಂದ್ರೆ ಎಲ್ಲವೂ ಸೂಪರ್‌.. ಸೂಪರ್.. ಇಂತಹ ಅತ್ಯದ್ಭುತ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ಮೊದಲ ಪಾರ್ಟ್‌ನಲ್ಲಿ ತಮ್ಮ ಆಕ್ಟಿಂಗ್‌ ಮೂಲಕ ಮಿಂಚಿದ್ದರು. ಇದೀಗ ‘ಕೆಜಿಎಫ್‌’ ಸೀಕ್ವೆಲ್‌(KGF 2 Updates)ನಲ್ಲೂ ಕಮಾಲ್‌ ಮಾಡೋಕೆ ನಟಿ ಶ್ರೀನಿಧಿ ಶೆಟ್ಟಿ ರೆಡಿಯಾಗಿದ್ದಾರೆ. ‘ಕೆಜಿಎಫ್‌’ ಸೀಕ್ವೆಲ್‌ನ ತಮ್ಮ ಡಬ್ಬಿಂಗ್‌ ಕೆಲಸ ಕಂಪ್ಲೀಟ್‌ ಮಾಡಿದ್ದಾರಂತೆ ನಟಿ ಶ್ರೀನಿಧಿ ಶೆಟ್ಟಿ.

ಇದನ್ನೂ ಓದಿ: Nora Fatehi ಇನ್ಸ್ಟಾಗ್ರಾಮ್ ಖಾತೆ Delete! ಆಕೆಯ ಕೊನೆಯ ಪೋಸ್ಟ್ ಯಾವ್ದಿತ್ತು ಗೊತ್ತಾ?

ಎದೆಬಡಿದ ಹೆಚ್ಚಿಸಿದೆ ಪೋಸ್ಟ್..!

‘ಕೆಜಿಎಫ್‌-2ʼ ಡಬ್ಬಿಂಗ್ ಕೆಲಸ ಮುಗಿಸಿರುವ ಸಿಹಿ ಸುದ್ದಿಯನ್ನು ಸ್ವತಃ ನಟಿ ಶ್ರೀನಿಧಿ ಶೆಟ್ಟಿ(Srinidhi Shetty) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಬ್ಬಿಂಗ್ ಮಾಡುತ್ತಿರುವ ಕೆಲ ಫೋಟೋಗಳನ್ನೂ ಶೇರ್‌ ಮಾಡಿದ್ದಾರೆ. ‘ಇದಕ್ಕಾಗಿ ನನ್ನ ಪೂರ್ಣ ಹೃದಯ ಅರ್ಪಿಸಿ ಎಲ್ಲವನ್ನೂ ಮುಗಿಸಿದ್ದೇನೆ. ನಿಮ್ಮನ್ನೆಲ್ಲ ಏಪ್ರಿಲ್ 14ರಂದು ಭೇಟಿ ಆಗಲಿದ್ದೇನೆ’ ಅಂತಾ ಶ್ರೀನಿಧಿ ಶೆಟ್ಟಿ ಇನ್‌ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದು, ಕೋಟಿ ಕೋಟಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ.

ಒಟ್ಟಾರೆ ಹೇಳೋದಾದ್ರೆ ‘ಕೆಜಿಎಫ್‌ ಪಾರ್ಟ್‌ 2’ ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ರಾಕಿಭಾಯ್‌(Rocking Star Yash) ಕಥೆ ಏನಾಗುತ್ತೆ, ಗರುಡ ಸತ್ತ ನಂತರ ಏನೆಲ್ಲಾ ಸಂಭವಿಸುತ್ತೆ. ಅಧೀರನ ಆರ್ಭಟ ಹೇಗಿರುತ್ತೆ ಅನ್ನೋದೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ರಿಲೀಸ್‌ ದಿನ ಹಬ್ಬದ ವಾತಾವರಣ ಸೃಷ್ಟಿಯಾಗೋದು ಗ್ಯಾರಂಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News