Anushka Sharma Virat Kohli: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡೊಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ರೋಮ್ಯಾಂಟಿಕ್‌ ಜೋಡಿಯ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಸಪ್ತಮಿ ಗೌಡಗೂ ರಾಜ್‌ ಕುಟುಂಬಕ್ಕೂ ನಂಟೇನು? ಈ ದಿನ ಎಂದೂ ಮರೆಯಲಾರೆ ಅಂದಿದ್ಯಾಕೆ?


ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಬಾಲಿವುಡ್‌ನ ಈ ಜೋಡಿಯನ್ನು ನೋಡಿ, ಅನೇಕರು ಇದೇ ರೀತಿಯ ಸಂಬಂಧದ ಕನಸು ಕಾಣುತ್ತಾರೆ. ಇತ್ತೀಚೆಗೆ ಇಬ್ಬರೂ ಪಂಜಾಬಿ ಹಾಡುಗೆ ಡ್ಯಾನ್‌ ಮಾಡಿದ್ದಾರೆ. ಈ ವಿಡಿಯೋವನ್ನು ಅನುಷ್ಕಾ ತಮ್ಮ ಇನ್‌ಸ್ಟಾದಲ್ಲಿ ಶೆರ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಬೆಂಕಿಯಂತೆ ಈ ವಿಡಿಯೋ ವೈರಲ್‌ ಆಗ್ತಿದೆ.


 



 


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪರಸ್ಪರರ ಒಡನಾಟವನ್ನು ಎಷ್ಟು ಆನಂದಿಸುತ್ತಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು. 2017 ರಲ್ಲಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾದರು. ಮದುವೆಯಾದ ಸುಮಾರು ನಾಲ್ಕು ವರ್ಷಗಳ ನಂತರ, ಈ ದಂಪತಿಗಳು ವಾಮಿಕಾ ಎಂಬ ಮುದ್ದಾದ ಮಗಳನ್ನು ಪಡೆದರು.


ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಬೆಳಗಿನ ಉಪಾಹಾರಕ್ಕೆ ತಿನ್ನೋದು ಇದನ್ನೇ!


ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರ ಫೋಟೋಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಜನರ ಹೃದಯವನ್ನು ಗೆಲ್ಲುತ್ತವೆ. ಈ ದಂಪತಿಯ ಮಗಳು ವಾಮಿಕಾ ಫೋಟೋಗಳನ್ನು ನೋಡಲು ಜನರು ಸಹ ತುಂಬಾ ಉತ್ಸುಕರಾಗಿದ್ದಾರೆ. ‌ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.