Chiranjeevi Breakfast : ಮೆಗಾಸ್ಟಾರ್ ಚಿರಂಜೀವಿ ಬೆಳಗಿನ ಉಪಾಹಾರಕ್ಕೆ ತಿನ್ನೋದು ಇದನ್ನೇ!

Chiranjeevi Breakfast : ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಸೆಲಿಬ್ರಿಟಿಗಳು ಏನೇ ಮಾಡಿದರೂ ಸುದ್ದಿಯಾಗುತ್ತದೆ. ಅದರಲ್ಲೂ ಸ್ಟಾರ್‌ ನಟರ ವಿಚಾರಗಳು ಬಹುಬೇಗ ವೈರಲ್‌ ಆಗುತ್ತವೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಅವರ ಫೋಟೋ ಒಂದು ವೈರಲ್‌ ಆಗಿದ್ದು, ಎಲ್ಲರ ಗಮನ ಅವರ ಮುಂದಿರುವ ತಟ್ಟೆಯ ಮೇಲೆ ಬಿದ್ದಿದೆ.  

Written by - Chetana Devarmani | Last Updated : Apr 24, 2023, 03:04 PM IST
  • ಮೆಗಾಸ್ಟಾರ್ ಚಿರಂಜೀವಿ ಫೋಟೋ ವೈರಲ್‌
  • ಬೆಳಗಿನ ಉಪಾಹಾರಕ್ಕೆ ತಿನ್ನೋದು ಇದನ್ನೇ!
  • ಎಲ್ಲರ ಗಮನ ಅವರ ಮುಂದಿರುವ ತಟ್ಟೆಯ ಮೇಲೆ?
Chiranjeevi Breakfast : ಮೆಗಾಸ್ಟಾರ್ ಚಿರಂಜೀವಿ ಬೆಳಗಿನ ಉಪಾಹಾರಕ್ಕೆ ತಿನ್ನೋದು ಇದನ್ನೇ!   title=
Chiranjeevi Breakfast

Chiranjeevi Breakfast : ಮೆಗಾಸ್ಟಾರ್ ಚಿರಂಜೀವಿ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಬಂಧ ಎಲ್ಲರಿಗೂ ತಿಳಿದಿದೆ. ದೇವಿ ಶ್ರೀ ಪ್ರಸಾದ್ ಅವರ ತಂದೆ ಸತ್ಯಮೂರ್ತಿ ಜೊತೆ ಚಿರಂಜೀವಿ ಅವರ ಒಡನಾಟ ಅನ್ಯೋನ್ಯವಾಗಿತ್ತು. ಚಿಕ್ಕಂದಿನಲ್ಲಿ ದೇವಿ ಶ್ರೀ ಪ್ರಸಾದ್ ಅವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಚಿರಂಜೀವಿ. ಆ ವೇಳೆ ಚಿರಂಜೀವಿ ಕೂಡ ಡಿಎಸ್ಪಿಗೆ ವಾಚ್ ಉಡುಗೊರೆಯಾಗಿ ನೀಡಿದ್ದರು. ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನಿರ್ದೇಶಕರಾಗಿ ಚಿರಂಜೀವಿ ಅವರಿಗೆ ಮರೆಯಲಾಗದ ಹಿಟ್‌ಗಳನ್ನು ನೀಡಿದರು. ಇವರಿಬ್ಬರ ಕಾಂಬೊ ಮೆಗಾಫ್ಯಾನ್ಸ್‌ಗೆ ಹಬ್ಬದೂಟದಂತೆ.  

ದೇವಿ ಶ್ರೀ ಪ್ರಸಾದ್ ಜೊತೆ ಚಿರಂಜೀವಿ ಟಿಫಿನ್ ಮಾಡುತ್ತಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಸ್ ಜೊತೆ ಉಪಹಾರ.. ಅದ್ಭುತ ಸಮಯ.. ಇಷ್ಟು ಒಳ್ಳೆಯ ಉಪಹಾರಕ್ಕಾಗಿ ಆತ್ಮೀಯ ಚಿರಂಜೀವಿ ಸರ್ ಅವರಿಗೆ ಧನ್ಯವಾದಗಳು.. ಎಂದು ದೇವಿ ಶ್ರೀ ಪ್ರಸಾದ್ ಹೇಳಿದ್ದಾರೆ. ಅಲ್ಲದೇ ಫೋಟೋ ಕೂಡ ಶೇರ್‌ ಮಾಡಿದ್ದು, ಚಿತ್ರ ತೆಗೆದ ಸುರೇಖಾ ಅವರಿಗೆ ಧನ್ಯವಾದಗಳು ಎಂದು ಡಿಎಸ್ಪಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಒಂದು ಹಾಡಿಗೆ ಇಷ್ಟು ಕೋಟಿ ಸಂಭಾವನೆ ಕೇಳಿದ ಶ್ರಿಯಾ ಶರಣ್

 

 

ಈ ಟ್ವೀಟ್‌ಗೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಚಿರಂಜೀವಿ ತಿನ್ನುವ ಟಿಫಿನ್‌ಗಳ ಬಗ್ಗೆ ಇದೀಗ ಕಾಮೆಂಟ್‌ಗಳು ಬರುತ್ತಿವೆ. ಬೆಳಗಿನಿ ತಿಂಡಿಗೆ ಪೂರಿ ತಿನ್ನುವುದೇ? ಅವರು ಎಷ್ಟು ಬ್ರೇಕ್‌ಫಾಸ್ಟ್‌ ಸೇವಿಸುತ್ತಾರೆ? ಎಂದು ಹಲವರು ಪ್ರಶ್ನಿಸಿದರೆ, ಮತ್ತೆ ಕೆಲವರು ಈ ಎಲ್ಲಾ ಕರಿ, ಚಟ್ನಿಗಳು ಪೂರಿಗಾಗಿ ಎಂದು ಟ್ವೀಟ್ ಮಾಡುತ್ತಿದ್ದಾರೆ. ಚಿರಂಜೀವಿ ತಮ್ಮ ಚಿತ್ರಕ್ಕೆ ಸಂಗೀತ ನೀಡಲು ಈ ಉಪಹಾರ ಸಭೆ ಸೇರಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.  

ವಾಲ್ತೇರು ವೀರಯ್ಯ ಸಿನಿಮಾದ ಹಾಡುಗಳಿಗೆ ಮೆಚ್ಚುಗೆ ಗಳಿಸಿರುವ ದೇವಿ ಶ್ರೀ ಪ್ರಸಾದ್‌, ಈಗ ಪುಷ್ಪಾ 2 ಸಿನಿಮಾದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಹಾಡುಗಳ ಮೇಲೆ ಎಲ್ಲರೂ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ : ಸಪ್ತಮಿ ಗೌಡಗೂ ರಾಜ್‌ ಕುಟುಂಬಕ್ಕೂ ನಂಟೇನು? ಈ ದಿನ ಎಂದೂ ಮರೆಯಲಾರೆ ಅಂದಿದ್ಯಾಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News