ಮುಂಬೈ : ಡ್ರಗ್ಸ್ ಪ್ರಕರಣಕ್ಕೆ (Drug case) ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನಿಖೆ ಚುರುಕುಗೊಳಿಸುತ್ತಿದೆ.  ಈಗ ಈ ಪ್ರಕರಣದಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ಅವರ ಹೆಸರು ಕೂಡ ಹೊರಬಿದ್ದಿದ್ದು, NCB ಅಧಿಕಾರಿಗಳು ಅವರ ವಿಹಾರಣೆ ನಡೆಸುತ್ತಿದ್ದಾರೆ. ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ ಕಳೆದ ಹಲವು ದಿನಗಳಿಂದ ಆರ್ಥರ್ ರಸ್ತೆ ಜೈಲಿನಲ್ಲಿದ್ದಾರೆ.   ಈಗ ಅನನ್ಯ ಮತ್ತು ಆರ್ಯನ್ ನಡುವಿನ ಸಂಭಾಷಣೆ ಮುನ್ನೆಲೆಗೆ ಬಂದಿದೆ.


COMMERCIAL BREAK
SCROLL TO CONTINUE READING

ಆರ್ಯನ್ ಮತ್ತು ಅನನ್ಯಾ ನಡುವಿನ ಮಾತುಕತೆ ? :
ಅನನ್ಯ ಪಾಂಡೆಯನ್ನು (Ananya Panday) ಎನ್‌ಸಿಬಿ ವಿಚಾರಣೆ ನಡೆಸುತ್ತಿದೆ. ಯಾವ ವಾಟ್ಸ್‌ಆ್ಯಪ್ ಚಾಟ್‌ಗಳ ಆಧಾರದ ಮೇಲೆ ಅನನ್ಯ ಪಾಂಡೆ ಅವರನ್ನು  ಎನ್‌ಸಿಬಿ ವಿಚಾರಣೆ ನಡೆಸುತ್ತಿದೆಯೋ ಅದು ಆರ್ಯನ್ ಖಾನ್ (Aryan Khan)ಮತ್ತು ಅನನ್ಯ ಪಾಂಡೆ ನಡುವೆ ನಡೆದಿರುವುದು ಎನ್ನಲಾಗಿದೆ. ಈ ವಾಟ್ಸಾಪ್ ಚಾಟ್‌ಗಳಲ್ಲಿ (Whatsapp chat), ಆರ್ಯನ್ ಖಾನ್ ಮತ್ತು ಅನನ್ಯ ಪಾಂಡೆ ಗಾಂಜಾ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. 


ಇದನ್ನೂ  ಓದಿ : #JrChirubirthday : ದಿ. ನಟ ಚಿರಂಜೀವಿ ಸರ್ಜಾ, ಮೇಘನಾ ರಾಜ್ ಪುತ್ರನಿಗೆ ಇಂದು ಮೊದಲ ವರ್ಷದ ಜನ್ಮದಿನದ ಸಂಭ್ರಮ


ಆರ್ಯನ್ ಮತ್ತು ಅನನ್ಯಾ ನಡುವೆ ಚಾಟ್ (WhatsApp Chats)?
ಆರ್ಯನ್ ಖಾನ್ : ಗಾಂಜಾ ವ್ಯವಸ್ಥೆ ಮಾಡಬಹುದಾ ? 
ಅನನ್ಯ ಪಾಂಡೆ : ಅವಳು ವ್ಯವಸ್ಥೆ ಮಾಡುತ್ತಾಳೆ..


ಚಾಟ್ ನಲ್ಲಿ ಅನನ್ಯಾ ಪಾಂಡೆ ಸ್ಪಷ್ಟೀಕರಣ :
ಎನ್‌ಸಿಬಿ (NCB) ಮೂಲಗಳ ಪ್ರಕಾರ, ಅನನ್ಯ ಪಾಂಡೆಯನ್ನು ಗುರುವಾರ ವಿಚಾರಣೆಗೆ ಒಳಪಡಿಸಿದಾಗ, ತಾನು ಆರ್ಯನ್ ಖಾನ್ ಜೊತೆ ತಮಾಷೆ ಮಾದಿದ್ದೆ ಎಂದು ಅನನ್ಯ ಹೇಳಿದ್ದಾರೆ. ಮೂಲಗಳ ಪ್ರಕಾರ, ಇದರ ಹೊರತಾಗಿ, ಅವರಬ್ಬರ ನಡುವೆ ಅನೇಕ ರೀತಿಯ ಚಾಟ್‌ಗಳು ನಡೆದಿವೆ ಎನ್ನಲಾಗಿದೆ. ಇದರಲ್ಲಿ ಇಬ್ಬರೂ ವಿವಿಧ ಸಂದರ್ಭಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಮಾತನಾಸಿದ್ದಾರೆ. 


ಅನನ್ಯ ಪಾಂಡೆಯನ್ನು ಪ್ರಶ್ನಿಸಿದ  ಎನ್‌ಸಿಬಿ :
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬುಧವಾರ ಅನನ್ಯ ಪಾಂಡೆಯ ಮನೆ ಮೇಲೆ ದಾಳಿ ಮಾಡಿ ಆಕೆಯನ್ನು ವಿಚಾರಣೆಗೆ ಕರೆದಿದೆ. ಅವರನ್ನು ಗುರುವಾರ ಎನ್‌ಸಿಬಿ ಕಚೇರಿಯಲ್ಲಿ ದೀರ್ಘಕಾಲ ವಿಚಾರಣೆಗೆ ಒಳಪಡಿಸಲಾಯಿತು.  ಇದೀಗ ಈ ಪ್ರಕರಣದಲ್ಲಿ NCB ದೊಡ್ಡ ಯಶಸ್ಸು ಪಡೆದಿದ್ದು, ಮತೊಬ್ಬನನ್ನು ಬಂಧಿಸಲಾಗಿದೆ. ಇಂದು ಅನನ್ಯ ಪಾಂಡೆ ಜೊತೆಗೆ ಪೆಡ್ಲರ್ ಗಳನ್ನೂ ಕೂಡಾ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ಪೆಡ್ಲರ್ ಗಳೊಂದಿಗೆ ಆರ್ಯನ್  ಮತ್ತುಅನನ್ಯ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.  
 
ಇದನ್ನೂ  ಓದಿ : ಯಶ್, ವಿಜಯ್ ದೇವರಕೊಂಡ, ಅವರನ್ನು ಹಿಂದಿಕ್ಕಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಶ್ಮಿಕಾ ಮಂದಣ್ಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ