ನಟಿ ಅನನ್ಯ ಪಾಂಡೆ ಮೊಬೈಲ್, ಲ್ಯಾಪ್‌ಟಾಪ್ ಡ್ರಗ್ಸ್ ನಿಯಂತ್ರಣ ಏಜೆನ್ಸಿ ವಶಕ್ಕೆ

ನಟಿ ಅನನ್ಯ ಪಾಂಡೆಯವರ ಮುಂಬೈ ಮನೆಯ ಮೇಲೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿತು ಮತ್ತು ಆಕೆಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ, ಈ ತಿಂಗಳ ಆರಂಭದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

Written by - ZH Kannada Desk | Last Updated : Oct 21, 2021, 05:21 PM IST
  • ನಟಿ ಅನನ್ಯ ಪಾಂಡೆಯವರ ಮುಂಬೈ ಮನೆಯ ಮೇಲೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿತು ಮತ್ತು ಆಕೆಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
  • ಈ ತಿಂಗಳ ಆರಂಭದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
 ನಟಿ ಅನನ್ಯ ಪಾಂಡೆ ಮೊಬೈಲ್, ಲ್ಯಾಪ್‌ಟಾಪ್ ಡ್ರಗ್ಸ್ ನಿಯಂತ್ರಣ ಏಜೆನ್ಸಿ ವಶಕ್ಕೆ

ನವದೆಹಲಿ: ನಟಿ ಅನನ್ಯ ಪಾಂಡೆಯವರ ಮುಂಬೈ ಮನೆಯ ಮೇಲೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿತು ಮತ್ತು ಆಕೆಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ, ಈ ತಿಂಗಳ ಆರಂಭದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಮಾದಕದ್ರವ್ಯ ವಿರೋಧಿ ಏಜೆನ್ಸಿ ಸಮನ್ಸ್ ಜಾರಿಗೊಳಿಸಿದಹಿನ್ನಲೆಯಲ್ಲಿ ಅನನ್ಯ ಪಾಂಡೆ (Ananya Panday) ತನ್ನ ತಂದೆ ನಟ ಚಂಕಿ ಪಾಂಡೆಯೊಂದಿಗೆ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾದರು.22 ವರ್ಷ ವಯಸ್ಸಿನ ನಟಿ  2019 ರಲ್ಲಿ ಚಲನಚಿತ್ರರಂಗಕ್ಕೆ ಪ್ರವೇಶಿಸಿದ್ದರು.ಅಕ್ಟೋಬರ್ 2 ರಂದು ವಿಹಾರದಲ್ಲಿ ರೇವ್ ಪಾರ್ಟಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಒಳಗೊಂಡ ಪ್ರಕರಣದ ಆರೋಪಿಯೊಬ್ಬರ ವಾಟ್ಸಾಪ್ ಚಾಟ್‌ಗಳಲ್ಲಿ ಅನನ್ಯ ಪಾಂಡೆಯ ಹೆಸರು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಈ ಸಮನ್ಸ್ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: NCB at Shahrukh Khan’s Residence: ಶಾರುಖ್ ಖಾನ್ ನಿವಾಸ ಮನ್ನತ್ ಮೇಲೂ NCB ದಾಳಿ

ಅನನ್ಯ ಮತ್ತು ಆರ್ಯನ್ ಸಹೋದರಿ ಸುಹಾನಾ ಉತ್ತಮ ಸ್ನೇಹಿತರು ಎನ್ನಲಾಗಿದೆ.ಇನ್ನೊಂದೆಡೆಗೆ ಕಳೆದ ವರ್ಷದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಲ್ಲಿ ಹೊರಹೊಮ್ಮಿದ ಡ್ರಗ್ಸ್ ಕೋನಕ್ಕೆ ಸಂಬಂಧಿಸಿದಂತೆ ಹಲವಾರು ನಟರನ್ನು ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಮ್ಮೆ Trollಗೆ ಒಳಗಾದ Ananya Pandey

ಆರ್ಯನ್ ಖಾನ್ ಅವರು ಅಕ್ಟೋಬರ್ 8 ರಿಂದ ಜೈಲಿನಲ್ಲಿದ್ದಾರೆ ಮತ್ತು ನಿನ್ನೆ ಜಾಮೀನು ನಿರಾಕರಿಸಿದ್ದ ನ್ಯಾಯಾಲಯವು ಆತನ ವಾಟ್ಸಾಪ್ ಚಾಟ್ ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಬಹಿರಂಗಪಡಿಸಿತು.ಆರ್ಯನ್ ಖಾನ್ ಅವರ ವಕೀಲರು ಆತನ ಮೇಲೆ ಏನೂ ಕಂಡುಬಂದಿಲ್ಲ ಎಂದು ಹೇಳಿದ್ದರೂ,ನ್ಯಾಯಾಲಯವು ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ನ ಶೂನಲ್ಲಿ ಆರು ಗ್ರಾಂ ಚರಗಳನ್ನು ಅಡಗಿಸಿಡಲಾಗಿದೆ ಎಂದು ಹೇಳಿತು, ಮತ್ತು ಆರ್ಯನ್ ಖಾನ್ ಅವರಿಗೆ ಅದರ ಬಗ್ಗೆ ತಿಳಿದಿತ್ತು ಎಂದು ತೋರುತ್ತದೆ ಎಂದು ಅದು ಹೇಳಿದೆ.

ಇದನ್ನೂ ಓದಿ: Aryan Khan Drug Case: ಬಾಲಿವುಡ್ ನಟಿ ಅನನ್ಯ ಪಾಂಡೆ ಮನೆ ಮೇಲೆ NCB ದಾಳಿ

ವಾಟ್ಸಾಪ್ ಚಾಟ್ಸ್ ಪ್ರೈಮ ಫೇಸಿ ಆರೋಪಿ ಆರ್ಯನ್ ಖಾನ್ ಮಾದಕ ವಸ್ತುಗಳಿಗೆ ನಿಯಮಿತವಾಗಿ ಅಕ್ರಮ ಮಾದಕ ವಸ್ತುಗಳ ಚಟುವಟಿಕೆ ನಡೆಸುತ್ತಿದ್ದಾನೆ ಚಾಟ್‌ಗಳು ಆಪಾದಿತ ನಂ 1 (ಆರ್ಯನ್ ಖಾನ್) ನ ಪೂರೈಕೆದಾರರು ಮತ್ತು ಪೆಡ್ಲರ್‌ಗಳ ಸಂಬಂಧವನ್ನು ಬಹಿರಂಗಪಡಿಸಿದೆ ಎಂದು ಅದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News