ಯಶ್, ವಿಜಯ್ ದೇವರಕೊಂಡ, ಅವರನ್ನು ಹಿಂದಿಕ್ಕಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಶ್ಮಿಕಾ ಮಂದಣ್ಣ

ತನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಫಾಲ್ಲೋವರ್ಸ್ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ದಾಖಲಿಸುವ ಮೂಲಕ   ರಶ್ಮಿಕಾ ಮಂದಣ್ಣ'ಅತ್ಯಂತ ಪ್ರಭಾವಶಾಲಿ ನಟರ' ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ. 

Written by - Ranjitha R K | Last Updated : Oct 21, 2021, 07:50 PM IST
  • ರಶ್ಮಿಕಾ ಮಂದಣ್ಣಗೆ ಅಗ್ರ ಸ್ಥಾನ
  • ಫೋರ್ಬ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೇರಿದ ರಶ್ಮಿಕಾ
  • ರಶ್ಮಿಕಾ ಅವರನ್ನು ನ್ಯಾಷನಲ್ ಕ್ರಶ್ ಎನ್ನುತ್ತಿರುವ ಅಭಿಮಾನಿಗಳು
ಯಶ್,  ವಿಜಯ್ ದೇವರಕೊಂಡ, ಅವರನ್ನು ಹಿಂದಿಕ್ಕಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಶ್ಮಿಕಾ ಮಂದಣ್ಣ

ನವದೆಹಲಿ : ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ಕೇವಲ ಐದು ವರ್ಷಗಳಾಗಿರಬಹುದು. ಬಾಲಿವುಡ್ ಚಿತ್ರ ಕೂಡಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗಣನೀಯ ಜನಪ್ರಿಯತೆ ಗಳಿಸಿರುವ ರಶ್ಮಿಕಾ (Rashmika Mandanna) ಅವರನ್ನು ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದೆ ಕರೆದಿದ್ದಾರೆ. ಈಗ ಅವರು ಫೋರ್ಬ್ಸ್ ಇಂಡಿಯಾದ ಅತ್ಯಂತ ಪ್ರಭಾವಶಾಲಿ ನಟ ನಟಿಯರ ಪಟ್ಟಿಯಲ್ಲಿ ಯಶ್ (Yash) , ಸಮಂತಾ ರುತ್ ಪ್ರಭು , ವಿಜಯ್ ದೇವರಕೊಂಡ ಮತ್ತು  ಅವರನ್ನು ಹಿಂದಿಕ್ಕುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ . 

ತನ್ನ ಸಾಮಾಜಿಕ ಮಾಧ್ಯಮ (Social Media) ಪುಟಗಳಲ್ಲಿ ಫಾಲ್ಲೋವರ್ಸ್ ಸಂಖ್ಯೆಯಲ್ಲಿ ಗಣನೀಯ ಏರಿಕೆಯನ್ನು ದಾಖಲಿಸುವ ಮೂಲಕ   ರಶ್ಮಿಕಾ ಮಂದಣ್ಣ (Rashmika Mandanna) 'ಅತ್ಯಂತ ಪ್ರಭಾವಶಾಲಿ ನಟರ' ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ. 

ಇದನ್ನೂ ಓದಿ :  NCB at Shahrukh Khan’s Residence: ಶಾರುಖ್ ಖಾನ್ ನಿವಾಸ ಮನ್ನತ್ ಮೇಲೂ NCB ದಾಳಿ

'ಪೆಲ್ಲಿ ಚೂಪುಲು' ಮತ್ತು 'ಅರ್ಜುನ್ ರೆಡ್ಡಿ' ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ ವಿಜಯ್ ದೇವರಕೊಂಡ (Vajaya Devarakonda), ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕನ್ನಡದ ರಾಕಿ ಭಾಯಿ ಯಶ್ (Yash) ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸಮಂತಾ ರುತ್ ಪ್ರಭು ನಾಲ್ಕನೇ ಸ್ಥಾನದಲ್ಲಿದ್ದರೆ, ಅಲ್ಲು ಅರ್ಜುನ್ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ.  

ಪರಿಗಣಿಸಲಾದ  ಅಂಶಗಳೆಂದರೆ  ಅವರೇಜ್ ಲೈಕ್ ಗಳು, ಅವರೇಜ್  ಕಾಮೆಂಟ್‌ಗಳು, ಎಂಗೇಜ್ಮೆಂಟ್ ರೇಟ್ , ಸರಾಸರಿ ವೀಡಿಯೋ ವೀಕ್ಷಣೆಗಳು ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ (Social media) ಪ್ರೊಫೈಲ್‌ಗಳ ಫಾಲ್ಲೋವೆರ್ಸ್ ಸಂಖ್ಯೆಯನ್ನು ಪರಿಗಣಿಸಲಾಗಿದೆ. ಇದನ್ನು Qoruz Score' ಮೂಲಕ ಲೆಕ್ಕ ಹಾಕಲಾಗುತ್ತದೆ.  ಇದರಲ್ಲಿ ರಶ್ಮಿಕಾ ಹತ್ತರಲ್ಲಿ ಅಂಕಗಳು 9.88 ಅಂಕ ಪಡೆದಿದ್ದರೆ , ವಿಜಯ್ ದೇವರಕೊಂಡ 9.67 ಗಳಿಸಿದ್ದಾರೆ. ಯಶ್ ಸ್ಕೋರ್ 9.54, ಸಮಂತಾ ಸ್ಕೋರ್ 9.49, ಅಲ್ಲು ಅರ್ಜುನ್ 9.46 ಸ್ಕೋರ್ ಮಾಡಿದ್ದಾರೆ.

ಇದನ್ನೂ ಓದಿ :  Aryan Khan Drug Case: ಬಾಲಿವುಡ್ ನಟಿ ಅನನ್ಯ ಪಾಂಡೆ ಮನೆ ಮೇಲೆ NCB ದಾಳಿ

ಫೋರ್ಬ್ಸ್ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿಗಳ ಇನ್‌ಸ್ಟಾಗ್ರಾಮ್ (Instagram) ಚಟುವಟಿಕೆಯನ್ನು ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಸೆಪ್ಟೆಂಬರ್ 30 ರವರೆಗೆ ಪರಿಗಣಿಸಿದೆ.

ಅಲ್ಲು ಅರ್ಜುನ್ ಅವರ ಮುಂಬರುವ ಆಕ್ಷನ್-ಡ್ರಾಮಾ 'ಪುಷ್ಪ'ದಲ್ಲಿ ರಶ್ಮಿಕಾ ಮಂದಣ್ಣ ಗ್ರಾಮೀಣ ಹುಡುಗಿಯಾಗಿ ನಟಿಸುತ್ತಿದ್ದಾರೆ.  ಶೀಘ್ರದಲ್ಲೇ ಅವರು ಶರ್ವಾನಂದ್ ಅವರ' ಆಡವಲ್ಲಿ ಮೀಕು ಜೋಹಾರುಲು 'ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News