ನವದೆಹಲಿ: ಜನಪ್ರಿಯ ಗಾಯಕ ಮತ್ತು ರಾಪರ್ ಯೋ ಯೋ ಹನಿ ಸಿಂಗ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಹನಿ ಸಿಂಗ್ ಮತ್ತೆ ವಿವಾದಕ್ಕೆ ಸಿಲುಕಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ಈ ವಿಷಯ ತಿಳಿದ ಹನಿ ಸಿಂಗ್ ಅಭಿಮಾನಿಗಳಿಗೆ ಬಿಗ್ ಶಾಕ್ ಆಗಿದೆ. ಈವೆಂಟ್ ಆಯೋಜಕ ವಿವೇಕ್ ರಾಮನ್ ಎಂಬುವರು ಹನಿ ಸಿಂಗ್ ವಿರುದ್ಧ ದೂರು ನೀಡಿದ್ದು, ಗಂಭೀರ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಪಹರಣ ಮತ್ತು ಹಲ್ಲೆ ಆರೋಪ


ಹನಿ ಸಿಂಗ್ ಮತ್ತು ಆತನ ಸಹಚರರ ವಿರುದ್ಧ ಈವೆಂಟ್ ಆಯೋಜಕ ವಿವೇಕ್ ರಾಮನ್ ಅವರು ಅಪಹರಣ, ಹಲ್ಲೆ ಮಾಡಿರುವ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಹನಿ ಸಿಂಗ್ ಮತ್ತು ಟೀನಾ ಥಡಾನಿ ನಡುವಿನ ವಿವಾದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅವರ ಬ್ರೇಕಪ್ ಸುದ್ದಿಯ ಶಾಕ್‍ನಿಂದ ಅಭಿಮಾನಿಗಳು ಇನ್ನೂ ಹೊರ ಬಂದಿಲ್ಲ.


ಇದನ್ನೂ ಓದಿ: Pooja Hegde To Rashmika: ಪ್ಯಾನ್ ಇಂಡಿಯಾ ಸ್ಟಾರ್‌ಡಮ್ ಗಳಿಸಿದ ಕನ್ನಡ ನಟಿಯರು ಇವರು


ಮುಂಬೈ ಪೊಲೀಸರು ಹೇಳಿದ್ದೇನು?


ಮುಂಬೈ ಪೊಲೀಸರ ಪ್ರಕಾರ, ಹನಿ ಸಿಂಗ್ ಅವರು ಈವೆಂಟ್ ಕಂಪನಿಯ ಮಾಲೀಕ ವಿವೇಕ್ ರಾಮನ್ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿ ದೂರು ದಾಖಲಾಗಿದೆ. ವಿವೇಕ್ ರಾಮನ್ ಅವರನ್ನು ಮುಂಬೈನ ಹೋಟೆಲ್ ಒಂದರಲ್ಲಿ ಬಂಧಿಸಿಟ್ಟು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.


ಬಂಧನ ವಾರಂಟ್!


ಈವೆಂಟ್ ಆಯೋಜಕರ ಪ್ರಕಾರ ಏಪ್ರಿಲ್ 15ರಂದು ಮುಂಬೈನ ಬಿಕೆಸಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಣದ ಕಾರಣದಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು, ಇದರಿಂದ ಗಾಯಕ ಮತ್ತು ಈವೆಂಟ್ ಆಯೋಜಕರ ನಡುವೆ ವಿವಾದ ಉಂಟಾಗಿತ್ತು. ತಮ್ಮನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿರುವ ಹನಿ ಸಿಂಗ್ ಮತ್ತು ಆತನ ಸಹಚರರನ್ನು ಬಂಧಿಸುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಈ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Matte Maduve : ʼಮತ್ತೆ ಮದುವೆʼ ಟೀಸರ್‌ ರಿಲೀಸ್‌ : ಸಖತ್ತಾಗಿದೆ ಪವಿತ್ರಾ-ನರೇಶ್‌ ಲವ್‌ ಕಹಾನಿ..! 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.