Vishnuvardhan: ಕಿಚ್ಚ ಸುದೀಪ್‌ಗೆ ಆ ಒಂದು ವಿಚಾರಕ್ಕೆ ವಿಷ್ಣವರ್ಧನ್‌ ಮೇಲಿತ್ತು ಕೋಪ!

Kiccha Sudeep On Vishnuvardhan: ಸಾಹಸ ಸಿಂಹ ವಿಷ್ಣುವರ್ಧನ್ ಮೇಲೆ ಸುದೀಪ್‌ಗೆ ವಿಶೆಷ ಪ್ರೀತಿ. ಆದರೆ ಆ ಒಂದು ವಿಚಾರಕ್ಕೆ ವಿಷ್ಣುವರ್ಧನ್‌ ಮೇಲೆ ಸಿಟ್ಟು ಇದೆಯಂತೆ. ಕಿಚ್ಚನಿಗೆ ಅವರ ಮೇಲೆ ಕೋಪವೇಕೆ ಗೊತ್ತಾ?  

Written by - Chetana Devarmani | Last Updated : Apr 21, 2023, 02:29 PM IST
  • ಸಾಹಸ ಸಿಂಹ ವಿಷ್ಣುವರ್ಧನ್
  • ಆ ಒಂದು ವಿಚಾರಕ್ಕೆ ವಿಷ್ಣವರ್ಧನ್‌ ಮೇಲಿತ್ತು ಕೋಪ!
  • ಕಿಚ್ಚನಿಗೆ ಅವರ ಮೇಲೆ ಕೋಪವೇಕೆ ಗೊತ್ತಾ?
Vishnuvardhan: ಕಿಚ್ಚ ಸುದೀಪ್‌ಗೆ ಆ ಒಂದು ವಿಚಾರಕ್ಕೆ ವಿಷ್ಣವರ್ಧನ್‌ ಮೇಲಿತ್ತು ಕೋಪ!   title=

Kiccha Sudeep On Vishnuvardhan: ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್. ಕಣ್ಣಿಂದ ಮರೆಯಾದರೂ ಅಭಿಮಾನಿಗಳ ಮನದಲ್ಲಿ ಇಂದಿಗೂ ಎಂದಿಗೂ ಶಾಶ್ವತ. ಈಗಲೂ ವಿಷ್ಣುದಾದಾ ಸಿನಿಮಾ ಅಂದ್ರೆ ಜನರಿಗೆ ಅಚ್ಚುಮೆಚ್ಚು. ಈಗಲೂ ಟಿವಿಗಳಲ್ಲಿ ಅವರ ಸಿನಿಮಾ ಹಾಕಿದರೆ ಕುಳಿತು ನೋಡುವ ಜನರಿದ್ದಾರೆ. ಅವರು ಹೆಸರಿನಲ್ಲಿ ಅಭಿಮಾನಿಗಳು ದಾನ ಧರ್ಮದ ಕೆಲಸಗಳನ್ನು ಇಂದಿಗೂ ಮಾಡುತ್ತಾರೆ.

ಇನ್ನು ಕಿಚ್ಚ ಸುದೀಪ್‌ ಅವರಿಗೆ ವಿಷ್ಣುವರ್ಧನ್‌ ಮೇಲೆ ವಿಶೆಷ ಪ್ರೀತಿ ಇತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಕಿಚ್ಚನಿಗೆ ಒಂದೇ ಒಂದು ವಿಚಾರಕ್ಕೆ ವಿಷ್ಣುವರ್ಧನ್‌ ಮೇಲೆ ಸಿಟ್ಟು ಇದೆಯಂತೆ. ಕಿಚ್ಚ ಸುದೀಪ್‌ ಅನೇಕ ಬಾರಿ ವಿಚ್ಣುದಾದಾ ಮೇಲಿನ ಪ್ರೀತಿ, ಅಭಿಮಾನವನ್ನು ತೋರ್ಪಡಿಸುತ್ತಾರೆ. ಆದರೆ ವಿಷ್ಣುವರ್ಧನ್‌ರನ್ನು ಇಷ್ಟೊಂದು ಪ್ರೀತಿಸುವ ಕಿಚ್ಚನಿಗೆ ಅವರ ಮೇಲೆ ಕೋಪವೇಕೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬೇಕು. 

ಇದನ್ನೂ ಓದಿ: Samantha Tattoo: ವಿಚ್ಛೇದನದ ಬಳಿಕವೂ ಸಮಂತಾ ಸೊಂಟದ ಮೇಲಿದೆ ʻನಾಗ ಚೈತನ್ಯʼ ಟ್ಯಾಟೂ!

ಕನ್ನಡ ಚಿತ್ರರಂಗದ ಮೇರುನಟರಾದ ದಿವಂಗತ ಡಾ.ವಿಷ್ಣುವರ್ಧನ್ ಮೇಲೆ ಸುದೀಪ್‌ ಕೋಪವಿರುವ ವಿಚಾರವನ್ನು ಸ್ವತಃ ಬಹಿರಂಗಪಡಿಸಿದ್ದರು. ನಿಮ್ಮ ಮೇಲೆ ಪ್ರೀತಿಯೆಷ್ಟು ಇದೆಯೋ, ಆ ವಿಚಾರಕ್ಕೆ ನಿಮ್ಮೆ ಮೇಲೆ ನನಗೆ ಅಷ್ಟೇ ಕೋಪ ಇದೆ ಎಂದು ಸುದೀಪ್‌ ಒಮ್ಮೆ ಹೇಳಿಕೊಂಡಿದ್ದರು. 

ನಿಮ್ಮ ಮೇಲೆ ಎಷ್ಟು ಪ್ರೀತಿ ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಅಷ್ಟೇ ಕೋಪ ಕೂಡ ಇದೆ. ನೀವಿಲ್ಲದೇ ಅನಾಥರಾಗಿದ್ದೀವಿ. ಬಹಳ ಬೇಗ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗೆ ತುಂಬಾ ಇತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ನಾನು ಎಂದು ಕಿಚ್ಚ ಸುದೀಪ್‌ ಹಿಂದೊಮ್ಮೆ ಹೇಳಿಕೊಂಡಿದ್ದರು.

ಇದನ್ನೂ ಓದಿ: ಗುಟ್ಟಾಗಿ ಎಂಗೇಜ್​ಮೆಂಟ್ ಮಾಡಿಕೊಂಡ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ! ಮದುವೆ ಡೇಟ್‌ ಕೂಡ ಫಿಕ್ಸ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News