Pooja Hegde To Rashmika: ಸಿನಿಪ್ರಿಯರು ಇಂದು ಭಾಷೆಯ ಎಲ್ಲೆ ಮೀರಿ ಕಥೆ ಆಧಾರಿತ ಸಿನಿಮಾಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಪ್ಯಾನ್-ಇಂಡಿಯಾ ಸ್ಟಾರ್‌ಡಮ್ ಸಾಧಿಸಲು ಇದು ಅನೇಕ ಸೆಲೆಬ್ರಿಟಿಗಳಿಗೆ ದಾರಿ ಮಾಡಿಕೊಟ್ಟಿದೆ. ಕೆಜಿಎಫ್ ಮತ್ತು ಬಾಹುಬಲಿ, ಪುಷ್ಪ: ದಿ ರೈಸ್, ಕಾಂತಾರ ಮುಂತಾದ ಚಲನಚಿತ್ರಗಳು ಸಿನಿಪ್ರಿಯರಿಂದ ವ್ಯಾಪಕವಾಗಿ ಪ್ರೀತಿಸಲ್ಪಟ್ಟಿವೆ. ಕೆಲವು ಪ್ರಾದೇಶಿಕ ನಟಿಯರು ತಮ್ಮ ಪ್ಯಾನ್-ಇಂಡಿಯನ್ ಸಿನಿಮಾಗಳಿಂದಾಗಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್‌ಡಮ್ ಗಳಿಸಿದ ಕೆಲವು ಕನ್ನಡ ನಟಿಯರ ಬಗ್ಗೆ ಇಂದು ತಿಳಿಯೋಣ.
ಪೂಜಾ ಹೆಗ್ಡೆ: ಪೂಜಾ ಹೆಗ್ಡೆ ದಕ್ಷಿಣ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಹೃತಿಕ್ ರೋಷನ್ ಜೊತೆ ಮೊಹೆಂಜೊ ದಾರೊ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದರು. ಹೌಸ್‌ಫುಲ್ 4 ಮತ್ತು ಸರ್ಕಸ್‌ನಂತಹ ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಸೇರಿದಂತೆ ಅನೇಕ ಅನುಭವಿ ಬಿ-ಟೌನ್ ತಾರೆಗಳೊಂದಿಗೆ ಕೆಲಸ ಮಾಡಿದ್ದಾರೆ. ಇದೀಗ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ಕಾಣಿಸಿಕೊಂಡಿದ್ದು, ಸಾಕಷ್ಟು ಪ್ರೀತಿ ಸಂಪಾದಿಸಿದ್ದಾರೆ. ಕಳೆದ ವರ್ಷ, ಅವರ ಎರಡು ಪ್ಯಾನ್-ಇಂಡಿಯನ್ ಪ್ರಾಜೆಕ್ಟ್‌ಗಳಾದ ರಾಧೆ ಶ್ಯಾಮ್ ಮತ್ತು ಬೀಸ್ಟ್ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದವು.
ಇದನ್ನೂ ಓದಿ: ಪರಿಣಿತಿ ಪ್ರೇಮ ಕಥೆ.. ಆಪ್ ಸಂಸದ - ಬಿಟೌನ್ ಬೆಡಗಿಯ ಲವ್ ಕಹಾನಿ ಶುರುವಾಗಿದ್ದೆಲ್ಲಿ ಗೊತ್ತಾ?
ರಶ್ಮಿಕಾ ಮಂದಣ್ಣ : ಪ್ಯಾನ್-ಇಂಡಿಯನ್ ತಾರೆಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಅವರು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಸ್ಟೈಲಿಶ್ ಪಾತ್ರದಿಂದ ಪ್ರೇಕ್ಷಕರನ್ನು ರಂಜಿಸುತ್ತಾರೆ. ಸಿದ್ಧಾರ್ಥ್ ಮಲ್ಹೋತ್ರಾ ಎದುರು ಮಿಷನ್ ಮಜ್ನು, ಪುಷ್ಪ: ದಿ ರೈಸ್, ವಾರಿಸು ಮುಂತಾದ ಚಿತ್ರಗಳಲ್ಲಿ ರಶ್ಮಿಕಾ ಅಭಿನಯಿಸಿದ್ದು, ನ್ಯಾಷನಲ್ ಕ್ರಶ್ ಎಂದೇ ಖ್ಯಾತರಾಗಿದ್ದಾರೆ.
ಸಪ್ತಮಿ ಗೌಡ : ಕನ್ನಡ ನಟಿ ಸಪ್ತಮಿ ಗೌಡ ಕಾಂತಾರ ಚಿತ್ರದಲ್ಲಿನ ಪಾತ್ರದಿಂದ ಪ್ಯಾನ ಇಂಡಿಯಾ ಸ್ಟಾರ್ ಡಮ್ ಪಡೆದುಕೊಂಡರು. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ಸಖತ್ ಹಿಟ್ ನೀಡಿತು. ಲೀಲಾ ಪಾತ್ರದ ಮೂಲಕ ಸಪ್ತಮಿ ಪ್ಯಾನ್-ಇಂಡಿಯಾ ಸ್ಟಾರ್ ಆದರು.
ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ಆ ಒಂದು ವಿಚಾರಕ್ಕೆ ವಿಷ್ಣವರ್ಧನ್ ಮೇಲಿತ್ತು ಕೋಪ!
ಅನುಷ್ಕಾ ಶೆಟ್ಟಿ: ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ ಇನ್ನೊಬ್ಬ ಕನ್ನೆ ಮೂಲದ ನಟಿ ಅನುಷ್ಕಾ ಶೆಟ್ಟಿ. ರಾಜಮೌಳಿ ನಿರ್ದೇಶನದ ಬಾಹುಬಲಿಯಲ್ಲಿ ದೇವಸೇನಾ ಪಾತ್ರದ ಮೂಲಕ ಅನುಷ್ಕಾ ದೇಶಾದ್ಯಂತ ಖ್ಯಾತರಾದರು.
ಕೃತಿ ಶೆಟ್ಟಿ: 19 ವರ್ಷದ ನಟಿ ಕೃತಿ ಶೆಟ್ಟಿ, ಮಂಗಳೂರಿನವರಾಗಿದ್ದಾರೆ. ಈಗಾಗಲೇ ದಿ ವಾರಿಯರ್, ಶ್ಯಾಮ್ ಸಿಂಘ ರಾಯ್ ಮತ್ತು ಬಂಗಾರರಾಜು ಜೊತೆಗೆ ಉಪ್ಪೇನ ಸೇರಿದಂತೆ ಕೆಲವು ಯಶಸ್ವಿ ಚಲನಚಿತ್ರಗಳನ್ನು ನೀಡಿದ್ದಾರೆ. ಹೃತಿಕ್ ರೋಷನ್ ಅವರ ಸಿನಿಮಾವೊಂದರಲ್ಲಿ ಚಿಕ್ಕದಾದರೂ ಮಹತ್ವದ ಪಾತ್ರವನ್ನು ಹೊಂದಿದ್ದು, ಆ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‌ಡಮ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.