Matte Maduve : ʼಮತ್ತೆ ಮದುವೆʼ ಟೀಸರ್‌ ರಿಲೀಸ್‌ : ಸಖತ್ತಾಗಿದೆ ಪವಿತ್ರಾ-ನರೇಶ್‌ ಲವ್‌ ಕಹಾನಿ..! 

Pavithra lokesh Naresh : ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಟನೆ ಮತ್ತೆ ಮದುವೆ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ನರೇಶ್ ಮತ್ತು ಪವಿತ್ರಾ ಅವರ ಪ್ರೇಮ ಪ್ರಣಯ ಕಥೆಯನ್ನ ಒಳಗೊಂಡ ಮತ್ತು ಇತ್ತೀಚಿನ ವಿವಾದಗಳ ಸುತ್ತ ನಡೆದ ಘಟನೆಯ ಕಥೆಯನ್ನ ಈ ಸಿನಿಮಾ ಒಳಗೊಂಡಿದೆ ಎಂದು ಟೀಸರ್‌ ನೋಡಿದ್ರೆ ಅರ್ಥವಾಗುತ್ತದೆ.

Written by - Krishna N K | Last Updated : Apr 21, 2023, 04:15 PM IST
  • ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಟನೆ ಮತ್ತೆ ಮದುವೆ ಚಿತ್ರದ ಟೀಸರ್‌ ರಿಲೀಸ್‌.
  • ನರೇಶ್ ಮತ್ತು ಪವಿತ್ರಾ ಅವರ ಪ್ರೇಮ ಪ್ರಣಯ ಕಥೆಯನ್ನ ಒಳಗೊಂಡ ಸಿನಿಮಾ ಮತ್ತೆ ಮದುವೆ.
  • ಇಬ್ಬರ ಕುರಿತು ಕೇಳಿಬಂದ ಇತ್ತೀಚಿನ ವಿವಾದಗಳು ಮತ್ತು ತಮ್ಮ ಲವ್‌ ಸ್ಟೋರಿಯನ್ನು ಈ ಸಿನಿಮಾ ಒಳಗೊಂಡಿದೆ.
Matte Maduve : ʼಮತ್ತೆ ಮದುವೆʼ ಟೀಸರ್‌ ರಿಲೀಸ್‌ : ಸಖತ್ತಾಗಿದೆ ಪವಿತ್ರಾ-ನರೇಶ್‌ ಲವ್‌ ಕಹಾನಿ..!  title=

Matte maduve Teaser : ಟಾಲಿವುಡ್‌ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಮುಂಬರುವ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ʼಮತ್ತೆ ಮದುವೆʼ ಟೀಸರ್ ಇಂದು ಬೆಳಿಗ್ಗೆ ರಿಲೀಸ್‌ ಆಗಿದೆ. ನರೇಶ್ ಮತ್ತು ಪವಿತ್ರಾ ಅವರ ಪ್ರೇಮ ಪ್ರಣಯ ಕಥೆಯನ್ನ ಒಳಗೊಂಡ ಮತ್ತು ಇತ್ತೀಚಿನ ವಿವಾದಗಳ ಸುತ್ತ ನಡೆದ ಘಟನೆಯ ಕಥೆಯನ್ನ ಈ ಸಿನಿಮಾ ಒಳಗೊಂಡಿದ್ದು, ಟೀಸರ್ ನೋಡಿದ್ರೆ ಕುತೂಹಲ ಹೆಚ್ಚಾಗುತ್ತದೆ.

ʼಮತ್ತೆ ಮದುವೆʼ ಟೀಸರ್‌ನಲ್ಲಿ ನರೇಶ್‌ ಪತ್ನಿ ರಮ್ಯಾ ರಘುಪತಿ ಸುದ್ದಿಗೋಷ್ಠಿಯಿಂದ ಪ್ರಾರಂಭವಾಗುತ್ತದೆ. ಅಲ್ಲದೆ, ಮೈಸೂರಿನ ಲಾಡ್ಜ್‌ವೊಂದರಲ್ಲಿ ನಡೆದ ಘಟನೆಯೂ ಸಹ ಯಥಾವತ್ತಾಗಿ ಈ ಟೀಸರ್‌ನಲ್ಲಿದೆ. ಮತ್ತೊಂದೆಡೆ, ಪವಿತ್ರಾ ಲೋಕೇಶ್‌ನಲ್ಲಿ ನರೇಶ್ ಎರಡನೇ ಬಾರಿಗೆ ಪ್ರೀತಿಗೆ ಬಿಳುವ ಮತ್ತು ಅವರಿಬ್ಬರು ಎಲ್ಲಾ ಗೊಂದಲಗಳ ನಡುವೆಯೂ ಸಂತೋಷದ ಸಮಯವನ್ನು ಕಳೆಯುವ ದೃಶ್ಯಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಮತ್ತೆ ಮದುವೆ ಪವಿತ್ರಾ ಮತ್ತು ನರೇಶ್‌ ನಡುವೆ ನಡೆದ ಸತ್ಯ ಘಟನೆ ಆಧಾರಿತ ಲವ್‌ ಸ್ಟೋರಿ ಅಂತ ಮೇಲ್ನೋಟಕ್ಕೆ ಅರ್ಥವಾಗುತ್ತದೆ.

ಇದನ್ನೂ ಓದಿ: Pooja Hegde To Rashmika: ಪ್ಯಾನ್ ಇಂಡಿಯಾ ಸ್ಟಾರ್‌ಡಮ್ ಗಳಿಸಿದ ಕನ್ನಡ ನಟಿಯರು ಇವರು

ಹಿರಿಯ ನಿರ್ದೇಶಕ ಎಂ.ಎಸ್.ರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ಮತ್ತೆ ಮದುವೆ ನಿರ್ಮಾಣವಾಗಿದೆ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಈ ಚಿತ್ರ ಸಿದ್ಧವಾಗಿದೆ. ತೆಲುಗು ಆವೃತ್ತಿಗೆ ಮಳ್ಳಿ ಪೆಳ್ಳಿ ಎಂದು ಹೆಸರಿಡಲಾಗಿದೆ. ಈ ವರ್ಷದ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News