ನವದೆಹಲಿ: ಡಿಸೆಂಬರ್‌ನಲ್ಲಿ ತೆರೆಗೆ ಬಂದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಡುಗಳಿಂದ ಹಿಡಿದು ಡೈಲಾಗ್‌ಗಳವರೆಗೆ ಪ್ರೇಕ್ಷಕರು ಸಿನಿಮಾವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಈ ಚಿತ್ರದ ‘ಸಾಮಿ-ಸಾಮಿ’, ‘ಶ್ರೀವಲ್ಲಿ’, ‘ಓ ಅಂಟಾವಾ’ ಸೂಪರ್ ಹಿಟ್ ಹಾಡುಗಳು ಜನರನ್ನು ಸಖತ್ತಾಗಿ ಸೆಳೆಯುತ್ತಿವೆ. ಈ ಹಾಡುಗಳು ಸೋಷಿಯಲ್ ಮೀಡಿಯಾ(Social Media)ದಲ್ಲೂ ಸಾಕಷ್ಟು ಸದ್ದು ಮಾಡುತ್ತಿವೆ.


COMMERCIAL BREAK
SCROLL TO CONTINUE READING

ಸೆಲೆಬ್ರಿಟಿಗಳಿಂದ ಹಿಡಿದು ಸೋಷಿಯಲ್ ಮೀಡಿಯಾ(Social Media) ಬಳಕೆದಾರರು ತಮ್ಮ ರೀಲ್ಸ್ ಗಳಲ್ಲಿ ಈ ಹಾಡುಗಳನ್ನು ಬಳಸುತ್ತಿದ್ದಾರೆ. ಈಗ ಅಲ್ಲು ಅರ್ಜುನ್ ಅವರ ‘ಶ್ರೀವಲ್ಲಿ’ ಹುಕ್ ಸ್ಟೆಪ್ ಅನ್ನು ಜನನಿಬಿಡ ಪ್ರದೇಶದಲ್ಲಿ ಯುವಕನೊಬ್ಬ ಬಳಸಿರುವುದು ಗಮನ ಸೆಳೆಯುತ್ತಿದೆ. ಈತ ಮುಂಬೈ ಲೋಕಲ್ ಟ್ರೈನ್‌ಗೆ ಹುಕ್ ಸ್ಟೆಪ್ ಮೂಲಕ ಹೇಗೆ ಹೋಗುವುದು ಎಂಬುದನ್ನು ‘ಶ್ರೀವಲ್ಲಿ’ ಹಾಡಿನ(Srivalli Song) ಮೂಲಕ ತೋರಿಸಿದ್ದಾನೆ. ಈ ವಿಡಿಯೋ ನೋಡಿದ ಬಳಿಕ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.


 

 

 

 



 

 

 

 

 

 

 

 

 

 

 

A post shared by Dhiraj sanap (@dhirajjjjj_)


ಇದನ್ನೂ ಓದಿ: ರಾಜ್ ಬಿ ಶೆಟ್ಟಿಗೆ ‘RGV’ ಶಹಬ್ಬಾಸ್ ಗಿರಿ: ‘ಗರುಡ ಗಮನ ವೃಷಭ ವಾಹನ’ ನೋಡಿ ರಾಮ್ ಗೋಪಾಲ್ ವರ್ಮಾ ಹೇಳಿದ್ದೇನು?


ಆ ವ್ಯಕ್ತಿ ಅಲ್ಲು ಅರ್ಜುನ್‌(Allu Arjun)ನನ್ನು ಕಾಪಿ ಮಾಡುತ್ತಿರುವುದು ಕಂಡುಬಂದಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮುಂಬೈ ಸ್ಥಳೀಯರೊಳಗೆ(Mumbai Local Train) ಮುಂಬೈಕರ್‌ಗಳು ಹೇಗೆ ದಾರಿ ಕಂಡುಕೊಳ್ಳುತ್ತಾರೆ ಎಂಬುದನ್ನು ತೋರಿಸಲು ಯುವಕ ‘ಶ್ರೀವಲ್ಲಿ’ ಹುಕ್ ಸ್ಟೆಪ್ಸ್ ಬಳಸಿರುವುದನ್ನು ಕಾಣಬಹುದು. ಈ ತಮಾಷೆಯ ವಿಡಿಯೋ ಜನರ ಮೊಗದಲ್ಲಿ ನಗು ತರಿಸಿದೆ. 'pushpa in locals' ಕ್ಯಾಪ್ಶನ್ ಬರೆದು ಈ ವಿಡಿಯೋ ಶೇರ್ ಮಾಡಲಾಗಿದೆ.


ಯುವಕನ ಡ್ಯಾನ್ಸ್ ಸ್ಟೆಪ್ಸ್ ನಗುವೋ ನಗು!


‘ಪುಷ್ಪ’ ಚಿತ್ರ(Pushpa Movie)ದ ಶ್ರೀವಲ್ಲಿ ಹಾಡಿಗೆ ಯುವಕ ಮಾಡಿರುವ ಹುಕ್ ಡ್ಯಾನ್ಸ್ ಸ್ಟೆಪ್ಸ್ ಕಂಡು ಪ್ರತಿಯೊಬ್ಬರು ನಕ್ಕಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸುಮಾರು 55 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸಾವಿರಾರು ಜನರು ಶೇರ್ ಮಾಡಿದ್ದಾರೆ. ತುಂಬಾ ತಮಾಷೆಯಾಗಿರುವ ಈ ವಿಡಿಯೋಗೆ ನೆಟಿಜನ್ಸ್ ಕೂಡ ಅಷ್ಟೇ ತಮಾಷೆಯಾಗಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ಭಾರತೀಯ ಚಿತ್ರರಂಗದ ಗಲ್ಲಾಪೆಟ್ಟಿಯನ್ನು ಕೊಳ್ಳೆ ಹೊಡೆದಿದೆ.


ಇದನ್ನೂ ಓದಿ: Jai Bhim At Oscars: Academy Awards ನ ಅಧಿಕೃತ YouTube ಚಾನೆಲ್ ನಲ್ಲಿ ಸ್ಥಾನ ಪಡೆದ 'ಜೈ ಭೀಮ್' ದೃಶ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.