Jai Bhim At Oscars: Academy Awards ನ ಅಧಿಕೃತ YouTube ಚಾನೆಲ್ ನಲ್ಲಿ ಸ್ಥಾನ ಪಡೆದ 'ಜೈ ಭೀಮ್' ದೃಶ್ಯ

Jai Bhim At Oscars: ಜೈ ಭೀಮ್ ಚಿತ್ರದ ಈ ಯಶಸ್ಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಕುರಿತು ಬರೆದುಕೊಂಡಿರುವ ಟ್ವಿಟ್ಟರ್ ಬಳಕೆದಾರರು, 'ಸೂರ್ಯ, ಭಾರತ ಮತ್ತು ಭಾರತೀಯ ಚಿತ್ರರಂಗದ ಜನರಿಗೆ ಹೆಮ್ಮೆಯ ಕ್ಷಣವನ್ನು ನೀಡಿದ್ದಾರೆ' ಎಂದಿದ್ದಾರೆ.

Written by - Nitin Tabib | Last Updated : Jan 18, 2022, 04:04 PM IST
  • ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರಕ್ಕೆ ಮತ್ತೊಂದು ಗರಿ.
  • ಆಸ್ಕರ್ ಯೂಟ್ಯೂಬ್ ಚಾನೆಲ್ ನಲ್ಲಿ ಜೈ ಭೀಮ್ ಗೆ ಸ್ಥಾನ ಸಿಕ್ಕಿದೆ.
  • ಈ ಚಿತ್ರದ ಒಂದು ದೃಶ್ಯವನ್ನು ಅಕಾಡೆಮಿ ಅವಾರ್ಡ್ಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತೋರಿಸಲಾಗಿದೆ.
Jai Bhim At Oscars: Academy Awards ನ ಅಧಿಕೃತ YouTube ಚಾನೆಲ್ ನಲ್ಲಿ ಸ್ಥಾನ ಪಡೆದ 'ಜೈ ಭೀಮ್' ದೃಶ್ಯ title=
Jai Bhim At Oscars (File Photo)

Jai Bhim At Oscars: ಸೌತ್‌ನ ಸೂಪರ್‌ಸ್ಟಾರ್ Suriya ಅವರ Jai Bheem ಚಿತ್ರದ ಹೆಸರಿನಲ್ಲಿ ಹೊಸ ಸಾಧನೆ ದಾಖಲಾಗಿದೆ. ಆಸ್ಕರ್ ಯೂಟ್ಯೂಬ್ ಚಾನೆಲ್ ನಲ್ಲಿ ಜೈ ಭೀಮ್ ಗೆ ಸ್ಥಾನ ಸಿಕ್ಕಿದೆ. ಹೌದು, ಈ ಚಿತ್ರದ ಒಂದು ದೃಶ್ಯವನ್ನು ಅಕಾಡೆಮಿ ಅವಾರ್ಡ್ಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತೋರಿಸಲಾಗಿದೆ. ಇದರೊಂದಿಗೆ ಸೂರ್ಯ ಅಭಿನಯದ ಚಿತ್ರ ಈ ಗೌರವ ಪಡೆದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ-Dhanush Divorce : ಪತ್ನಿಗೆ 'ಡೈವೋರ್ಸ್' ನೀಡಿದ ತಮಿಳು ನಟ ಧನುಷ್! 

ಜೈ ಭೀಮ್ ಚಿತ್ರದ ಈ ಯಶಸ್ಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಕುರಿತು ಬರೆದುಕೊಂಡಿರುವ ಟ್ವಿಟ್ಟರ್ ಬಳಕೆದಾರರೊಬ್ಬರು,  'ಸೂರ್ಯ, ಭಾರತ ಮತ್ತು ಭಾರತೀಯ ಚಿತ್ರರಂಗದ ಜನರಿಗೆ ಹೆಮ್ಮೆಯ ಕ್ಷಣವನ್ನು ನೀಡಿದ್ದಾರೆ. ಇದೊಂದು ಅದ್ಭುತ ಚಿತ್ರ' ಎಂದಿದ್ದಾರೆ. ಈ ಸುದ್ದಿಯನ್ನು ಕೇಳಿ, ನಾನು ಚಂದ್ರನ ಆಚೆಗೆ ತಲುಪಿದೆ. ಸೂರ್ಯನು ಹೀಗೆಯೇ ಬೆಳಗುತ್ತಿರಲಿ' ಎಂದು ಮತ್ತೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ-Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!

ಸೂರ್ಯ ಅಭಿನಯದ ಈ ಚಿತ್ರವು ಗೋಲ್ಡನ್ ಗ್ಲೋಬ್ಸ್ 2022 (Golden Globe Awards 2022) ಗೆ ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಲ್ಲದೆ, ಈ ಚಿತ್ರವು ಹಲವಾರು ದಾಖಲೆಗಳನ್ನು ಮಾಡಿದೆ ಮತ್ತು ಇದು IMDb ನಲ್ಲಿ 9.6 ರೇಟಿಂಗ್ ಅನ್ನು ಪಡೆದುಕೊಂಡಿದೆ.

ಇದನ್ನೂ ಓದಿ-Allu Arjun ಅಭಿನಯದ 'Pushpa: The Rise' ಹೊಗಳಿ Cute Cartoon ಬಿಡುಗಡೆ ಮಾಡಿದ Amul

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News