ಬೆಂಗಳೂರು: ರಾಜ್ ಬಿ ಶೆಟ್ಟಿಗೆ ಮತ್ತು ರಿಷಬ್ ಶೆಟ್ಟಿ(Raj B Shetty) ಅಭಿನಯದ 'ಗರುಡ ಗಮನ ವೃಷಭ ವಾಹನ'(Garuda Gamana Vrishabha Vahana) ಸಿನಿಮಾ ZEE5 ಒಟಿಟಿಯಲ್ಲಿ ಸಖತ್ ಕಮಾಲ್ ಮಾಡಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ZEE5 ಒಟಿಟಿಗೆ ಎಂಟ್ರಿ ಕೊಟ್ಟಿದ್ದ ಈ ಸಿನಿಮಾ ಕೇವಲ ಮೂರೇ ದಿನದಲ್ಲಿ ದಾಖಲೆ ಬರೆದಿದೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೊದಲು 3 ದಿನಗಳಲ್ಲಿಗಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಇದೀಗ ಈ ಸಿನಿಮಾವನ್ನು ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮ್(Ram Gopal Varma)ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ: Dhanush Divorce : ಪತ್ನಿಗೆ 'ಡೈವೋರ್ಸ್' ನೀಡಿದ ತಮಿಳು ನಟ ಧನುಷ್!
ಹೌದು, ‘ಗರುಡ ಗಮನ ವೃಷಭ ವಾಹನ’ ಸಿನಿಮಾ(Garuda Gamana Vrishabha Vahana Movie) ಚಿತ್ರಪ್ರೇಮಿಗಳು ಮಾತ್ರವಲ್ಲದೇ ವಿವಿಧ ಸಿನಿಮಾರಂಗದ ಸೆಲೆಬ್ರಿಟಿಗಳಿಗೂ ಇಷ್ಟವಾಗಿದೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮನಸೋತಿದ್ದಾರೆ. ಇಡೀ ಸಿನಿಮಾಕ್ಕೆ ಫಿದಾ ಆಗಿರುವ RGV ನಿರ್ದೇಶಕ ರಾಜ್ ಬಿ ಶೆಟ್ಟಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಚಿತ್ರವನ್ನು, ರಾಜ್ ಬಿ ಶೆಟ್ಟಿಯವರ ಅಭಿನಯವನ್ನು ಒಂದಷ್ಟು ವಿಜ್ಞಾನ ಪದಗಳಲ್ಲಿ ಬಣ್ಣಿಸಿದ್ದಾರೆ. ಈ ಸಿನಿಮಾ ಮತ್ತೊಂದು ಲೆವೆಲ್ ನಲ್ಲಿದೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ ಎಂದಿರುವ RGV, ಇಡೀ ಚಿತ್ರ ‘ಅಲ್ಟ್ರಾಸ್ಕೋಪಿಕ್’ ಎಂದು ಹಾಡಿ ಹೊಗಳಿದ್ದಾರೆ.
Hey @RajbShettyOMK ur film is just stratospheric and ur screen presence is metamorphic and the overall effect is ULTRASCOPIC https://t.co/4bMlAmKylH
— Ram Gopal Varma (@RGVzoomin) January 17, 2022
ಇದನ್ನೂ ಓದಿ: Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!
ರಾಮ್ ಗೋಪಾಲ್ ವರ್ಮಾಗೂ ಮೊದಲೇ ಬಾಲಿವುಡ್(Bollywood)ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಇಷ್ಟಪಟ್ಟಿದ್ದರು. ಇದೀಗ RGV ಕೂಡ ಈ ಸಿನಿಮಾಗೆ ಫಿದಾ ಆಗಿದ್ದಾರೆ. ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಎಂಟ್ರಿ ಕೊಟ್ಟಿದ್ದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಥಿಯೇಟರ್ ನಲ್ಲೂ ಧೂಳ್ ಎಬ್ಬಿಸಿತ್ತು. ಈಗ ZEE5 ಒಟಿಟಿ(ZEE5 OTT)ಯಲ್ಲಿ ಕಮಾಲ್ ಮಾಡುತ್ತಿದೆ. ಲಕ್ಷಾಂತರ ಅಭಿಮಾನಿಗಳು ಕೂಡ ಈ ಸಿನಿಮಾವನ್ನು ಕಣ್ತುಂಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.