ಬೆಂಗಳೂರು: ಸಾಮಾನ್ಯವಾಗಿ ಸಿನಿಮಾಗಳ ಫಸ್ಟ್‍ಲುಕ್ ಪೋಸ್ಟರ್‍ಗಳನ್ನು ರಾಜಕಾರಣಿಗಳು ಅಥವಾ ಹೀರೋಗಳಿಂದ ಬಿಡುಗಡೆ ಮಾಡಿಸಲಾಗುತ್ತದೆ. ಆದರೆ ಹೊಸಬರ ‘Zoom Call’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು  ವಿಭಿನ್ನವಾಗಿ ಅಕ್ಷಯ ತೃತೀಯ ದಿನದಂದು ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೊದಲ ಬಾರಿಗೆ ವಿಮಾನದಲ್ಲಿ ಬಿಡುಗಡೆ ಮಾಡಿರುವ ಖ್ಯಾತಿ Zoom Call ಚಿತ್ರಕ್ಕೆ ಸೇರುತ್ತದೆ. ಭೂಮಿಯಿಂದ 37,000 ಅಡಿ ಎತ್ತರದಲ್ಲಿ ಮೋಡದ ಮೇಲೆ ನೀಲಿ ಆಕಾಶದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕ್ಷಣ ಅದ್ಭುತವಾಗಿತ್ತು ಎಂದು ನಿರ್ದೇಶಕ ಮಹೇಶ್ ಅನುಭವ ಹಂಚಿಕೊಂಡರು.


ಇದನ್ನೂ ಓದಿ: "ಮಚ್ಚ್‌ಲಕ್ಷ್ಮೀ" ಸ್ವಾಗತಕ್ಕೆ ಕ್ಷಣಗಣನೆ; ಯಾರದು ʼಕೆಡಿʼಯ ಆ ಲೇಡಿ..?


 Zoom Call ಚಿತ್ರ ಕನ್ನಡದ ಮೊದಲ ಕಂಪ್ಯೂಟರ್ ಸ್ಕ್ರೀನ್ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೂ ಸಹ ಪಾತ್ರವಾಗಿದೆ. ಕಂಪ್ಯೂಟರ್ ಸ್ಕ್ರೀನ್ ಹಾರರ್ ಜಾನರ್ ಸಿನಿಮಾಗಳು ಹಾಲಿವುಡ್‍ನಲ್ಲಿ ಬಂದಿವೆ. ಆದರೆ ಕನ್ನಡದಲ್ಲಿ ಜೂಮ್ ಕಾಲ್ ಮೊದಲ ಸಿನಿಮಾವಾಗಲಿದೆ. ಹೊಸ ಫಾರ್ಮೆಟ್ನಲ್ಲಿ ಸಿನಿಮಾ ನೋಡಲಿರುವ ಪ್ರೇಕ್ಷಕರಿಗೆ ಖಂಡಿತವಾಗಿಯೂ ವಿಭಿನ್ನ ಅನುಭವ ಸಿಗಲಿದೆ ಎಂದು ಮಾಹಿತಿ ನೀಡಿದರು ನಿರ್ದೇಶಕ ಮಹೇಶ್.


Zoom Call ಚಿತ್ರವು ಮೇಕಿಂಕ್‍ನಿಂದ ಮತ್ತೆ ವಿಭಿನ್ನ ಪ್ರಚಾರದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸದ್ಯಕ್ಕೆ Zoom Call ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿದೆ. Zoom Call ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಜೊತೆಗೆ ಶ್ರೀವಾರಿ ಪಿಕ್ಚರ್ಸ್ ಬ್ಯಾನರ್‍ನಲ್ಲಿ ನಿರ್ಮಾಣವನ್ನು ಸಹ ಮಹೇಶ್ ಹೆಚ್.ಎಂ ಮಾಡಿದ್ದಾರೆ.


ಇದನ್ನೂ ಓದಿ: Shruti Haasan Tattoo: ಈ ದೇವರ ಟ್ಯಾಟೂ ಹಾಕಿಸಿದ ಶ್ರುತಿ ಹಾಸನ್, ಇದಕ್ಕಿದೆಯಂತೆ ಒಂದು ಹಿನ್ನೆಲೆ! 


ಎಸ್.ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನವಿರುವ ಈ ಚಿತ್ರಕ್ಕೆ ವಿಜಯರಾಜ್ ಸಂಗೀತ ನೀಡಿದ್ದಾರೆ. ರೇಣುಕಾ, ಲಕ್ಷ್ಮೀ ಅರಸ್, ರೂಪಾ ಮನಕೂರ್, ಅರ್ಜುನ್, ಮಹೇಂದ್ರ, ಪರಂ ಮುಂತಾದವರು Zoom Call ಚಿತ್ರದಲ್ಲಿ ಅಭಿನಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.