Shruti Haasan Tattoo: ಈ ದೇವರ ಟ್ಯಾಟೂ ಹಾಕಿಸಿದ ಶ್ರುತಿ ಹಾಸನ್, ಇದಕ್ಕಿದೆಯಂತೆ ಒಂದು ಹಿನ್ನೆಲೆ!

Shruti Haasan Tattoo: ಟಾಲಿವುಡ್‌ ನಟಿ ಶ್ರುತಿ ಹಾಸನ್ ಮತ್ತೊಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ತಮ್ಮ ದೇಹದ ಮೇಲೆ ಅನೇಕ ಟ್ಯಾಟೂ ಹಾಕಿಸಿಕೊಂಡಿರುವ ಶ್ರುತಿ ಹಾಸನ್‌ ಈ ಬಾರಿ ವಿಶೇಷ ಟ್ಯಾಟೂ ವನ್ನು ಹಾಕಿಸಿದ್ದು, ಎಲ್ಲರ ಗಮನಸೆಳೆಯುತ್ತಿದೆ.   

Written by - Chetana Devarmani | Last Updated : Apr 25, 2023, 01:21 PM IST
  • ಟಾಲಿವುಡ್‌ ನಟಿ ಶ್ರುತಿ ಹಾಸನ್
  • ಹೊಸ ಹಚ್ಚೆ ಹಾಕಿಸಿಕೊಂಡ ನಟಿ
  • ಈ ದೇವರ ಟ್ಯಾಟೂ ಹಾಕಿಸಿದ ಶ್ರುತಿ ಹಾಸನ್
Shruti Haasan Tattoo: ಈ ದೇವರ ಟ್ಯಾಟೂ ಹಾಕಿಸಿದ ಶ್ರುತಿ ಹಾಸನ್, ಇದಕ್ಕಿದೆಯಂತೆ ಒಂದು ಹಿನ್ನೆಲೆ! title=
Shruti Haasan Tattoo

Shruti Haasan Tattoo: ನಟಿ ಮತ್ತು ಸಂಗೀತಗಾರ್ತಿ ಶ್ರುತಿ ಹಾಸನ್ ಮತ್ತೊಂದು ಹಚ್ಚೆ ಹಾಕಿಸಿದ್ದಾರೆ. ಈ ಬಾರಿ ತಮಿಳಿನಲ್ಲಿ ಭಗವಾನ್ ಮುರುಗನ್ ವೇಲ್ ದೇವರ ಹೆಸರನ್ನು ಹಾಕಿಸಿದ್ದಾರೆ. ಶ್ರುತಿ ಹಾಸನ್ ಈ ಹಿಂದೆ ಅನೇಕ ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಹೊಸ ಟ್ಯಾಟೂ ಅವಳ ಧಾರ್ಮಿಕ ನಂಬಿಕೆಗಳು ಮತ್ತು ಸೆಲ್ಫ್‌ ಲವ್‌ನ್ನು ಪ್ರತಿಬಿಂಬಿಸುವುದರಿಂದ ತುಂಬಾ ವಿಶೇಷವಾಗಿದೆ.

ಹೊಸ ಟ್ಯಾಟೂ ಬಗ್ಗೆ ಮಾತನಾಡಿದ ಶ್ರುತಿ ಹಾಸನ್‌, "ನಾನು ಯಾವಾಗಲೂ ಆಧ್ಯಾತ್ಮಿಕ ಒಲವು ಹೊಂದಿದ್ದೇನೆ. ಮುರುಗನ್ ವೇಲ್ ದೇವರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಈ ಹಚ್ಚೆ ಮೂಲಕ ನನ್ನ ಭಕ್ತಿಯನ್ನು ಪ್ರದರ್ಶಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ. 

ಇದನ್ನೂ ಓದಿ: ಮಂಗಳೂರಿನಲ್ಲಿ ಈ ಹಣ್ಣಿಗಾಗಿ ಪರದಾಡಿದ ಕುಡ್ಲ ಬೆಡಗಿ ಪೂಜಾ ಹೆಗ್ಡೆ..!

Shruti Haasan Tattoo

ನಟಿ ತನ್ನ ಹೊಸ ಟ್ಯಾಟೂವನ್ನು Instagram ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಶ್ರುತಿ ಹಾಸನ್ ಈ ಹಿಂದೆ ತನ್ನ ಮಣಿಕಟ್ಟಿನ ಮೇಲೆ ಗುಲಾಬಿ ಮತ್ತು ಕಿವಿಯ ಹಿಂದೆ ಸಂಗೀತದ ಜಿ ಕ್ಲೆಫ್ ಚಿಹ್ನೆಯ ಟ್ಯಾಟೂ ಹಾಕಿಸಿಕೊಂಡಿದ್ದರು. ಶ್ರುತಿ ಹಾಸನ್‌ ಪ್ರತಿಯೊಂದು ಟ್ಯಾಟೂಗಳು ವಿಶೇಷ ಅರ್ಥವನ್ನು ಹೊಂದಿವೆ.  

ಶ್ರುತಿ ಹಾಸನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದರು, ಅಲ್ಲಿ ಅಭಿಮಾನಿಗಳು ಅವರ ಮೇಲೆ ಅಭಿಮಾನವನ್ನು ಅತ್ಯಂತ ಸೃಜನಶೀಲ ಮತ್ತು ಹೃದಯಸ್ಪರ್ಶಿ ರೀತಿಯಲ್ಲಿ ತೋರಿಸಿದರು. ಈವೆಂಟ್‌ನಲ್ಲಿ ಅವರು ತಮ್ಮ ನೆಚ್ಚಿನ ಕಪ್ಪು ಬಣ್ಣದ ಡ್ರೆಸ್‌ ಧರಿಸಿದ್ದರು. ಶ್ರುತಿ ಹಾಸನ್ ಸಲಾರ್ ಚಿತ್ರದಲ್ಲಿ ಪ್ರಭಾಸ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ, ಬಹುನಿರೀಕ್ಷಿತ ಅಂತರಾಷ್ಟ್ರೀಯ ಚಲನಚಿತ್ರ, 'ದಿ ಐ' ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಇದನ್ನೂ ಓದಿ: ಶೂಟಿಂಗ್‌ ಸೆಟ್‌ನಲ್ಲಿ ಸಿಗರೇಟ್‌ ಹೊಡೆದ ಸಲ್ಮಾನ್‌ ಖಾನ್‌, ವೈರಲ್‌ ಆಯ್ತು ವಿಡಿಯೋ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News