Sivakarthikeyan : ವೈಜ್ಞಾನಿಕ ಕಾದಂಬರಿಯನ್ನು ಆಧರಿಸಿದ ಶಿವಕಾರ್ತಿಕೇಯನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಅಯಲಾನ್ʼ ಈ ಚಿತ್ರಕ್ಕೆ ಆರ್.ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಒಂದು ವರ್ಷದಿಂದ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಚಿತ್ರವನ್ನು ಅತೀ ಹೆಚ್ಚು ವಿಜ್ಯೂವಲ್ ಎಫೆಕ್ಟ್ಸ್ ಬಳಸಿ ನಿರ್ಮಾಣ ಮಾಡಲಾಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸುತ್ತಿದೆ.
ಈ ಸಿನಿಮಾದ ಮತ್ತೊಂದು ವಿಶೇಷ ಸಂಗತಿಯೆಂದರೆ ನಾಲ್ಕು ವರ್ಷಗಳ ಬಳಿಕ ರಾಕುಲ್ ಪ್ರೀತ್‌ಸಿಂಗ್ ಈ ಸಿನಿಮಾದ ಮೂಲಕ ತಮಿಳು ಸಿನಿರಂಗಕ್ಕೆ ಮತ್ತೇ ಮರಳಿದ್ದಾರೆ. ಅಭಿಮಾನಿಗಳಿಗೆ ಯಾವಾಗಲೂ ವಿಶಿಷ್ಟವಾದ ಸಿನಿಮಾಗಳನ್ನು ನೀಡುತ್ತಾ ಬಂದ ತಮಿಳಿನ ನಟ ಶಿವಕಾರ್ತಿಕೇಯನ್ ರಿಯಾಲಿಟಿ ಶೋಗಳಿಂದ ಆರಂಭವಾದ ಇವರ ಜರ್ನಿ ಹಾಸ್ಯ ನಟನಾಗಿ, ಬರಹಗಾರನಾಗಿ ,ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ.
Let’s fly high this diwali! 💥#AyalaanFromDiwali2023 👽🌟#Ayalaan@Ravikumar_Dir @arrahman @kjr_studios @24amstudios @Phantomfxstudio @Rakulpreet @ishakonnects @SharadK7 @iYogiBabu #Karunakaran #Niravshah @AntonyLRuben @muthurajthangvl @anbariv @SOUNDARBAIRAVI… pic.twitter.com/1EwMe02EUR
— Sivakarthikeyan (@Siva_Kartikeyan) April 24, 2023
ಇದನ್ನೂ ಓದಿ-Malaika arora : ವಯಸ್ಸು ಬರೀ ಸಂಖ್ಯೆ ಅಷ್ಟೇ ಅಲ್ವಾ..! ಮಲೈಕಾ ಅಂದಕ್ಕೆ ಸರಿಸಾರಿ ಯಾರು..?
ಇದೀಗ ನಟ ಶಿವಕಾರ್ತಿಕೇಯನ್ ಅವರು ಮಾಸ್ ಅವತಾರದೊಂದಿಗೆ ಅಯಲಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈ ನಟನ ಮೊದಲ ಫ್ಯಾನ್ ಇಂಡಿಯಾ ಸಿನಿಮಾ. ಇದು ಏಲಿಯನ್ಸ್ ಕಾದಂಬರಿ ಆಧಾರಿತವಾಗಿದ್ದರಿಂದ ದಕ್ಷಿಣಭಾರತದಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡ ಈ ಸಿನಿಮಾ ದಕ್ಷಿಣಭಾರತದ ಸಿನಿರಂಗದಲ್ಲಿ ಸೆಟ್ಟೆರುತ್ತಿರುವುದು ವಿಶಿಷ್ಟವೇ ಸರಿ.
ಈ ಸಿನಿಮಾ ಬಿಡುಗಡೆಗೆ ಮೂಹೂರ್ತ ಫಿಕ್ಸ್ ಆಗಿದ್ದು, 2023ರ ದೀಪಾವಳಿಯಂದು ಅಲಯಾನ್ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ-ʼಅಚಾತುರ್ಯದಿಂದ ನಿಮಗೆ ನೋವು ಮಾಡಿದ್ದೇನೆʼ..! ಮಾಧ್ಯಮಗಳಿಗೆ ʼಡಿಬಾಸ್ʼ ಬಹಿರಂಗ ಪತ್ರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.