Protein: ಮೊಟ್ಟೆ ಮತ್ತು ಪನ್ನೀರ್ ಹೆಚ್ಚಾಗಿ ಪ್ರೋಟೀನ್‌ನ ಮೂಲಗಳಾಗಿವೆ. ಹಾಗಾಗಿಯೇ ವೈದ್ಯರು ಮೊಟ್ಟೆ ಸೇವಿಸಲು ಸಲಹೆ ನೀಡುತ್ತಾರೆ. ಆದರೆ ನಮ್ಮಲ್ಲಿ ಹಲವರು ಮೊಟ್ಟೆ-ಪನ್ನೀರ್ ಅನ್ನು ತಿನ್ನುವುದಿಲ್ಲ. ಆದರೆ, ಕೇವಲ ಮೊಟ್ಟೆ, ಪನ್ನೀರ್ ಮಾತ್ರವಲ್ಲ ಕೆಲವು ದ್ವಿದಳ ಧಾನ್ಯಗಳೂ ಸಹ ನಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಅನ್ನು ಒದಗಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ಹೌದು, ಬೇಳೆಕಾಳುಗಳು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಬೇಳೆಕಾಳುಗಳಲ್ಲಿ ಹಲವು ವಿಧಗಳಿವೆ ಮತ್ತು ಪ್ರತಿಯೊಂದೂ ಸಹ ತನ್ನದೇ ಆದ ಅದ್ಭುತ ಪ್ರಯೋಜನಗಳನ್ನು ಹೊಂದಿವೆ. ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಇವುಗಳಲ್ಲಿ ಕಂಡು ಬರುತ್ತವೆ. ನಾವು ಪ್ರತಿದಿನ ನಮ್ಮ ಆಹಾರದಲ್ಲಿ ಸ್ವಲ್ಪ ಬೇಳೆಕಾಳುಗಳನ್ನು ಸೇರಿಸಿದರೆ, ನಮಗೆ ಸಾಕಷ್ಟು ಪ್ರೋಟೀನ್ ಸಿಗುತ್ತದೆ. 


ಬೇಳೆಕಾಳುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು?
ದ್ವಿದಳ ಧಾನ್ಯಗಳು ತೂಕ ಇಳಿಸಲು ಸಹ ಸಹಾಯ ಮಾಡುತ್ತವೆ:

ತೂಕ ನಷ್ಟ (Weight Loss), ಚಯಾಪಚಯ ಮತ್ತು ಉತ್ತಮ ಆರೋಗ್ಯಕ್ಕೆ ಪ್ರೋಟೀನ್ ಅತ್ಯಗತ್ಯ. ದೇಹವು ಆರೋಗ್ಯಕರವಾಗಿ ಮತ್ತು ಅದರ ಕಾರ್ಯನಿರ್ವಹಣೆಯನ್ನು ಸುಗಮವಾಗಿ ನಡೆಸಲು ಇತರ ಪೋಷಕಾಂಶಗಳಂತೆ ಪ್ರೋಟೀನ್ ಅಗತ್ಯವಿದೆ. ನಿಮ್ಮ ಸ್ನಾಯುಗಳು, ಅಂಗಾಂಶಗಳು, ಮೂಳೆಗಳು, ಚರ್ಮ ಮತ್ತು ಕೂದಲು ಎಲ್ಲದಕ್ಕೂ ಪ್ರೋಟೀನ್ ಅತ್ಯಗತ್ಯ. ವಾಸ್ತವವಾಗಿ,  ರಕ್ತದಲ್ಲಿನ ಪ್ರೋಟೀನ್ಗಳು ನಮ್ಮ ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುತ್ತವೆ ಎಂದು ನಂಬಲಾಗಿದೆ. ಇದಲ್ಲದೆ, ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.


ಇದನ್ನೂ ಓದಿ- French Fries ಸೇವನೆಯಿಂದ ಹೆಚ್ಚಾಗಲಿದೆ ಈ ಐದು ರೋಗಗಳ ಅಪಾಯ


ದೇಹಕ್ಕೆ ದಿನಕ್ಕೆ ಎಷ್ಟು ಪ್ರೋಟೀನ್ ಬೇಕು?
ದೇಹಕ್ಕೆ ಪ್ರತಿದಿನ ಎಷ್ಟು ಪ್ರೋಟೀನ್ (Protein) ಬೇಕು ಎಂದು ನಿಮಗೆ ತಿಳಿದಿದೆಯೇ? 4 ವರ್ಷದೊಳಗಿನ ಮಕ್ಕಳಿಗೆ 13 ಗ್ರಾಂ, 4 ರಿಂದ 8 ವರ್ಷದೊಳಗಿನ ಮಕ್ಕಳಿಗೆ 19 ಗ್ರಾಂ, 9 ರಿಂದ 13 ವರ್ಷ ವಯಸ್ಸಿನ ಮಕ್ಕಳಿಗೆ 34 ಗ್ರಾಂ, 14 ವರ್ಷ ಮೇಲ್ಪಟ್ಟ ಯುವತಿಯರಿಗೆ   46 ಗ್ರಾಂ ಮತ್ತು 14 ರಿಂದ 18 ವರ್ಷ ವಯಸ್ಸಿನವರು 52 ಗ್ರಾಂ,  19 ವರ್ಷ ಮತ್ತು ಮೇಲ್ಪಟ್ಟ ಪುರುಷರು 56 ಗ್ರಾಂ ಪ್ರೋಟೀನ್ ಸೇವಿಸಬೇಕು. ಹಾಗಾದರೆ ಯಾವ ಬೇಳೆಯಿಂದ ಎಷ್ಟು ಪ್ರೊಟೀನ್ ಸಿಗುತ್ತದೆ ಎಂದು ತಿಳಿಯೋಣ. 


ಉದ್ದಿನ ಬೇಳೆ  12 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ:
ಆಹಾರದಲ್ಲಿ ಉದ್ದಿನಬೇಳೆ ಸೇರಿಸುವುದರಿಂದ ಹೆಚ್ಚು ಪ್ರಯೋಜನ ಲಭ್ಯವಾಗಲಿದೆ. ಇದು ಫೋಲೇಟ್ ಮತ್ತು ಸತುವುಗಳ ಪ್ರಬಲ ಮೂಲವಾಗಿದೆ. ವಾಸ್ತವವಾಗಿ, ಹೆಚ್ಚು ಮುಖ್ಯವಾಗಿ, ಪ್ರತಿ ಅರ್ಧ ಕಪ್ ಉದ್ದಿನ ಬೇಳೆಯು 12 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ನೀವು ಪ್ರತಿದಿನ ಒಂದು ಬಟ್ಟಲು ಉದ್ದಿನಬೇಳೆಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.


ಹಸಿರು ಕಾಳು :
ಹಸಿರು ಕಾಳು ಸಿಪ್ಪೆಯೊಂದಿಗೆ ಬರುತ್ತದೆ. ಇದು ಪ್ರತಿ ಅರ್ಧ ಕಪ್‌ನಲ್ಲಿ 9 ಗ್ರಾಂ ನಷ್ಟು ಪ್ರೋಟೀನ್ ಹೊಂದಿರುತ್ತದೆ. ಇದಲ್ಲದೆ, ಇದರಲ್ಲಿ ದೇಹಕ್ಕೆ ಅಗತ್ಯವಾದ ಕಬ್ಬಿಣದ ಅಂಶವೂ ಇರುವುದರಿಂದ ನಿಮ್ಮ ಆಹಾರದಲ್ಲಿ ಇದನ್ನು ತಪ್ಪದೇ ಸೇರಿಸಿ. 


ಇದನ್ನೂ ಓದಿ- Diabetes: ನಿಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಯೂ ನಿಮ್ಮನ್ನು ಮದುಮೇಹದಿಂದ ದೂರ ಇರಿಸಬಹುದು


ತೊಗರಿ ಬೇಳೆ:
ತೊಗರಿ ಬೇಳೆಯಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬಳಸುವ ಹಳದಿ ಬಣ್ಣದ ತೊಗರಿ ಬೇಳೆಗಿಂತ ತಿಳಿಗೆಂಪು ಅಥವಾ ಕೇಸರಿ ಬಣ್ಣದಲ್ಲಿ ಲಭ್ಯವಿರುವ ತೊಗರಿ ಬೇಳೆಯನ್ನು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅರ್ಧ ಕಪ್ ತೊಗರಿ ಬೇಳೆಯಲ್ಲಿ ಸುಮಾರು 9 ಗ್ರಾಂಗಳಷ್ಟು ಪ್ರೋಟೀನ್ ಲಭ್ಯವಿರುತ್ತದೆ ಎಂದು ಹೇಳಲಾಗುತ್ತದೆ. ತೊಗರಿ ಬೇಳೆಯಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.