Diabetes: ನಿಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಯೂ ನಿಮ್ಮನ್ನು ಮದುಮೇಹದಿಂದ ದೂರ ಇರಿಸಬಹುದು

Diabetes: ಭಾರತೀಯರಲ್ಲಿ ಮಧುಮೆಹವು ಒಂದು ಪ್ರಾಮುಖ್ಯ ಆರೋಗ್ಯ ಸಮಸ್ಯೆಯಾಗಿದೆ. ವೈದ್ಯರ ಪ್ರಕಾರ, ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಇದನ್ನು ತಪ್ಪಿಸಬಹುದು ಅಥವಾ ನಿಯಂತ್ರಿಸಬಹುದು.

Written by - Yashaswini V | Last Updated : Feb 1, 2022, 09:01 AM IST
  • ಭಾರತದಲ್ಲಿ ಮಧುಮೇಹದ ಅಪಾಯ
  • ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯ
  • ನಿಮ್ಮ ಕೆಟ್ಟ ಅಭ್ಯಾಸಗಳಿಂದ ದೂರವಿರಿ
Diabetes: ನಿಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಯೂ ನಿಮ್ಮನ್ನು ಮದುಮೇಹದಿಂದ ದೂರ ಇರಿಸಬಹುದು title=
How to control Diabetes

Diabetes: ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಏಕೆಂದರೆ ವಿಶ್ವದಲ್ಲೇ ಭಾರತದಲ್ಲಿ ಅತಿ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಮಧುಮೇಹ ರೋಗಿಯಿಲ್ಲದ ಯಾವುದೇ ಕುಟುಂಬವೂ ಇಲ್ಲ ಎಂದರೂ ತಪ್ಪಾಗುವುದಿಲ್ಲ. ಈ ರೋಗವನ್ನು ಸಾಮಾನ್ಯವಾಗಿ 'ಸಕ್ಕರೆ' ಕಾಯಿಲೆ ಎಂದೂ ಕರೆಯುತ್ತಾರೆ.

ಜೀವನಶೈಲಿಯಲ್ಲಿ ಅಡಗಿರುವ ಮಂತ್ರ:
ಮಧುಮೇಹಕ್ಕೆ  (Diabetes) ಮುಖ್ಯ ಕಾರಣ ನಮ್ಮ ಜೀವನಶೈಲಿ. ವೈದ್ಯರ ಪ್ರಕಾರ, ಜೀವನಶೈಲಿಯನ್ನು ಬದಲಾಯಿಸಿಕೊಂಡು ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸಿದರೆ, ಈ ರೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಭಾರತದಲ್ಲಿ ಈ ರೋಗವು ವೇಗವಾಗಿ ಹೆಚ್ಚುತ್ತಿದೆ, ಆದ್ದರಿಂದ ಮಧುಮೇಹದ ಬಗ್ಗೆ ಎಚ್ಚರವಾಗಿರುವುದು ಬಹಳ ಮುಖ್ಯ.

ಎಲ್ಲಾ ವಯಸ್ಸಿನ ಜನರಲ್ಲೂ ಮಧುಮೇಹದ ಅಪಾಯ:
ಮೊದಲೆಲ್ಲಾ ಮಧುಮೇಹವು 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಆದರೆ ಈಗ ಪ್ರತಿ ವಯಸ್ಸಿನವರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಯುವಕರಲ್ಲಿ ಮಧುಮೇಹದ ಸಂಖ್ಯೆಯು ಸುಮಾರು 10 ಪ್ರತಿಶತದಷ್ಟು ಹೆಚ್ಚಾಗಿದೆ. ಆದ್ದರಿಂದ ನೀವು ಚಿಕ್ಕವರಾಗಿದ್ದರೆ ನಿಮಗೆ ಮಧುಮೇಹ ಬರುವುದಿಲ್ಲ ಎಂದು ಯೋಚಿಸಬೇಡಿ.

ಇದನ್ನೂ ಓದಿ- ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸಬೇಡಿ, Vitamin D ಕೊರತೆಯ ಸಂಕೇತವಿದು

ತೂಕವನ್ನು ನಿಯಂತ್ರಿಸಿ:
ವೈದ್ಯರ ಪ್ರಕಾರ, ಮಧುಮೇಹವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ  (How to control Diabetes) ನಿಮ್ಮ ತೂಕವನ್ನು ನಿಯಂತ್ರಿಸುವುದು. ಪುರುಷರು ತಮ್ಮ ಸೊಂಟವು 90 ಸೆಂಟಿಮೀಟರ್‌ಗಳಿಗಿಂತ ಹೆಚ್ಚು ಇರಬಾರದು ಮತ್ತು ಮಹಿಳೆಯರ ಸೊಂಟವು 80 ಸೆಂಟಿಮೀಟರ್‌ಗಳಿಗಿಂತ ಹೆಚ್ಚಿರಬಾರದು ಎಂಬ ಬಗ್ಗೆ ನಿಗಾವಹಿಸಿ.

ದೈನಂದಿನ ವ್ಯಾಯಾಮ ಬಹಳ ಮುಖ್ಯ:
ಮಧುಮೇಹದಿಂದ ದೂರವಿರಲು ಪ್ರತಿಯೊಬ್ಬರಿಗೂ ದೈನಂದಿನ ವ್ಯಾಯಾಮ ಬಹಳ ಮುಖ್ಯ. ಜಿಮ್‌ನಲ್ಲಿ ವರ್ಕ್ ಔಟ್ ಮಾಡಲು ಸಾಧ್ಯವಾಗದಿದ್ದರೆ, ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವಾಕ್ ಮಾಡಿ ಅಥವಾ ಜಾಗಿಂಗ್ ಮಾಡಲು ಪ್ರಾರಂಭಿಸಿ. ಮೆಟ್ಟಿಲುಗಳನ್ನು ಹತ್ತುವಾಗಲೂ ತೂಕ ನಿಯಂತ್ರಣದಲ್ಲಿರುತ್ತದೆ.

ಕೆಟ್ಟ ಅಭ್ಯಾಸಗಳನ್ನು ಮುರಿಯಿರಿ:
ದೈನಂದಿನ ಜೀವನದ ಕೆಟ್ಟ ಅಭ್ಯಾಸಗಳನ್ನು ತೊರೆಯುವ ಅಥವಾ ತಪ್ಪಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ತಂಬಾಕು, ಗುಟ್ಕಾ, ಧೂಮಪಾನ ಮತ್ತು ಮದ್ಯಪಾನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ಏಕೆಂದರೆ ಇವೆಲ್ಲವೂ ನಿಮ್ಮ ಆರೋಗ್ಯಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತವೆ.

ಇದನ್ನೂ ಓದಿ- Date Benefits : ದಿನನಿತ್ಯ ಖರ್ಜೂರ ತಿನ್ನುವುದರಿಂದ ಪುರುಷರಿಗಿದೆ ಈ 5 ಪ್ರಯೋಜನಗಳು!

ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುತ್ತಿರಿ:
ಮಧುಮೇಹ ಇರುವವರು ಮೇಲೆ ತಿಳಿಸಿದ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದಲ್ಲದೆ, ಕನಿಷ್ಠ ಪ್ರತಿ ವಾರ ಹೋಮ್ ಕಿಟ್ ಮೂಲಕ ಶುಗರ್ ಟೆಸ್ಟ್ ಮಾಡಬೇಕು ಮತ್ತು ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್ ಅನ್ನು ಪ್ರತಿ 3 ತಿಂಗಳಿಗೊಮ್ಮೆ ಪರೀಕ್ಷಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News