French Fries ಸೇವನೆಯಿಂದ ಹೆಚ್ಚಾಗಲಿದೆ ಈ ಐದು ರೋಗಗಳ ಅಪಾಯ

ವಾರದಲ್ಲಿ 2 ಬಾರಿಗಿಂತ ಹೆಚ್ಚು ಫ್ರೆಂಚ್ ಫ್ರೈಗಳನ್ನು ತಿನ್ನುವ ಜನರು ಬೇಗನೆ ಸಾವನ್ನಪ್ಪುವ ಅಪಾಯವಿದೆ ಎನ್ನಲಾಗಿದೆ.   

Written by - Ranjitha R K | Last Updated : Feb 1, 2022, 11:42 AM IST
  • ಫ್ರೆಂಚ್ ಫೈಸ್ ತಿಂದರೆ ರೋಗಗಳು ಕಟ್ಟಿಟ್ಟ ಬುತ್ತಿ
  • ತಿನ್ನಲು ಬಲು ರುಚಿಯಾಗಿದ್ದರೂ, ಹೆಚ್ಚಿಸುತ್ತದೆ ಅಪಾಯ
  • ಹೆಚ್ಚು ಫ್ರೆಂಚ್ ಫ್ರೈಸ್ ತಿಂದರೆ ಆರೋಗ್ಯಕ್ಕೆ ಹಾನಿ
French Fries ಸೇವನೆಯಿಂದ ಹೆಚ್ಚಾಗಲಿದೆ ಈ ಐದು ರೋಗಗಳ ಅಪಾಯ   title=
ಫ್ರೆಂಚ್ ಫೈಸ್ ತಿಂದರೆ ರೋಗಗಳು ಕಟ್ಟಿಟ್ಟ ಬುತ್ತಿ (file photo)

ನವದೆಹಲಿ : ಇಡೀ ವಿಶ್ವದಲ್ಲಿ ಆಲೂಗಡ್ಡೆಯಿಂದ ತಯಾರಿಸುವ ಫ್ರೆಂಚ್ ಫ್ರೈ (French Fries) ಪ್ರಿಯರಿಗೇನೂ ಕೊರತೆಯಿಲ್ಲ. ಇದನ್ನು ಅತ್ಯಂತ ರುಚಿಕರವಾದ ಆಹಾರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ರುಚಿ ಎಂದು ಬೇಕಾಬಿಟ್ಟಿ ಇದನ್ನು  ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.  ಇದನ್ನು ಯಾವಾಗಲೂ ತಿನ್ನುತ್ತಿದ್ದರೆ, ಈ ಕಾಯಿಲೆಗಳಿಗೆ ಕಾರಣವಾಗಬಹುದು.  

ಈ 5 ಕಾಯಿಲೆಗಳ ಮೂಲವಾಗಿದೆ ಫ್ರೆಂಚ್ ಫೈಸ್ :
ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಪ್ರಕಾರ, ಸುಮಾರು 4500 ಯುವಕರ ಮೇಲೆ ಅಧ್ಯಯನವನ್ನು ನಡೆಸಿದಾಗ, ಕೆಲವು ಆಘಾತಕಾರಿ ಫಲಿತಾಂಶಗಳು ಹೊರಬಿದ್ದಿವೆ. ವಾರದಲ್ಲಿ 2 ಬಾರಿಗಿಂತ ಹೆಚ್ಚು ಫ್ರೆಂಚ್ ಫ್ರೈಗಳನ್ನು (Side effects of French Fries) ತಿನ್ನುವ ಜನರು ಬೇಗನೆ ಸಾವನ್ನಪ್ಪುವ ಅಪಾಯವಿದೆ ಎನ್ನಲಾಗಿದೆ. 

ಇದನ್ನೂ ಓದಿ : Diabetes: ನಿಮ್ಮ ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಯೂ ನಿಮ್ಮನ್ನು ಮದುಮೇಹದಿಂದ ದೂರ ಇರಿಸಬಹುದು

1. ಹೊಟ್ಟೆ ನೋವಿನ ಸಮಸ್ಯೆ ಎದುರಾಗಬಹುದು : 
ಪ್ರೋಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿಗೆ ಹೋಲಿಸಿದ,ರೆ ಫ್ರೆಂಚ್ ಫ್ರೈಗಳ (French Fries) ಜೀರ್ಣಕ್ರಿಯೆಯು ತುಂಬಾ ನಿಧಾನವಾಗಿರುತ್ತದೆ. ಯಾಕೆಂದರೆ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆನೋವಿನ ಸಮಸ್ಯೆಯಿಂದ (Stomach ach) ಬಳಲಬೇಕಾಗಬಹುದು. ಇದಲ್ಲದೇ ಅತಿಸಾರ, ವಾಂತಿ (Vomiting), ಗ್ಯಾಸ್ ಸಮಸ್ಯೆಯೂ ತಲೆದೋರಬಹುದು. 

2. ಮೆದುಳಿಗೆ ಒಳ್ಳೆಯದಲ್ಲ :
ಫ್ರೆಂಚ್ ಫ್ರೈಗಳು (French Fries) ಮೆದುಳಿಗೆ ಒಳ್ಳೆಯದಲ್ಲ.  ಏಕೆಂದರೆ ಹೈಡ್ರೋಜನೆಟೆಡ್ ಎನ್ನೆಯಲ್ಕ್ಲಿ ಹೆಚ್ಚಿನ ಪ್ರಮಾಣದ  ಟ್ರಾನ್ಸ್ ಫ್ಯಾಟ್ ಕಂಡು ಬರುತ್ತದೆ. ಇದು Alzheimer ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಮರೆವಿನ ಸಮಸ್ಯೆಯನ್ನು (memory problem) ಹೆಚ್ಚಿಸುತ್ತದೆ.

ಇದನ್ನೂ ಓದಿ : Tips For Healthy Life: ಡಿಪ್ರೆಶನ್, ರಕ್ತದೊತ್ತಡ ನಿಯಂತ್ರಣ ಇತ್ಯಾದಿಗಳಿಗೆ ಸಂಜೆ ಹೊತ್ತು ಅರ್ಧ ಗಂಟೆ ಈ ಕೆಲಸ ಮಾಡಿ

3. ಇಮ್ಮುನಿಟಿ ಸಿಸ್ಟಮ್ ಮೇಲೆ ಪರಿಣಾಮ :
ಇಮ್ಮುನಿಟಿ ಸಿಸ್ಟಮ್ (Immune System) ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಕೆಲವೊಮ್ಮೆ ಇಂತಹ ಆಹಾರದಲ್ಲಿರುವ ಅನಾರೋಗ್ಯಕರ ಬ್ಯಾಕ್ಟೀರಿಯಾಗಳು,  ಮೈಕ್ರೋಬಯೋಮ್  ಅನ್ನು   ಹಾನಿಗೊಳಿಸುತ್ತವೆ. ಇದು ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

4. ಹೃದಯದ ಕಾಯಿಲೆಯ ಅಪಾಯ :
ಫ್ರೆಂಚ್ ಫ್ರೈಸ್ ಅನ್ನು ಆಗಾಗ ತಿನ್ನುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತ ಮತ್ತು 'ಟ್ರಿಪಲ್ ವೆಸೆಲ್ಸ್ ಡಿಸೀಸ್' ನಂತಹ (Triple Vessels Disease) ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ : Sleeping Tips : ರಾತ್ರಿ ಪದೆ ಪದೇ ನಿದ್ದೆಯಿಂದ ಎಚ್ಚರಾಗುತ್ತಾ? ಹಾಗಿದ್ರೆ, ಈ ಆಹಾರಗಳನ್ನ ತಿನ್ನಬೇಡಿ! 

5.  ತೂಕ ಹೆಚ್ಚಾಗುತ್ತದೆ :
ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ, ಫ್ರೆಂಚ್ ಫ್ರೈಗಳಂತಹ ಹೆಚ್ಚಿನ ಕ್ಯಾಲೋರಿ ಇರುವ ಆಹಾರದಿಂದಾಗಿ ಬೊಜ್ಜಿನ ಸಮಸ್ಯೆ ಹೆಚ್ಚುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಬೇಕಾದರೆ ಹೆಚ್ಚು ಎಣ್ಣೆಯ ಪದಾರ್ಥ ಗಳಿಂದ ದೂರವಿರಬೇಕು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News