Tips For Healthy Life: ಡಿಪ್ರೆಶನ್, ರಕ್ತದೊತ್ತಡ ನಿಯಂತ್ರಣ ಇತ್ಯಾದಿಗಳಿಗೆ ಸಂಜೆ ಹೊತ್ತು ಅರ್ಧ ಗಂಟೆ ಈ ಕೆಲಸ ಮಾಡಿ

Evening Walk Benefits: ಬೆಳಗ್ಗೆ ಅಷ್ಟೇ ಅಲ್ಲ ಸಂಜೆಯೂ ವಾಕಿಂಗ್ ಮಾಡುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೆಚ್ಚಿನ ಜನರು ಮುಂಜಾನೆಯ ನಡಿಗೆಗೆ ಹೆಚ್ಚಿನ  ಪ್ರಾಮುಖ್ಯತೆ ನೀಡುತ್ತಾರೆ, ಆದರೆ ಸಂಜೆಯ ನಡಿಗೆಯ ಪ್ರಯೋಜನಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. 

Written by - Nitin Tabib | Last Updated : Jan 31, 2022, 10:36 PM IST
  • ಸಂಜೆ ವಾಕಿಂಗ್ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ.
  • ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ನೀವು ಉತ್ತಮ ನಿದ್ರೆಯನ್ನು ಸಹ ಪಡೆಯಬಹುದು
  • ಇದು ಮನಸ್ಥಿತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
Tips For Healthy Life: ಡಿಪ್ರೆಶನ್, ರಕ್ತದೊತ್ತಡ ನಿಯಂತ್ರಣ ಇತ್ಯಾದಿಗಳಿಗೆ ಸಂಜೆ ಹೊತ್ತು ಅರ್ಧ ಗಂಟೆ ಈ ಕೆಲಸ ಮಾಡಿ title=
Evening Walk Benefits (File Photo)

ನವದೆಹಲಿ: Benefits Of Evening Walk - ಬೆಳಗ್ಗೆ ಮಾತ್ರವಲ್ಲ, ಸಂಜೆ ವಾಕಿಂಗ್ (Evening Walk) ಕೂಡ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಜನರು ಬೆಳಗಿನ ಜಾವದ ನಡಿಗೆಗೆ ಪ್ರಾಮುಖ್ಯತೆ ನೀಡುತ್ತಾರೆ, ಏಕೆಂದರೆ ಸಂಜೆಯ ನಡಿಗೆಯ ಪ್ರಯೋಜನಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಪ್ರತಿದಿನ ಸಂಜೆಯ ವಾಕಿಂಗ್ ನಿಮ್ಮನ್ನು ಹೇಗೆ ಫಿಟ್ ಆಗಿರಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಡಿಪ್ರೆಶನ್ (Depression) ನಿಂದ ರಕ್ಷಿಸುತ್ತದೆ
ಸಂಜೆ ವಾಕಿಂಗ್ (Health Tips) ಮಾಡುವುದು ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಸಂಜೆ ವಾಕಿಂಗ್ ಒತ್ತಡವನ್ನು ಉಂಟುಮಾಡುವ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಖಿನ್ನತೆಯ ರೋಗಿಗಳಿಗೆ ಸಂಜೆಯ ನಡಿಗೆಯನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಹೈ ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿಡುತ್ತದೆ (High Blood Pressure)
ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಸಂಜೆ ವಾಕಿಂಗ್ ಮಾಡುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ 10,000 ಹೆಜ್ಜೆಗಳನ್ನು ನಡೆಯುವುದು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ಪರಿಣಾಮಕಾರಿ (Weight Loss)
ಸಂಜೆಯ ವೇಳೆ ವಾಕಿಂಗ್ ಮಾಡುವುದರಿಂದ ಬೊಜ್ಜಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದಕ್ಕಾಗಿ 30 ನಿಮಿಷಗಳ ನಡಿಗೆ ಅಗತ್ಯ. ಊಟದ ನಂತರ ಒಂದು ಗಂಟೆ ನಡೆಯುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕತೆಗೆ ಹೆಚ್ಚಾಗುತ್ತದೆ (Immunity Boostar)
ದೈನಂದಿನ ಸಂಜೆಯ ನಡಿಗೆಯಿಂದ ನಿಮ್ಮ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಬಡಿತವನ್ನು ಸುಧಾರಿಸುತ್ತದೆ. ಇದು ಬ್ಲಡ್ ಕೌಂಟ್ ಕೂಡ  ಹೆಚ್ಚಿಸುತ್ತದೆ.

ಇದನ್ನೂ ಓದಿ-Dry Coconut Benefits : ರಾತ್ರಿ ಮಲಗುವ ಮುನ್ನ 1 ತುಂಡು ಒಣ ಕೊಬ್ಬರಿ ತಿನ್ನಿ : ಇದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು!

ನಿದ್ರೆಯ ಸಮಸ್ಯೆ ನಿವಾರಣೆಯಾಗುತ್ತದೆ (Sleeping Disorder)
ಸಂಜೆ ವಾಕ್ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ನಿಯಮಿತವಾಗಿ ನಡೆಯುವುದರಿಂದ ನಿದ್ರೆಗೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ-Health Tips: ತೂಕ ನಷ್ಟಕ್ಕೆ ಈ ಕಷಾಯವನ್ನು ಕುಡಿಯಿರಿ, ಪರಿಣಾಮಕಾರಿ ದಿವ್ಯೌಷಧ

(ಸೂಚನೆ - ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Health Tips: ಸದಾ ‘ಯಂಗ್ ಅಂಡ್ ಎನರ್ಜಿಟಿಕ್’ ಆಗಿರಲು ಈ 5 ಆಹಾರ ಸೇವಿಸಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News