ಬೆಂಗಳೂರು : ಬೊಜ್ಜು, ರಕ್ತದೊತ್ತಡ, ಮಧುಮೇಹ  ಮುಂತಾದ ರೋಗಗಳನ್ನು  ತಪ್ಪಿಸಲು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪೋಷಕಾಂಶಗಳು ಬೇಕಾಗುತ್ತವೆ. ಅದರ ಜೊತೆಗೆ ಕಡಿಮೆ ಕ್ಯಾಲೋರಿ ಸೇವನೆಯು ದೇಹಕ್ಕೆ ಅವಶ್ಯಕವಾಗಿದೆ. ನಾವು ದಿನವಿಡೀ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇವಿಸಿದರೆ, ದೇಹವು ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಸಂಗ್ರಹಿಸುತ್ತದೆ.  ಹಾಗಾದಾಗ ದಿನವಿಡೀ ನಾವು ತೆಗೆದುಕೊಳ್ಳುವಷ್ಟು ಕ್ಯಾಲೊರಿಗಳನ್ನು ಬರ್ನ್ ಕೂಡಾ ಮಾಡಬೇಕಾಗುತ್ತದೆ.  ಒಂದು ವೇಳೆ ಹೀಗೆ ಮಾಡದಿದ್ದಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಕೊಬ್ಬಿನಂತೆ ದೇಹದಲ್ಲಿ ಸಂಗ್ರಹವಾಗುತ್ತವೆ. ಇದರಿಂದಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. 


COMMERCIAL BREAK
SCROLL TO CONTINUE READING

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಅನೇಕ ಜನರು ಸರಿಯಾದ ಆಹಾರ ಮತ್ತು ವ್ಯಾಯಾಮದ ಕಡೆಗೆ ಹೆಚ್ಚು ಗಮನಹರಿಸುತ್ತಾರೆ. ಸ್ಥೂಲಕಾಯತೆಯೊಂದಿಗೆ ಹೋರಾಡುತ್ತಿರುವ ಅನೇಕ ಜನರು ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ವಿಧ ವಿಧವಾದ ಮಾರ್ಗವನ್ನು ಅನುಸರಿಸುತ್ತಿರುತ್ತಾರೆ. ನೀವು ಕೂಡಾ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಅಥವಾ ಬೊಜ್ಜು ಕಳೆದುಕೊಳ್ಳಲು ಬಯಸುತ್ತೀರಾ? ಹಾಗಿದ್ದರೆ ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಅನೇಕ ಸರಳ ನೈಸರ್ಗಿಕ ಪರಿಹಾರಗಳಿವೆ. 


ಇದನ್ನೂ ಓದಿ : ಒಡೆದ ಹಿಮ್ಮಡಿಗೆ ಅಡುಗೆ ಮನೆಯಲ್ಲಿಯೇ ಇವೆ ಪರಿಹಾರ ! ಒಮ್ಮೆ ಹೀಗೆ ಬಳಸಿ ನೋಡಿ ಸಾಕು


ದೇಹದ ತೂಕವನ್ನು ಕಡಿಮೆ ಮಾಡುವುದು ಹೇಗೆ ? :
ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆ ಎನ್ನುವ ಪ್ರಶ್ನೆ ನಿಮ್ಮನೂ ಕೂಡಾ ಕಾಡುತ್ತಿದ್ದರೆ,  ಈ ಲೇಖನದಲ್ಲಿ ಉತ್ತರ ಅಡಗಿದೆ. ತೂಕ ನಷ್ಟಕ್ಕೆ ಬೇರು ತರಕಾರಿಗಳು ಅಥವಾ ರೂಟ್ ವೆಜಿಟೇಬಲ್ಸ್  ಬಹಳ ಪರಿಣಾಮಕಾರಿ. ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ತರಕಾರಿಗಳು ಇಲ್ಲಿವೆ. 


ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುವ ತರಕಾರಿಗಳು : 
1. ಸಿಹಿ ಗೆಣಸು :

ಸಿಹಿ ಗೆಣಸು ಪೌಷ್ಟಿಕಾಂಶ-ಭರಿತ ಬೇರು ತರಕಾರಿ. ಫೈಬರ್, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸಿಹಿ ಗೆಣಸು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಮಾರ್ಗವಾಗಿದೆ.


ಇದನ್ನೂ ಓದಿ : ಬಿಳಿಕೂದಲಿಗೆ ಶಾಶ್ವತ ಕಪ್ಪು ಬಣ್ಣ ನೀಡುತ್ತೆ ಆಲೂಗಡ್ಡೆ ಸಿಪ್ಪೆ! ಹೀಗೆ ಬಳಸಿದ್ರೆ 5 ನಿಮಿಷದಲ್ಲಿ ರಿಸಲ್ಟ್ ಪಕ್ಕಾ


2. ಬೀಟ್ರೂಟ್ :
ಇದು ಪೋಷಕಾಂಶಗಳಿಂದ ತುಂಬಿರುವ ತರಕಾರಿ. ಫೈಬರ್ ಮತ್ತು ಅಗತ್ಯವಾದ ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ಬೀಟ್ರೂಟ್, ನೈಸರ್ಗಿಕವಾಗಿ ಯಕೃತ್ತಿನಿಂದ ವಿಷವನ್ನು ತೆಗೆದುಹಾಕುತ್ತದೆ. ಬೀಟ್ರೂಟ್ ತೂಕ ನಷ್ಟವನ್ನು ಪರಿಣಾಮಕಾರಿಯಾಗಿ ಇಳಿಸಲು ಸಹಾಯ ಮಾಡುತ್ತದೆ. 


3. ಮೂಲಂಗಿ :
ಮೂಲಂಗಿ ಬಹಳಷ್ಟು ನೀರನ್ನು ಹೊಂದಿರುತ್ತದೆ. ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ. ಮೂಲಂಗಿಯು ಆರೋಗ್ಯಕರ ಚಯಾಪಚಯವನ್ನು ಉತ್ತೇಜಿಸುವ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ರಕ್ತ ನಾಳಗಳಲ್ಲಿ ಸಂಗ್ರಹಗೊಳ್ಳುವ ಜಿಡ್ಡಿನ ಶತ್ರು ಬೆಳ್ಳುಳ್ಳಿ, ನಿತ್ಯ ಈ ನಾಲ್ಕು ವಿಧಗಳಲ್ಲಿ ಸೇವಿಸಿ!


4. ಕ್ಯಾರೆಟ್ :
ಕ್ಯಾರೆಟ್ ವಿಟಮಿನ್ ಮತ್ತು ಬೀಟಾ ಕ್ಯಾರೋಟಿನ್ ನಲ್ಲಿ ಸಮೃದ್ಧವಾಗಿದೆ. ಕ್ಯಾರೆಟ್ ಸೇವನೆಯು ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಡೆಯುತ್ತದೆ. ಇದು ದೇಹದ ದೈನಂದಿನ ಫೈಬರ್ ಸೇವನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 


5.  ಗಡ್ಡೆ ಕೋಸು : 
ಕಡಿಮೆ ಕ್ಯಾಲೋರಿಗಳ ಜೊತೆಗೆ,  ಗಡ್ಡೆ ಕೋಸು ಫೈಬರ್ ನಲ್ಲಿ  ಅಧಿಕವಾಗಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹಸಿವನ್ನು ನಿಯಂತ್ರಿಸಲು  ಕೂಡಾ ಸಹಾಯ ಮಾಡುತ್ತದೆ. ಆದ್ದರಿಂದ ಅನಾರೋಗ್ಯಕರ ಮತ್ತು ಅನಗತ್ಯ ಆಹಾರವನ್ನು ಸೇವಿಸುವುದನ್ನು ಇದು ತಪ್ಪಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ