ಒಡೆದ ಹಿಮ್ಮಡಿಗೆ ಅಡುಗೆ ಮನೆಯಲ್ಲಿಯೇ ಇವೆ ಪರಿಹಾರ ! ಒಮ್ಮೆ ಹೀಗೆ ಬಳಸಿ ನೋಡಿ ಸಾಕು

Home Remedy for cracked heel:ಹಿಮ್ಮಡಿ ಒಡೆದರೆ ಅತಿಯಾದ ನೋವು ಕೂಡಾ ಕಾಡುತ್ತದೆ. ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.

Written by - Ranjitha R K | Last Updated : Dec 1, 2023, 10:05 AM IST
  • ಹಿಮ್ಮಡಿಗಳು ಏಕೆ ಬಿರುಕು ಬಿಡುತ್ತವೆ?
  • ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಮನೆಮದ್ದು
  • ಪಾದಗಳ ಆರೈಕೆಗೆ ಅನುಸರಿಸಬೇಕಾದ ಕ್ರಮ
ಒಡೆದ ಹಿಮ್ಮಡಿಗೆ ಅಡುಗೆ ಮನೆಯಲ್ಲಿಯೇ ಇವೆ ಪರಿಹಾರ ! ಒಮ್ಮೆ ಹೀಗೆ ಬಳಸಿ ನೋಡಿ ಸಾಕು  title=

Home Remedy for cracked heel : ನಮ್ಮಲ್ಲಿ ಹೆಚ್ಚಿನವರು ಮುಖದ ಆರೈಕೆಯಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಆದರೆ, ಪಾದಗಳಿಗೆ ಕಡಿಮೆ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ನಿಜ ಹೇಳಬೇಕೆಂದರೆ ಕೆಲವರು ಪಾದದ ಸೌಂದರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಿಡುತ್ತಾರೆ. ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಹಿಮ್ಮಡಿ ಒಡೆದರೆ ಅತಿಯಾದ ನೋವು ಕೂಡಾ ಕಾಡುತ್ತದೆ. ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು.

ಹಿಮ್ಮಡಿಗಳು ಏಕೆ ಬಿರುಕು ಬಿಡುತ್ತವೆ? : 
ನಿಮ್ಮ ಹಿಮ್ಮಡಿಗಳು ಹೆಚ್ಚು ನೀರು ಮತ್ತು ಧೂಳಿನ ಸಂಪರ್ಕಕ್ಕೆ ಬಂದರೆ, ಅವು ಬಿರುಕುಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ.  ಅಲ್ಲದೆ, ಸ್ಥೂಲಕಾಯತೆ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳು, ದೀರ್ಘಕಾಲ ನಿಲ್ಲುವುದು, ಒಣ ಚರ್ಮ ಮತ್ತು ಸರಿಯಾದ ಆರೈಕೆ ಮತ್ತು ನೈರ್ಮಲ್ಯದ ಕೊರತೆ ಕೂಡಾ ಹಿಮ್ಮಡಿ ಒಡೆಯಲು ಇರುವ ಸಾಮಾನ್ಯ ಕಾರಣಗಳು. ನಮ್ಮ ಅಡುಗೆಮನೆ ಔಷಧೀಯ ಮೌಲ್ಯಗಳನ್ನು ಹೊಂದಿರುವ ಅದ್ಭುತ ಪದಾರ್ಥಗಳ ಭಂಡಾರವಾಗಿದೆ. ಹಿಮ್ಮಡಿಯಲ್ಲಿ ಅಥವಾ ಪಾದದ ಅಡಿಯಲ್ಲಿ ಸ್ವಲ್ಪ ಮಟ್ಟಿನಲ್ಲಿ ಕ್ರಾಕ್ ಕಾಣಿಸಿಕೊಳ್ಳುವಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ನೋವು, ಸಮಸ್ಯೆ ಹೆಚ್ಚಾಗದಂತೆ ತಡೆಯಬಹುದು. 

ಇದನ್ನೂ ಓದಿ : ಬಿಳಿಕೂದಲಿಗೆ ಶಾಶ್ವತ ಕಪ್ಪು ಬಣ್ಣ ನೀಡುತ್ತೆ ಆಲೂಗಡ್ಡೆ ಸಿಪ್ಪೆ! ಹೀಗೆ ಬಳಸಿದ್ರೆ 5 ನಿಮಿಷದಲ್ಲಿ ರಿಸಲ್ಟ್ ಪಕ್ಕಾ

ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಮನೆಮದ್ದು  : 
1. ತೆಂಗಿನೆಣ್ಣೆ:

ಕೂದಲಿಗೆ ಕೊಬ್ಬರಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಒಡೆದ ಹಿಮ್ಮಡಿಗಳನ್ನು ವಾಸಿಮಾಡಲೂ ಕೂಡಾ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಹಿಮ್ಮಡಿಗಳನ್ನು ತೇವಗೊಳಿಸುವುದು ಮಾತ್ರವಲ್ಲದೆ ಅವುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ.

2. ಬಾಳೆಹಣ್ಣು  : 
ಬಾಳೆಹಣ್ಣು ನಿಮ್ಮ ಚರ್ಮವನ್ನು ಡ್ರೈ ಆಗದಂತೆ ರಕ್ಷಿಸುತ್ತದೆ. 2 ಮಾಗಿದ ಬಾಳೆಹಣ್ಣನ್ನು ಹಿಸುಕಿ ಪೇಸ್ಟ್ ಮಾಡಿ ಮತ್ತು ಅದನ್ನು ಪಾದಗಳ ಹಿಮ್ಮಡಿಗೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಪಾದಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. 2 ವಾರಗಳಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಸಂಪೂರ್ಣವಾಗಿ ಗುಣವಾಗುತ್ತದೆ. 

ಇದನ್ನೂ ಓದಿ : ರಕ್ತ ನಾಳಗಳಲ್ಲಿ ಸಂಗ್ರಹಗೊಳ್ಳುವ ಜಿಡ್ಡಿನ ಶತ್ರು ಬೆಳ್ಳುಳ್ಳಿ, ನಿತ್ಯ ಈ ನಾಲ್ಕು ವಿಧಗಳಲ್ಲಿ ಸೇವಿಸಿ!

3. ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸುವುದು:
ಒಡೆದ ಹಿಮ್ಮಡಿಗಳನ್ನು ಸರಿಪಡಿಸಲು, ಪಾದಗಳನ್ನು ಸುಮಾರು 20 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ನಂತರ ಪದಗಳನ್ನು ನೀರಿನಿಂದ ಹೊರ ತೆಗೆದು ಸಾಸಿವೆ ಎಣ್ಣೆಯನ್ನು ಹಚ್ಚಿ ನಂತರ ಸಾಕ್ಸ್ ಧರಿಸಿದರೆ ಕೆಲವೇ ದಿನಗಳಲ್ಲಿ ಹಿಮ್ಮಡಿ ಸರಿಯಾಗುತ್ತದೆ.

4.ಜೇನುತುಪ್ಪ :

ಜೇನುತುಪ್ಪವನ್ನು ನೈಸರ್ಗಿಕ ನಂಜುನಿರೋಧಕ ಎಂದು ಕರೆಯಲಾಗುತ್ತದೆ.  ಇದು ಬಿರುಕು ಬಿಟ್ಟ ಪಾದಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ತೇವಗೊಳಿಸಿ, ಚರ್ಮವನ್ನು ಒಣಗುವುದನ್ನು ತಡೆಯುತ್ತದೆ. 
ಬೆಚ್ಚಗಿನ ನೀರಿಗೆ 1 ಕಪ್ ಜೇನುತುಪ್ಪವನ್ನು ಮಿಶ್ರಣ ಮಾಡಿ. ಪಾದಗಳನ್ನು ಸ್ವಚ್ಛಗೊಳಿಸಿ, ಈ ಮಿಶ್ರಣದಲ್ಲಿ 20 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಪಾದಗಳನ್ನು ತೊಳೆದು ಮಾಯಿಶ್ಚರೈಸರ್  ಹಚ್ಚಿ. ರಾತ್ರಿ ಮಲಗುವ ಮುನ್ನ ಇದನ್ನು ನಿಯಮಿತವಾಗಿ ಮಾಡಿಕೊಂದು ಬಂದರೆ ಓಡ್ ಹಿಮ್ಮಡಿ ಸಮಸ್ಯೆ ನಿವಾರಣೆಯಾಗುತ್ತದೆ. 

ಇದನ್ನೂ ಓದಿ : ರಕ್ತ ನಾಳಗಳಲ್ಲಿ ಸಂಗ್ರಹಗೊಳ್ಳುವ ಜಿಡ್ಡಿನ ಶತ್ರು ಬೆಳ್ಳುಳ್ಳಿ, ನಿತ್ಯ ಈ ನಾಲ್ಕು ವಿಧಗಳಲ್ಲಿ ಸೇವಿಸಿ!

ಪಾದಗಳ ಆರೈಕೆಗೆ ಅನುಸರಿಸಬೇಕಾದ ಕ್ರಮ : 
-ನಿಮ್ಮ ಪಾದಗಳನ್ನು ಸುಮಾರು 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ. 
-ಡೆಡ್ ಸೆಲ್ ಗಳನ್ನೂ ತೆಗೆದು ಹಾಕಲು ಸಹಾಯ ಮಾಡಲು ಪಾದದ ಸ್ಕ್ರಬ್ಬರ್‌ನಿಂದ ಹಿಮ್ಮಡಿಗಳನ್ನು ನಿಧಾನವಾಗಿ ಉಜ್ಜಿಕೊಳ್ಳಿ.
-ಕೆನೆ ಅಥವಾ ಪೆಟ್ರೋಲಿಯಂ ಜೆಲ್ಲಿಯಿಂದ ಚೆನಾಗಿ ಮಸಾಜ್ ಮಾಡಿ. ಮಲಗುವ ವೇಳೆಗೆ  ಕಾಟನ್ ಸಾಕ್ಸ್ ಧರಿಸುವುದನ್ನು ಮರೆಯಬೇಡಿ.
-ಒಣಗಿದ, ಬಿರುಕು ಬಿಟ್ಟ ಹಿಮ್ಮಡಿಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇದನ್ನೂ ಗಮನಿಸದೆ ಬಿಟ್ಟರೆ ಗಾಯ ಆಳವಾಗಿ ರಕ್ತ ಬರಲು ಆರಂಭಿಸುತ್ತದೆ.  ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಇತರ ನೈಸರ್ಗಿಕ ಪರಿಹಾರಗಳು : 
ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ಹಲವಾರು ಮನೆಮದ್ದುಗಳಿವೆ. ಈ ಎಲ್ಲಾ ಪದಾರ್ಥಗಳು ಚರ್ಮವನ್ನು ತೇವವಾಗಿಡುವ ಮತ್ತು ಪಾದಗಳನ್ನು ಮೃದುಗೊಳಿಸುವ ಕೆಲಸ ಮಾಡುತ್ತದೆ. 

-ವಿನೆಗರ್ 
-ಆಲಿವ್ ಎಣ್ಣೆ
-ಶಿಯಾ  ಬಟರ್  
-ಹಿಸುಕಿದ ಬಾಳೆಹಣ್ಣುಗಳು 
-ಪ್ಯಾರಾಫಿನ್ ಮೇಣ 
-ಓಟ್ ಮೀಲ್ ಅನ್ನು ಎಣ್ಣೆಯೊಂದಿಗೆ  ಬೆರೆಸಿ ಹಚ್ಚುವುದು 

ಇದನ್ನೂ ಓದಿ : ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ 5 ಕಾಳುಗಳು, ಇಂದಿನಿಂದಲೇ ನಿಮ್ಮ ಆಹಾರದ ಭಾಗವಾಗಿಸಿ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News