ನವದೆಹಲಿ: Calf Serum In Covaxin? - ಪ್ರಸ್ತುತ ಭಾರತದಲ್ಲಿ ಕೊರೊನಾ ವೈರಸ್ ವಿರುದ್ದ ಹೋರಾಡಲು ಕೊರೊನಾ ವ್ಯಾಕ್ಸಿನೆಶನ್ ಅಭಿಯಾನ ಮುಂದುವರೆದಿದೆ. ಆದರೆ, ಈ ನಡುವೆ ಜನರ ಮಧ್ಯೆ ಬೀಟಾ ಟೀಕೆಯ ಕುರಿತು ಹಲವು ಮಿಥ್ಯ ಮಾಹಿತಿಗಳು ಹರಡುತ್ತಿವೆ. ಈ ಕುರಿತು ಸರ್ಕಾರ ಕೂಡ ಕಾಲ-ಕಾಲಕ್ಕೆ ಹೇಳಿಕೆ ನೀಡುವ ಮೂಲಕ ಪರಿಹರಿಸುವಲ್ಲಿ ತೊಡಗಿದೆ. ಇದೆ ಸರಣಿಯಲ್ಲಿ ಇದೀಗ ಕೊರೊನಾ ವಿರುದ್ಧ ಹೋರಾಡುವ ವ್ಯಾಕ್ಸಿನ್ ಆಗಿರುವ ಕೊವ್ಯಾಕ್ಸಿನ್ ನಲ್ಲಿ ಹಸುವಿನ ಕರುವಿನ ಸೀರಮ್ ಬಳಸಲಾಗುತ್ತದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರ ಆಗುತಿದ್ದು, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ನಲ್ಲಿ ತಥ್ಯಗಳನ್ನು ತಿರುಚಲಾಗಿದೆ ಎಂದು ಹೇಳಿದೆ


COMMERCIAL BREAK
SCROLL TO CONTINUE READING

ಕೊವ್ಯಾಕ್ಸಿನ್ ನಲ್ಲಿ Calf Serum ಬಳಕೆ ಇಲ್ಲ
PIB ಜಾರಿಗೊಳಿಸಿರುವ  ಹೇಳಿಕೆಯಲ್ಲಿ 'ಕೊವ್ಯಾಕ್ಸಿನ್ ಸಂರಚನೆಗೆಮಾಧ್ಯಮ ಸಂಬಂಧಿಸಿದ  ಕೆಲ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳಲ್ಲಿ ವ್ಯಾಕ್ಸಿನ್ ನಲ್ಲಿ(Covaxin) ಹಸುವಿನ ಕರುವಿನ ಸೀರಮ್ ಇರುತ್ತದೆ ಎನ್ನಲಾಗಿದೆ. ಇದು ಸರಿಯಲ್ಲ ಹಾಗೂ ಇದರಲ್ಲಿ ತಥ್ಯಗಳನ್ನು ತಿರುಚಿ ಪ್ರಸ್ತುತಪಡಿಸಲಾಗಿದೆ' ಎನ್ನಲಾಗಿದೆ .


New Corona Vaccine: Coronavirus ವಿರುದ್ಧ ಸಿಕ್ತು ಮತ್ತೊಂದು ಅಸ್ತ್ರ, ಶೇ.90ರಷ್ಟು ಪರಿಣಾಮಕಾರಿ


ಹಲವು ದಶಕಗಳಿಂದ ನಡೆಯುತ್ತಿದೆ ಈ ತಂತ್ರಜ್ಞಾನ
'ಲಸಿಕೆಗಳ ಉತ್ಪಾದನೆಗೆ ಸಹಾಯ ಮಾಡುವ ಜೀವಕೋಶದ ಜೀವನವನ್ನು ಸ್ಥಾಪಿಸಲು ವೆರೋ ಕೋಶಗಳನ್ನು (Vero Cells) ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ದಶಕಗಳಿಂದ ಪೋಲಿಯೊ, ರೇಬೀಸ್ ಮತ್ತು ಇನ್ಫ್ಲುಯೆನ್ಸದ ಲಸಿಕೆಗಳಲ್ಲಿ ಬಳಸಲಾಗುತ್ತದೆ' ಎಂದು PIB ಹೇಳಿದೆ.


Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ


ಬಳಿಕ ವೆರೋ ಕೋಶಗಳನ್ನು ಸ್ವಚ್ಛಗೊಳಿಸಲಾಗುತ್ತದೆ
ಈ ಕುರಿತು ಮುಂದೆ ಹೇಳಿಕೆ ನೀಡಿರುವ PIB, 'ವೆರೋ ಕೋಶಗಳ ವೃದ್ಧಿಯ ಬಳಿಕ ಅವುಗಳನ್ನು Calf Serum ನಿಂದ ಮುಕ್ತಗೊಳಿಸಲಾಗುತ್ತದೆ. ಇದಕ್ಕಾಗಿ ಅವುಗಳನ್ನು ಹಲವು ಬಾರಿ ನೀರು ಹಾಗೂ ಕೆಮಿಕಲ್ ನಿಂದ ತೊಳೆಯಲಾಗುತ್ತದೆ.


ಇದನ್ನೂ ಓದಿ-Old Virus Cases In Britain: Corona ಪ್ರಕೋಪದ ನಡುವೆಯೇ ವಿಚಿತ್ರ ವೈರಸ್ ಎಂಟ್ರಿ, ಮನೆಯಲ್ಲಿರುವವರೂ ಸೋಂಕಿತರಾಗುತ್ತಿದ್ದಾರೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.