ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನಬೇಕು ಈ ಎಲೆಗಳನ್ನು ಚುರುಕಾಗಲಿದೆ ಮೆದುಳು
ಬ್ರಾಹ್ಮಿಯನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಇದರ ಪುಡಿಯನ್ನು ಹಾಲು ಅಥವಾ ನೀರಿನಲ್ಲಿ ಬೆರೆಸಿ ಸೇವಿಸಬಹುದು.
ನವದೆಹಲಿ : ಬ್ರಾಹ್ಮಿ ಅಥವ ಒಂದೆಲಗ ಒಂದು ಔಷಧೀಯ ಸಸ್ಯ. ಆಯುರ್ವೇದದಲ್ಲಿ (Ayurveda) ಇದರ ಅನೇಕ ವಿಷಯಗಳನ್ನು ಹೇಳಲಾಗಿದೆ. ಒಂದೆಲಗ ಸೇವನೆಯಿಂದ ಮಲಬದ್ಧತೆ (Constipation) ಸಮಸ್ಯೆ ದೂರವಾಗುತ್ತದೆ. ಇದರೊಂದಿಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಾಹ್ಮಿಯನ್ನು ಸೇವಿಸುವುದರಿಂದ ಮೆದುಳು ಚುರುಕಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಾಹ್ಮಿಯನ್ನು ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ (Benefits of brahmi).
ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ:
ಬ್ರಾಹ್ಮಿಯನ್ನು ಸೇವಿಸುವುದರಿಂದ ನೆನಪಿನ ಶಕ್ತಿ (memory power) ಹೆಚ್ಚುತ್ತದೆ. ಇದರ ಪುಡಿಯನ್ನು ಹಾಲು ಅಥವಾ ನೀರಿನಲ್ಲಿ ಬೆರೆಸಿ ಸೇವಿಸಬಹುದು. ಮೆದುಳನ್ನು ಚುರುಕುಗೊಳಿಸುವಲ್ಲಿ ಇದು ಪ್ರಯೋಜನಕಾರಿ.
ಇದನ್ನೂ ಓದಿ : Tips To Relieve Stress: ಈ ಸಿಂಪಲ್ ಟಿಪ್ಸ್ ಅನುಸರಿಸಿ ನಿಮಿಷಗಳಲ್ಲಿ ನಿಮ್ಮ ಒತ್ತಡ ನಿವಾರಿಸಿ
ಆಲ್ಜಾಯಿಮರ್ (Alzheimer) ಅನ್ನು ತಡೆಯುತ್ತದೆ :
ಬ್ರಾಹ್ಮಿ ಮೆದುಳಿನ ನರಗಳನ್ನು ತೆರೆಯುತ್ತದೆ. ಕೆಲವು ಸಂಶೋಧನೆಯ ಪ್ರಕಾರ, ಇದು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ.ಇದು ಮೆದುಳಿಗೆ ಹಾನಿ ಮಾಡುವ ಅಂಶಗಳನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಆಲ್ಜಾಯಿಮರ್ (Alzheimer) ಯಿಲೆಯನ್ನು ತಡೆಯಬಹುದು.
ಮೆದುಳಿನ ಸೋಂಕಿಗೆ ಪರಿಹಾರ :
ಬ್ರಾಹ್ಮಿ ಸೇವನೆಯು ಮೆದುಳಿನಲ್ಲಿರುವ (brain) ರೋಗಾಣುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಮಾತ್ರವಲ್ಲ, ಮೆದುಳಿನ ರಕ್ತ ಕಣಗಳಲ್ಲಿ ರಕ್ತ ಪರಿಚಲನೆ (Blood circulation) ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಅವಶ್ಯವಾಗಿರಲಿ ಈ ವಸ್ತುಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ