Bad Cholesterol In Blood: ಒಂದು ವೇಳೆ ನಿಮ್ಮ ನರಗಳಲ್ಲಿಯೂ ಕೂಡ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದರೆ, ನೀವು ನಿಮ್ಮ ಆಹಾರದ ಕಡೆಗೆ ವಿಶೇಷ ಗಮನಹರಿಸುವ ಅವಶ್ಯಕತೆ ಇದೆ. ಈ ಕೆಟ್ಟ ಕೊಲೆಸ್ಟ್ರಾಲ್ ನರಗಳಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ ಮತ್ತು ಇದರಿಂದ ಹೃದಯಾಘಾತದ ಅಪಾಯ ಅತ್ಯಧಿಕವಾಗುತ್ತದೆ. 


COMMERCIAL BREAK
SCROLL TO CONTINUE READING

ಉಬ್ಬಿಕೊಂಡಿರುವ ಕಠಿಣ ನರಗಳಿಂದ ಕೊಲೆಸ್ಟ್ರಾಲ್ ನ ನಿರ್ಮೂಲನೆಗೆ ಆಯುರ್ವೇದ ತುಂಬಾ ಪರಿಣಾಮಕಾರಿಗ್ಯಾಗಿದೆ. ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ರಾಮಬಾಣ ಉಪಾಯದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಉಪಾಯದಲ್ಲಿ ಸೂಚಿಸಲಾಗಿರುವ ಹಸಿರು ಎಲೆಗಳನ್ನು  ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ, ರಕ್ತನಾಳಗಳಲ್ಲಿ ಸಂಗ್ರಹಗೊಂಡ ಕೆಟ್ಟ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗಿ ಹೋಗುತ್ತದೆ.


ನುಗ್ಗೆ ಸೊಪ್ಪನ್ನು ಅಗೆಯಿರಿ
ಆಯುರ್ವೇದದಲ್ಲಿ ನುಗ್ಗೆಯನ್ನು ಒಂದಲ್ಲ ಹಲವಾರು ಕಾಯಿಲೆಗಳಿಗೆ ಒಂದು ಪರಿಣಾಮಕಾರಿ ಔಷಧಿ ಎಂದು ಹೇಳಲಾಗಿದೆ. ಈ ಗಿಡದ ಎಲೆಗಳಿಂದ ಹಿಡಿದು ಕಾಂಡದವರೆಗೆ ಔಷಧೀಯ ಗುಣಗಳನ್ನು ಹೊಂದಿವೆ. ಇದು ಕೂದಲುದುರುವಿಕೆ, ಬಿಪಿ, ಅರ್ಥರೈಟಿಸ್, ಎನಿಮಿಯಾ, ಥೈರಾಯಿಡ್, ಡಯಾಬಿಟಿಸ್, ಅಸ್ತಮಾ. ಶ್ವಾಸಕೋಶದ ಕಾಯಿಲೆ, ಮೂತ್ರಪಿಂಡಗಳ ವ್ಯಾಧಿ, ತೂಕ ಇಳಿಕೆ ಹಾಗೂ ರೋಗ ನಿರೋಧಕ ಶಕ್ತಿ ಕುಗ್ಗುವಿಕೆಯಂತಹ ಕಾಯಿಲೆಗಳಲ್ಲಿ ಒಂದು ಪರಿಣಾಮಕಾರಿ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.


ನುಗ್ಗೆಕಾಯಿ ಗಿಡ ಪೋಷಕಾಂಶಗಳ ಖಜಾನೆಯಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ಬಿ2, ಬಿ3, ವಿಟಮಿನ್ ಬಿ6, ಫೋಲೆಟ್, ಅಸ್ಕಾರ್ಬಿಕ್ ಆಸಿಡ್, ಕ್ಯಾಲ್ಸಿಯಂ, ಪೊಟ್ಯಾಸಿಯಂ, ಐರನ್, ಮೆಗ್ನೆಸಿಯಂ, ಫೋಸ್ಪೋರೇಟ್ ಹಾಗೂ ಜಿಂಕ್ ಗಳಂತಹ ದೇಹಕ್ಕೆ ಬೇಕಾಗುವ ಅತ್ಯಾವಶ್ಯಕ ಪೋಷಕಾಂಶಗಳಿವೆ. ಇದೇ ಕಾರಣದಿಂದ ಇದು ಆಂಟಿಬಯೋಟಿಕ್, ಅನಾಲ್ಜೆಸಿಕ್, ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲೇಮೆಟರಿ, ಆಂಟಿಕ್ಯಾನ್ಸರ್, ಆಂಟಿಡಯಾಬಿಟಿಕ್, ಆಂಟಿಫಂಗಲ್ ಹಾಗೂ ಆಶ್ಚರ್ಯಕಾರಕ ರೀತಿಯಲ್ಲಿ ಆಂಟಿಏಜಿಂಗ್ ನಂತೆ ಕಾರ್ಯನಿರ್ವಹಿಸುತ್ತದೆ.

ನರಗಳಲ್ಲಿ ಶೇಖರಣೆಗೊಂಡ ಜಿಡ್ಡು ತೊಲಗಿಸಲು ಏನು ಮಾಡಬೇಕು?
ನುಗ್ಗೆಗಿಡದ ತಾಜಾ ಮತ್ತು ಎಳೆ ಎಲೆಗಳನ್ನು ನೀವು ಬರಿ ಬಾಯಿಯಿಂದ ಅಗೆದು ತಿನ್ನಬಹುದು. ಇಲ್ಲದಿದ್ದರೆ, ಇವುಗಳನ್ನು ನೀವು ಸ್ಪ್ರೌಟ್ಸ್ ಅಥವಾ ಸಲಾಡ್ ಗಳಲ್ಲಿಯೂ ಕೂಡ ಬೆರೆಸಿ ತಿನ್ನಬಹುದು. ಇದರ ಸಾಗು, ಪರಾಠ ಕೂಡ ತಯಾರಿಸಿ ತಿನ್ನಬಹುದು. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಆನೀರನ್ನು ಸಹ ನೀವು ಕುಗಿಯಬಹುದು. ಪೌಡರ್ ರೂಪದಲ್ಲಿಯೂ ಕೂಡ ನೀವು ಇದನ್ನು ಸೇವಿಸಬಹುದು. ನಿತ್ಯ ಕನಿಷ್ಠ 5 ಚಮಚೆಗಳಷ್ಟು ಇದನ್ನು ಸೇವಿಸಿ.


ಇದನ್ನೂ ಓದಿ-High Sugar: ನಿಮ್ಮೀ ಅಭ್ಯಾಸಗಳಿಂದ ರಕ್ತದಲ್ಲಿನ ಇನ್ಸುಲಿನ್ ತಕ್ಷಣವೇ ಇಳಿಕೆಯಾಗುತ್ತದೆ, ಔಷಧಿಯೂ ಕೆಲಸಕ್ಕೆ ಬರಲ್ಲ


ನುಗ್ಗೆಗಿಡ ಇನ್ನೂ ಹಲವು ಲಾಭಗಳನ್ನು ಹೊಂದಿದೆ 
>> ದೇಹದಲ್ಲಿ ಹಿಮೊಗ್ಲೋಬಿನ್ ಮಟ್ಟವನ್ನು ಉತ್ತಮಗೊಳಿಸುತ್ತದೆ.
>> ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಿಸುತ್ತದೆ. 
>> ಲೀವರ್ ಹಾಗೂ ಕಿಡ್ನಿಯಿಂದ ವಿಷಕಾರಿ ಪದಾರ್ಥಗಳನ್ನು ಇದು ಹೊರಹಾಕುತ್ತದೆ. 
>> ರಕ್ತವನ್ನು ಶುದ್ಧೀಕರಿಸುವುದರ ಮೂಲಕ ಚರ್ಮದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. 
>> ಇದು ತೂಕ ಇಳಿಕೆಗೆ ಒಂದು ರಾಮಬಾಣ ಮನೆಮದ್ದಾಗಿದೆ.


ಇದನ್ನೂ ಓದಿ-Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ