High Blood Sugar Alert: ಅಧಿಕ ರಕ್ತದ ಸಕ್ಕರೆಯು ಅತ್ಯಂತ ಗಂಭೀರವಾದ ಕಾಯಿಲೆಗಳಲ್ಲಿ ಒಂದಾಗಿದೆ ಮತ್ತು ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದು ನೇರವಾಗಿ ಹೃದಯ ಅಥವಾ ಮೂತ್ರಪಿಂಡ, ಕಣ್ಣುಗಳಿಗೆ ಹಾನಿ ಮಾಡುತ್ತದೆ. ಅಷ್ಟೇ ಅಲ್ಲ, ಅಸ್ತಿತ್ವದಲ್ಲಿರುವ ಯಾವುದೇ ಕಾಯಿಲೆಯು ಅಧಿಕ ರಕ್ತದ ಸಕ್ಕರೆಯಿಂದ ಉಲ್ಬಣಗೊಳ್ಳುತ್ತದೆ.
ಆದ್ದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ಟೈಪ್ 2 ಡಯಾಬಿಟಿಸ್‌ಗೆ ನಮ್ಮ ಆರಾಮದಾಯಕ ಜೀವನಶೈಲಿಯು ಒಂದು ಪ್ರಮುಖ ಕಾರಣವಾಗಿದೆ. ಬೊಜ್ಜು ಮತ್ತು ಕೆಲವು ಕಾಯಿಲೆಗಳು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ. ಆದರೆ ಟೈಪ್ 1 ಮಧುಮೇಹವು ಜೀನ್‌ಗಳಿಂದ ಉಂಟಾಗುತ್ತದೆ ಮತ್ತು ಅದನ್ನು ನಿಯಂತ್ರಿಸಲಾಗುವುದಿಲ್ಲ, ಆದರೆ ಟೈಪ್ 2 ಅನ್ನು ಆಹಾರ, ವ್ಯಾಯಾಮ ಮತ್ತು ಸಮತೋಲಿತ ಜೀವನಶೈಲಿಯಿಂದ ಸುಲಭವಾಗಿ ನಿಯಂತ್ರಿಸಬಹುದು.
ಟೈಪ್ 1 ರಲ್ಲಿ ಇನ್ಸುಲಿನ್ ಇಂಜೆಕ್ಷನ್ ಮಾತ್ರ ಕಾರ್ಯನಿರ್ವಹಿಸುತ್ತದೆ, ಆದರೆ ಟೈಪ್ 2 ಡಯಾಬಿಟಿಸ್‌ನಲ್ಲಿ ಇದನ್ನು ಔಷಧದಿಂದ ನಿಯಂತ್ರಿಸಬಹುದು, ಆದರೆ ಕೆಲವೊಮ್ಮೆ ನಮ್ಮ ಕೆಟ್ಟ ಅಭ್ಯಾಸಗಳು ಮತ್ತು ಆಹಾರದ ಕಾರಣದಿಂದಾಗಿ ಔಷಧಿಯೂ ಕೂಡ ಕಾರ್ಯನಿರ್ವಹಿಸುವುದಿಲ್ಲ. ರಕ್ತದಲ್ಲಿನ ಇನ್ಸುಲಿನ್ ವೇಗವಾಗಿ ಕೆಲಸ ಮಾಡುವುದನ್ನು ತಡೆಯುವ ಮತ್ತು ಅದರ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಆ ಅಭ್ಯಾಸಗಳು ಅಥವಾ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಆರ್ಟಿಫಿಷಿಯಲ್ ಸ್ವೀಟ್ನರ್
ನೀವು ಮಧುಮೇಹದಲ್ಲಿ ಸಾಕಷ್ಟು ಕೃತಕ ಸಿಹಿಕಾರಕವನ್ನು ಬಳಸಿದರೆ ಅದು ಹಾನಿಕಾರಕವಲ್ಲ ಎಂದು ಭಾವಿಸುತ್ತಿದ್ದರೆ, ನಿಮ್ಮೀ ತಪ್ಪು ಕಲ್ಪನೆಗೆ ಇಂದೇ ಬ್ರೇಕ್ ಹಾಕಿ. ಯಾವುದೇ ರೀತಿಯ ಕೃತಕ ಸಿಹಿಕಾರಕ ಅಥವಾ ಡಯಟ್ ಕೋಕ್ ಅಥವಾ ಡಯಟ್ ಸ್ವೀಟ್ ನಿಮ್ಮ ಪಾಲಿಗೆ ವಿಷವಾಗಿದೆ ಎಂಬುದನ್ನು ಮೈಂಡಲ್ಲಿ ಫಿಕ್ಸ್ ಮಾಡಿ. ಇದು ನಿಮ್ಮ ಇನ್ಸುಲಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ತದಲ್ಲಿ ಇನ್ಸುಲಿನ್ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುತ್ತದೆ. ಈ ಕಾರಣದಿಂದಾಗಿ ನಿಮ್ಮ ಸಕ್ಕರೆ ಹೆಚ್ಚಾಗುವ ಮತ್ತು ಹೆಚ್ಚು-ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ.
ಕಾಫಿ
ನೀವು ಬಹಳಷ್ಟು ಕಪ್ಪು ಕಾಫಿ ಅಥವಾ ಸಕ್ಕರೆ ಇಲ್ಲದೆ ಕಾಫಿ ಕುಡಿಯುತ್ತಿದ್ದರೆ, ಅದು ನಿಮ್ಮ ಇನ್ಸುಲಿನ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕೆಫೀನ್ ಕೆಲವೊಮ್ಮೆ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ನಿದ್ರೆಯ ಕೊರತೆ
ನಿದ್ದೆಯೂ ಕೂಡ ಒಂದು ಔಷಧವಿದ್ದಂತೆ. ನೀವು ಕಡಿಮೆ ನಿದ್ದೆ ಮಾಡಿದರೆ ಅಥವಾ ತಡರಾತ್ರಿಯವರೆಗೆ ಎಚ್ಚರವಾಗಿದ್ದರೆ, ಖಂಡಿತವಾಗಿಯೂ ಸಕ್ಕರೆ ಕಡಿಮೆ ಮಾಡುವ ಔಷಧಿಯು ಕೂಡ ನಿಮ್ಮ ದೇಹದಲ್ಲಿನ ಸಕ್ಕರೆಯನ್ನು ಕಡಿಮ ಮಾಡಲು ವಿಫಲವಾಗುತ್ತದೆ. ರಾತ್ರಿಯಲ್ಲಿ ಮೊಬೈಲ್ ನೋಡುವುದು ಅಥವಾ ತಡವಾಗಿ ಮಲಗುವುದು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಕೆಲವು ಸಂಶೋಧನೆಗಳಲ್ಲಿ, ಒಂದು ರಾತ್ರಿಯೂ ಕೂಡ ಸಾಕಷ್ಟು ನಿದ್ರೆ ಮಾಡದಿದ್ದರೆ, ನಿಮ್ಮ ಶುಗರ್ ಹೆಚ್ಚಾಗಬಹುದು ಮತ್ತು ಇನ್ಸುಲಿನ್ ಕಡಿಮೆಯಾಗಬಹುದು ಹೇಳಿರುವುದು ಇಲ್ಲಿ ಉಲ್ಲೇಖನೀಯ.
ಉಪಹಾರ ಸೇವಿಸದೆ ಇರುವುದು
ಹಸಿವೆ ಹೊಡೆಯುವುದು ಅಥವಾ ಉಪಾಹಾರವನ್ನು ಬಿಟ್ಟುಬಿಡುವುದು ಅಥವಾ ತಡವಾಗಿ ಮಾಡುವುದರಿಂದ ನಿಮ್ಮ ಇನ್ಸುಲಿನ್ ಮೇಲೆ ಪರಿಣಾಮ ಉಂಟಾಗುವುದಿಲ್ಲ ಎಂದು ನೀವು ಭಾವಿಸುತ್ತಿದ್ದಾರೆ, ಅದೊಂದು ಕೆಟ್ಟ ಅಭ್ಯಾಸ ಎಂಬುದನ್ನು ಇಂದೇ ತಿಳಿದುಕೊಳ್ಳಿ. ನೀವು ಬೆಳಗಿನ ಉಪಾಹಾರವನ್ನು ಸೇವಿಸದಿದ್ದರೆ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ. ಮರುಕಳಿಸುವ ಉಪವಾಸ ಅಥವಾ ಇತರ ಆಹಾರಕ್ಕಾಗಿ ಉಪಹಾರವನ್ನು ಬಿಟ್ಟುಬಿಡಲು ಯೋಜಿಸುವ ಮೊದಲು ನಿಮ್ಮ ವೈದ್ಯರನ್ನು ಪರೀಕ್ಷಿಸಿ.
ತೂಕ ಇಳಿಕೆಯ ಬಯಕೆ
ನೀವು ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ ಅಥವಾ ತಿನ್ನುವ ಮತ್ತು ಕುಡಿಯುವಲ್ಲಿ ನಿರ್ಲಕ್ಷ್ಯ ವಹಿಸಿದರೆ, ಅದು ನಿಮ್ಮ ಇನ್ಸುಲಿನ್ ಮಟ್ಟಕ್ಕೆ ಸರಿಯಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ, ಹೀಗೆ ಮಾಡುವುದರಿಂದ ನೀವು ಇನ್ಸುಲಿನ್ ಹಾರ್ಮೋನ್ ಚಟುವಟಿಕೆಯನ್ನು ಕಡಿಮೆ ಮಾಡುತ್ತಿದ್ದೀರಿ ಮತ್ತು ಬೆಳಗ್ಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಶೂಟ್ ಔಟ್ ಆಗುವ ಸಾಧ್ಯತೆ ಇರುತ್ತದೆ.
ಕಡಿಮೆ ನೀರು ಕುಡಿಯುವುದು
ನೀವು ಮಧುಮೇಹಿಗಳಾಗಿದ್ದರೆ, ಮರೆತೂ ಕೂಡ ಕಡಿಮೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ನಿರ್ಜಲೀಕರಣವು ಹೆಚ್ಚಿನ ಸಕ್ಕರೆಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಡಿ. ಅದಕ್ಕಾಗಿಯೇ ಮಧುಮೇಹದಲ್ಲಿ ಹೆಚ್ಚು ನೀರು ಕುಡಿಯುವುದು ಮುಖ್ಯವಾಗಿದೆ. ಏಕೆಂದರೆ ಆಗಾಗ್ಗೆ ಮೂತ್ರ ವಿಸರ್ಜನೆಯು ದೇಹದಲ್ಲಿ ನೀರಿನ ಕೊರತೆಗೆ ಕಾರಣವಾಗಬಹುದು.
ಇದನ್ನೂ ಓದಿ-Diabetes: ಮದುಮೇಹ ಇರುವವರಿಗೆ ವರದಾನಕ್ಕೆ ಸಮಾನ ಈ ಪಾನೀಯ
ವಸಡು ರೋಗ
ಒಸಡು ಕಾಯಿಲೆಗಳನ್ನು ನಿರ್ಲಕ್ಷಿಸಬೇಡಿ ಏಕೆಂದರೆ ಈ ರೋಗಗಳು ನಿಮ್ಮ ಸಕ್ಕರೆಯ ಹೆಚ್ಚಳಕ್ಕೆ ಕಾರಣ. ಒಸಡು ಕಾಯಿಲೆಗಳು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು.
ಇದನ್ನೂ ಓದಿ-Men Health Tips: ಪುರುಷರಲ್ಲಿ ಕ್ಯಾನ್ಸರ್ ನಿವಾರಣೆಯಿಂದ ಹಿಡಿದು ಹಲವು ಶಾರೀರಿಕ ಸಮಸ್ಯೆಗಳಿಗೆ ರಾಮಬಾಣ ಕೇಸರಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ