Cholesterol Control Tips: ನಮ್ಮ ಹಾಳಾದ ಜೀವನಶೈಲಿಯ ಕಾರಣ ಉಂಟಾಗುವ ಗಂಭೀರ ಕಾಯಿಲೆಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಒಂದಾಗಿದೆ. ಇದು ಬಹುತೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ದೀರ್ಘಕಾಲ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವುದು ಹೃದ್ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯುನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ತಡಮಾಡದೆ ಅದನ್ನು ನಿಯಂತ್ರಿಸುವುದು ತುಂಬಾ ಮುಖ್ಯ. (Health News In Kannada)

COMMERCIAL BREAK
SCROLL TO CONTINUE READING

ಔಷಧಿಗಳ ಸಹಾಯದಿಂದ ನೀವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಇದಲ್ಲದೆ ಆಹಾರ ಪದ್ಧತಿಯನ್ನು ಸುಧಾರಿಸುವುದು ಸಹ ಅಗತ್ಯವಾಗಿದೆ. ದೇಹದಲ್ಲಿ ಅಧಿಕ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಯಾವ ಆಹಾರಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬುದನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯ ಹೇಳಿದೆ ಮತ್ತು ಅದಕ್ಕೆ ಸಂಬಂಧಿಸಿದ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.  ಬನ್ನಿ ತಿಳಿದುಕೊಳ್ಳೋಣ, 


ಕೆಂಪು ಮಾಂಸ
ಗೋಮಾಂಸ ಮತ್ತು ಹಂದಿಮಾಂಸವು ಸಾಮಾನ್ಯವಾಗಿ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದಲ್ಲದೆ, ಹ್ಯಾಂಬರ್ಗರ್‌ಗಳು, ಪಕ್ಕೆಲುಬುಗಳು, ಹಂದಿ ಚಾಪ್‌ಗಳು ಮತ್ತು ರೋಸ್ಟ್‌ಗಳಂತಹ ಮಾಂಸದ ಪಾಕವಿಧಾನಗಳಲ್ಲಿ ಬಹಳಷ್ಟು ಕೊಬ್ಬು ಇರುತ್ತದೆ, ಇದು ಅಧಿಕ ಕೊಲೆಸ್ಟ್ರಾಲ್ ರೋಗಿಗಳಿಗೆ ಆರೋಗ್ಯಕ್ಕೆ ಸೂಕ್ತವಲ್ಲ. ಹೀಗಂತ, ನೀವು ಮಾಂಸ ಸೇವನೆಯನ್ನು ಬಿಡಬೇಕು ಎಂದಲ್ಲ, ಕೆಲ ವಿಶೇಷ ಸನ್ನಿವೇಶಗಳಲ್ಲಿ ಮಾತ್ರ ಸೇವಿಸಿ. 


ಫ್ರೈ ಮಾಡಿದ ಆಹಾರಗಳು
ಆನಿಯನ್ ರಿಂಗ್ಸ್, ಫ್ರೆಂಚ್ ಫ್ರೈಗಳಂತಹ ಡೀಪ್ ಫ್ರೈಡ್ ಆಹಾರಗಳು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳಕ್ಕೆ ಕಾರಣವಾಗುತ್ತವೆ. ಇದಕ್ಕೆ ಕಾರಣ ಎಂದರೆ ಡೀಪ್ ಫ್ರೈ ಮಾಡಲಾದ ಆಹಾರಗಳು ದೇಹದಲ್ಲಿ ಕ್ಯಾಲೋರಿ ಪ್ರಮಾಣವನ್ನು ಹೆಚ್ಚಿಸುತ್ತವೆ. ಆದರೆ ನೀವು ಕುರುಕುಲಾದ ವಸ್ತುಗಳನ್ನು ತಿನ್ನಲು ಬಯಸಿದರೆ ನೀವು ಏರ್ ಫ್ರೈಯರ್ನಲ್ಲಿ ಆಲಿವ್ ಎಣ್ಣೆಯನ್ನು ಬಳಸಬಹುದು.


ಸಂಸ್ಕರಿಸಿದ ಮಾಂಸ
ಹಾಟ್ ಡಾಗ್‌ಗಳು, ಸಾಸೇಜ್‌ಗಳು ಮತ್ತು ಬೇಕನ್ ಗಳಲ್ಲಿ  ಅಧಿಕ ಕೊಬ್ಬಿನಾಂಶ ಇರುತ್ತದೆ.  ಅವು ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಬದಲಾಗಿ, ನೀವು ಟರ್ಕಿ ಅಥವಾ ಚಿಕನ್‌ನಿಂದ ತಯಾರಿಸಿದ ಬೇಕನ್ ಮತ್ತು ಸಾಸೇಜ್ ಅನ್ನು ತಿನ್ನಬಹುದು, ಆದರೆ ಅದನ್ನು ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.


ಇದನ್ನೂ ಓದಿ-Curd Health Benefits: ಮದ್ಯಾಹ್ನದ ಊಟದಲ್ಲಿ ಮೊಸರನ್ನು ಖಂಡಿತ ಸೇರಿಸಿ, ಸಿಗುತ್ತವೆ ಈ ಲಾಭಗಳು!


ಬೇಯಿಸಿದ ಆಹಾರಗಳು
ನೀವು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದರೆ, ನೀವು ಕುಕೀಸ್, ಕೇಕ್, ಪೇಸ್ಟ್ರಿಗಳಂತಹ ಬೇಯಿಸಿದ ಆಹಾರವನ್ನು ಸೇವಿಸಬಾರದು. ಏಕೆಂದರೆ ಇದರಲ್ಲಿ ಬೆಣ್ಣೆಯಂತಹ ಸಾಕಷ್ಟು ಕೊಬ್ಬಿನಾಂಶ ಇರುವ ಪದಾರ್ಥಗಳನ್ನು ಬಳಸಲಾಗುತ್ತದೆ, ಇದರಿಂದಾಗಿ ಅದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಹೆಚ್ಚಾಗುತ್ತದೆ.


ಇದನ್ನೂ ಓದಿ-Bad Cholesterol ಹೆಚ್ಚಾದ್ರೆ ಕೈ-ಕಾಲು, ಬೆರಳುಗಳ ಮೇಲೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಮರೆತೂ ಇಗ್ನೋರ್ ಮಾಡ್ಬೇಡಿ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ