Curd Health Benefits: ಮದ್ಯಾಹ್ನದ ಊಟದಲ್ಲಿ ಮೊಸರನ್ನು ಖಂಡಿತ ಸೇರಿಸಿ, ಸಿಗುತ್ತವೆ ಈ ಲಾಭಗಳು!

Curd Health Benefits: ಮೊಸರಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುತ್ತೆ. ಮದ್ಯಾಹ್ನದ ಊಟದಲ್ಲಿ ಇದನ್ನು ಸೇರಿಸುವ ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಅದರಿಂದ ಹಲವು ಲಾಭಗಳಾಗುತ್ತವೆ. (Lifestyle News In Kannada)

Written by - Nitin Tabib | Last Updated : Feb 25, 2024, 03:44 PM IST
  • ಮೊಸರಿನ ಗುಣಧರ್ಮ ತಂಪಾಗಿರುವ ಕಾರಣ ಇದು ದೇಹದ ಉಷ್ಣತೆಯನ್ನು ನಿರ್ವಹಿಸಲು ಸಹಾಯಮಾಡುತ್ತದೆ.
  • ಇದು ದೇಹಕ್ಕೆ ತಂಪು ನೀಡುತ್ತದೆ ಮತ್ತು ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯನ್ನು ತಡೆಯುತ್ತದೆ.
  • ಇದು ಬೇಸಿಗೆಯಲ್ಲಿ ಹೇಟ್ ಸ್ಟ್ರೋಕ್ ಮತ್ತು ಹಲ್ಲಿನ ಸಮಸ್ಯೆಗಳಿಂದ ಜನರನ್ನು ರಕ್ಷಿಸುತ್ತದೆ.
Curd Health Benefits: ಮದ್ಯಾಹ್ನದ ಊಟದಲ್ಲಿ ಮೊಸರನ್ನು ಖಂಡಿತ ಸೇರಿಸಿ, ಸಿಗುತ್ತವೆ ಈ ಲಾಭಗಳು! title=

Health Benefits Of Eating Curd: ಉತ್ತಮ ಆರೋಗ್ಯಕ್ಕಾಗಿ ನಮಗೆ ಹಾಲು ಮತ್ತು ಹಾಲುಜನ್ಯ ಪದಾರ್ಥಗಳ ಸೇವನೆಗಾಗಿ ಸಲಹೆ ನೀಡಲಾಗುತ್ತದೆ. ಹಲವು ಜನರು ಹಾಲನ್ನು ಇಷ್ಟಪಡುವುದಿಲ್ಲ. ಆದರೆ, ಮೊಸರು ಅಂದರೆ ಅವರಿಗೆ ಪಂಚಪ್ರಾಣ. ಮೊದರು ನಮ್ಮ ದಿನನಿತ್ಯದ ಆಹಾರವಾಗುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಲಾಭದಾಯಕವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಖ್ಯಾತ ಆಹಾರ ತಜ್ಞೆ ಆರೋಷಿ ಯಾದವ್, ನಾವು ಒಂದುವೇಳೆ ಮೊಸರನ್ನು ನಮ್ಮ ಮದ್ಯಾಹ್ನದ ಊಟದ ಭಾಗವಾಗಿಸಿದರೆ, ಅದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಾಗುತ್ತವೆ. (Lifestyle News In Kannada)

ಮದ್ಯಾಹ್ನ ಮೊಸರು ಸೇವನೆಯಿಂದಾಗುವ ಲಾಭಗಳು
1. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಮೊಸರು ಪ್ರೋಬಯೊಟಿಕ್ ನಿಂದ ಸಮೃದ್ಧವಾಗಿದೆ, ಮೊಸರನ್ನು ಒಂದು ಒಳ್ಳೆಯ ಗುಣಮಟ್ಟದ  ಬ್ಯಾಕ್ಟೀರಿಯಾ ಎಂದೂ ಕೂಡ ಕರೆಯುತ್ತಾರೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕರುಳನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಮಲಬದ್ಧತೆ, ಗ್ಯಾಸ್, ಅಸಿಡಿಟಿ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

2. ಅತ್ಯ್ತುತ್ತಮ ಶಕ್ತಿ ವರ್ಧಕವಾಗಿದೆ
ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿಗಳೂ ಕೂಡ ಇರುತ್ತವೆ, ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮಧ್ಯಾಹ್ನ ಮೊಸರು ತಿನ್ನುವುದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ವ್ಯಾಯಾಮ ಅಥವಾ ದೈನಂದಿನ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಇದು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.

3. ದೇಹವನ್ನು ತಂಪಾಗಿಸುತ್ತದೆ
ಮೊಸರಿನ ಗುಣಧರ್ಮ ತಂಪಾಗಿರುವ ಕಾರಣ ಇದು ದೇಹದ ಉಷ್ಣತೆಯನ್ನು ನಿರ್ವಹಿಸಲು ಸಹಾಯಮಾಡುತ್ತದೆ. ಇದು ದೇಹಕ್ಕೆ ತಂಪು ನೀಡುತ್ತದೆ ಮತ್ತು ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯನ್ನು ತಡೆಯುತ್ತದೆ. ಇದು ಬೇಸಿಗೆಯಲ್ಲಿ ಹೇಟ್ ಸ್ಟ್ರೋಕ್ ಮತ್ತು ಹಲ್ಲಿನ ಸಮಸ್ಯೆಗಳಿಂದ ಜನರನ್ನು ರಕ್ಷಿಸುತ್ತದೆ.

4. ತೂಕ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ
ನಿರಂತರವಾಗಿ ಮೊಸರನ್ನು ಸೇವಿಸಿದರೆ ಅದು ತೂಕ ಇಳಿಕೆಗೆ ಸಾಕಷ್ಟ ಸಹಾಯ ಮಾಡುತ್ತದೆ.  ಇದು ಹೊಟ್ಟೆಗೆ ತೃಪ್ತಿಯ ಭಾವ ಒದಗಿಸುವ ಕಾರಣ ಜನರು ಅತಿಯಾಗಿ ಆಹಾರ ಸೇವನೆ ಮಾಡುವುದನ್ನು ತಪ್ಪಿಸುತ್ತಾರೆ. ಇದಲ್ಲದೆ, ಮೊಸರು ಪ್ರೋಟೀನ್ ಅನ್ನು ಹೊಂದಿದ್ದು ಅದು ಊಟದ ನಂತರ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಚರ್ಮಕ್ಕೆ ಹಿತಕಾರಿ
ಮೊಸರು ಪ್ರೋಬಯಾಟಿಕ್‌ಗಳ ಉಗ್ರಾಣವಾಗಿದೆ. ಇದು ಚರ್ಮಕ್ಕೆ ಅತ್ಯಂತ ಹಿತಕಾರಿಯಾಗಿರುತ್ತದೆ. ಈ ಉತ್ತಮ ಬ್ಯಾಕ್ಟೀರಿಯಾಗಳು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತವೆ. ಚರ್ಮದ ಮೊಡವೆಗಳನ್ನು ಕಡಿಮೆ ಮಾಡಲು ಕೂಡ ಮೊಸರು ಸಹಾಯ ಮಾಡುತ್ತದೆ.

ಇದನ್ನೂ ಓದಿ-

6. ಪೌಷ್ಟಿಕಾಂಶಗಳ ನಿಧಿ
ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಇತರ ಹಲವು ಪೌಷ್ಟಿಕಾಂಶಗಳು ಮೊಸರಿನಲ್ಲಿವೆ, ಇದು ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಾಕಷ್ಟು ಲಾಭದಾಯಕ ಸಾಬೀತಾಗುತ್ತದೆ. ಆದ್ದರಿಂದ, ಊಟದಲ್ಲಿ ಮೊಸರಿನ ಸೇವನೆಯನ್ನು ಖಂಡಿತವಾಗಿ ಹೆಚ್ಚಿಸಿ.

ಇದನ್ನೂ ಓದಿ-

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News