Corona Vaccination : ಲಸಿಕೆ ಹಾಕಿಸಿಕೊಳ್ಳಲು ನಿಮ್ಮ ನಂಬರ್ ಬಂದಿದೆ, ಉಪಯುಕ್ತ ಮಾಹಿತಿ ಇಲ್ಲಿದೆ.
60 ವರ್ಷ ಮೇಲ್ಪಟ್ಟ ವಯೋವರ್ಗದ ಎಲ್ಲರಿಗೂ ಮಾರ್ಚ್ 1 ರಿಂದ ಕರೋನಾ ಲಸಿಕೆ ಸಿಗಲಿದೆ. ಗೊತ್ತಿರಲಿ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ಎಲ್ಲಾ ವಯೋವರ್ಗದವರೂ ಕರೋನಾ ಲಸಿಕೆ ಹಾಕಿಸಿಕೊಳ್ಳಬಹುದು.
ಬೆಂಗಳೂರು : ಗೊತ್ತಿರಲಿ. ಕರೋನಾ (Covid 19) ಸೋತಿದೆ ನಿಜ, ಆದರೆ ಸತ್ತಿಲ್ಲ. ಹೊಸ ರೂಪ ಹೊಸ ತಾಕತ್ತಿನೊಂದಿಗೆ ಮತ್ತೆ ದಾಳಿ ಇಡುತ್ತಲೂ ಇದೆ. ಮಹಾರಾಷ್ಟ್ರ, ಕೇರಳದಲ್ಲಿ ಕರೋನಾ ಎರಡನೇ ಅಲೆ (Second wave) ರುದ್ರ ತಾಂಡವ ಎಬ್ಬಿಸಿದೆ. ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು, ವೈದ್ಯರು, ಪೊಲೀಸ್ ಮತ್ತು ಸೇನೆಗೆ ಕರೋನಾ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಈಗ ನೀವು ಕೂಡಾ ಕರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಮಾರ್ಚ್ 1 ರಿಂದ ಜನಸಾಮಾನ್ಯರಿಗೂ ಕರೋನಾ ಲಸಿಕೆ ಸಿಗಲಿದೆ. ಇದೊಂದು ಅತ್ಯಂತ ಸುಲಭ ಪ್ರಕ್ರಿಯೆ ಆಗಿದ್ದು, ಯಾವುದೇ ಟೆನ್ಶನ್, ಖರ್ಚು ಇಲ್ಲದೇ ನೀವು ಕೂಡಾ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು. ಅದಕ್ಕೂ ಮೊದಲು, ಈ ವರದಿಯನ್ನು ದಯವಿಟ್ಟು ಗಮನ ಇಟ್ಟು ಓದಿ. ನಿಮ್ಮ ಆಪ್ತರೊಂದಿಗೆ, ಸ್ನೇಹಿತರೊಂದಿಗೆ, ಪ್ರೀತಿಪಾತ್ರರೊಂದಿಗೆ ಈ ವರದಿ ಹಂಚಿಕೊಳ್ಳಿ. ಇದು ನಿಮ್ಮ ಕೆಲಸಕ್ಕೆ ಬರಲಿದೆ.
1. ಯಾರಿಗೆ ಸಿಗಲಿದೆ ವ್ಯಾಕ್ಸಿನ್.?
60 ವರ್ಷ ಮೇಲ್ಪಟ್ಟ ವಯೋವರ್ಗದ ಎಲ್ಲರಿಗೂ ಮಾರ್ಚ್ 1 ರಿಂದ ಕರೋನಾ ಲಸಿಕೆ (Corona vaccine) ಸಿಗಲಿದೆ. ಗೊತ್ತಿರಲಿ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ಎಲ್ಲಾ ವಯೋವರ್ಗದವರೂ ಕರೋನಾ ಲಸಿಕೆ ಹಾಕಿಸಿಕೊಳ್ಳಬಹುದು. ಕೇಂದ್ರ ಸರ್ಕಾರದ ಲೆಕ್ಕಾಚಾರ ಪ್ರಕಾರ 27 ಕೋಟಿ ಜನರಿಗೆ ಲಸಿಕೆ ಸಿಗಲಿದೆ.
ಇದನ್ನೂ ಓದಿ : ಮಕ್ಕಳ Corona Vaccine ಟ್ರಯಲ್ ಗೆ ಅನುಮತಿ ಕೋರಿದ Bharat Biotech, ಮೊದಲು ದತ್ತಾಂಶ ತೋರಿಸಿ ಎಂದ ಸರ್ಕಾರ
2. ಲಸಿಕೆ ಎಲ್ಲಿ ಸಿಗುತ್ತೆ.?
ಪ್ರಾಥಮಿಕ ಆರೋಗ್ಯ ಕೇಂದ್ರ (PHC), ಸರ್ಕಾರಿ ಅಸ್ಪತ್ರೆ ಮತ್ತು ಕೆಲವು ಆಯ್ದ ಖಾಸಗೀ ಆಸ್ಪತ್ರೆಗಳಲ್ಲಿ ಕರೋನಾ ಲಸಿಕೆ ಹಾಕಿಸಿಕೊಳ್ಳಬಹುದು.
3. ಖರ್ಚು ಎಷ್ಟಾಗುತ್ತದೆ.?
ಸರಿ ಸುಮಾರು 12 ಸಾವಿರ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರೋನಾ ಲಸಿಕೆ ಸಂಪೂರ್ಣ ಉಚಿತವಾಗಿ ಸಿಗಲಿದೆ. ಗಮನಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ (Government hospital) ಈ ಲಸಿಕೆ ಸಂಪೂರ್ಣ ಉಚಿತ. ಆದರೆ, ಖಾಸಗೀ ಆಸ್ಪತ್ರೆಗಳಿಗೆ ಹೋದರೆ ಹಣ ಪಾವತಿಸಬೇಕು. ಖಾಸಗೀ ಆಸ್ಪತ್ರೆಗಳಲ್ಲಿ ಕರೋನಾ ಲಸಿಕೆಗೆ ಎಷ್ಟು ದುಡ್ಡು ಕೊಡಬೇಕು ಎನ್ನುವುದು ಇನ್ನೂ ನಿಗದಿಯಾಗಿಲ್ಲ.
4. ಲಸಿಕೆ ಆಯ್ದು ಕೊಳ್ಳುವ ಸ್ವಾತಂತ್ರ್ಯ ಇದೆಯಾ.?
ಲಸಿಕೆ ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿಲ್ಲ. ಭಾರತ್ ಬಯೋಟೆಕ್ ತಯಾರಿಸಿರುವ ಕೊವಾಕ್ಸಿನ್ (Covaxin) ಮತ್ತು ಸೆರಮ್ ಇನ್ಸಿಟ್ಯೂಟ್ ಅಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ (Covishield) ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಯಾವ ವ್ಯಾಕ್ಸಿನ್ ಲಭ್ಯವಿದೆಯೋ, ಅದೇ ವ್ಯಾಕ್ಸಿನ್ ನೀಡಲಾಗುತ್ತದೆ. ಲಸಿಕೆ ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿಲ್ಲ.
ಇದನ್ನೂ ಓದಿ : Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea
5. ಮೊದಲೇ ಅಪಾಯಿಂಟ್ಮೆಂಟ್ ಪಡೆಯಬಹುದೇ..?
ಖಂಡಿತಾ. ಅಡ್ವಾನ್ಸ್ ಬುಕಿಂಗ್ (Advance booking) ಮಾಡಬಹುದು. ಕೊವಿನ್ ಆಪ್ನಲ್ಲಿ ನಿಮ್ಮ ಹೆಸರು ರಿಜಿಸ್ಟ್ರೇಶನ್ (Registration) ಮಾಡಿಸಿಕೊಳ್ಳಿ. ನಿಮ್ಮ ಡೇಟ್, ಟೈಮ್ ಅದರಲ್ಲಿ ನಮೂದಿಸಿ. ಅದೇ ಹೊತ್ತಿಗೆ ನಿಗದಿಪಡಿಸಿದ ಸರ್ಕಾರಿ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬಹುದು. ನಿಮ್ಮ ಸಮಯ ಶ್ರಮ ಎರಡೂ ಉಳಿಯುತ್ತದೆ.
6. ಲಸಿಕೆಗೆ ಮೊದಲೇ ಹೆಸರು ನೊಂದಾಯಿಸುವುದು ಅಗತ್ಯವೇ..?
ಖಂಡಿತಾ ಇಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮೊದಲೇ ಹೆಸರು ರಿಜಿಸ್ಟ್ರೇಶನ್ ಮಾಡುವುದು ಅನಿವಾರ್ಯ ಏನಲ್ಲ. ವ್ಯಾಕ್ಸಿನ್ ಸೆಂಟರ್ ಗೆ ಹಾಗೇ ಹೋಗಿ ಲಸಿಕೆ ಹಾಕಿಸಿಕೊಂಡು ಬರಬಹುದು. ಮೊದಲೇ ಹೆಸರು ನೋಂದಾಯಿಸುವುದು ಖಂಡಿತಾ ಅನಿವಾರ್ಯ ಅಲ್ಲ.
7. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಾ.?
ಖಂಡಿತಾ ಸಿಗುತ್ತದೆ. ನಿಮ್ಮ ಮನೆ ಸಮೀಪದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಸಿಗಲಿದೆ. ಆಯುಷ್ಮಾನ್ ಭಾರತ್ ವಿಮೆ (Ayushman Bharat) ಸೌಲಭ್ಯ ಸಿಗುವ ಆಸ್ಪತ್ರೆಗಳಲ್ಲೂ ಲಸಿಕೆ ಸಿಗಲಿದೆ. ಒಟ್ಟು 24 ಸಾವಿರ ಕೇಂದ್ರಗಳಲ್ಲಿ ಲಸಿಕೆ ಸಿಗಲಿದೆ.
ಇದನ್ನೂ ಓದಿ : ಶೀಘ್ರದಲ್ಲಿಯೇ ಶ್ರೀಸಾಮಾನ್ಯರ Vaccination ಅಭಿಯಾನ, ಈ ದಿನ ಶುರು ಆಗುವ ಸಾಧ್ಯತೆ
8. ಸ್ಮಾರ್ಟ್ ಫೋನ್ ಇರಲೇ ಬೇಕಾ..?
ಖಂಡಿತಾ ಅಗತ್ಯವಿಲ್ಲ. ಲಸಿಕೆ ಹಾಕಿಸಿಕೊಳ್ಳಬೇಕೆಂದರೆ ನಿಮ್ಮಲ್ಲಿ ಸ್ವಂತ ಸ್ಮಾರ್ಟ್ ಫೋನ್ (Smartphone) ಇರಬೇಕು ಎಂದೇನಿಲ್ಲ. ಬೇರೆಯವರ ಬಳಸಿ ಲಸಿಕೆ ಹಾಕಿಸಿಕೊಳ್ಳಬಹುದು. ಒಂದು ಸ್ಮಾರ್ಟ್ ಫೋನ್ ನಿಂದ ನಾಲ್ಕು ಜನರು ಅಪಾಯಿಂಟ್ಮೆಂ ಟ್ ಪಡೆಯಬಹುದು.
9. ಪ್ರತ್ಯೇಕ ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಅನಿವಾರ್ಯವೇ..?
ಖಂಡಿತಾ ಇಲ್ಲ. ಆರೋಗ್ಯ ಸೇತು ಆಪ್ (Arogyasetu app) ಮೂಲಕ ಕೂಡಾ ಕರೋನಾ ಲಸಿಕೆಗೆ (corona vaccine) ಹೆಸರು ನೊಂದಾಯಿಸಬಹುದು. ಕೊವಿನ್ ಆಪ್ (cowin app) ಮೂಲಕವೂ ಅಪಾಯಿಂಟ್ಮೆಂಟ್ ಪಡೆಯಬಹುದು. Cowin.gov.in ವೆಬ್ ಪೋರ್ಟಲ್ ಮೂಲಕವೂ ನೋಂದಾಯಿಸಬಹುದು. ಕಂಪ್ಯೂಟರ್, ಸ್ಮಾರ್ಟ್ ಫೋನ್ ಇಲ್ಲದವರು ಕಾಮನ್ ಸರ್ವಿಸ್ ಸೆಂಟರ್ (Common Service Center) ಮೂಲಕವೂ ರೆಜಿಸ್ಟ್ರೇಶನ್ ಮಾಡಿಸಿಕೊಳ್ಳಬಹುದು. 6 ಲಕ್ಷ ಹಳ್ಳಿಗಳಲ್ಲಿ 2.5 ಲಕ್ಷ ಕಾಮನ್ ಸರ್ವಿಸ್ ಸೆಂಟರ್ ಸ್ಥಾಪಿಸಲಾಗಿದೆ.
10. ಲಸಿಕೆ ಹಾಕಿಸಿಕೊಳ್ಳುವಾಗ ಯಾವ ದಾಖಲೆ ಕೇಳುತ್ತಾರೆ.
ಲಸಿಕೆ ಹಾಕಿಸಿಕೊಳ್ಳುವಾಗ ಖಂಡಿತ ಕೆಲವು ದಾಖಲೆ (Documents) ಕೇಳುತ್ತಾರೆ. 60 ವರ್ಷ ಆಗಿದೆ ಎನ್ನುವುದಕ್ಕೆ ಯಾವುದಾದರೂ ದಾಖಲೆ ನಿಮ್ಮಲ್ಲಿರಬೇಕು.(ಆಧಾರ್, ಓಟರ್ ಐಡಿ, ಪಾನ್ ಕಾರ್ಡ್ ಇತ್ಯಾದಿ). 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬೇಕೆಂದರೆ ಬಳಲುತ್ತಿರುವ ಗಂಭೀರ ಕಾಯಿಲೆಯ ಮೆಡಿಕಲ್ ಸರ್ಟಿಫಿಕೆಟ್ ಜೊತೆಯಲ್ಲಿರಬೇಕು.
ಇದನ್ನೂ ಓದಿ : ಇಡೀ ವಿಶ್ವಾದ್ಯಂತ ಬಳಕೆಯಾಗಲಿದೆ ಭಾರತದ ಈ Corona Vaccine, ಸಿಕ್ತು WHO ಅನುಮತಿ
ಅತಿಮುಖ್ಯ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕರೋನಾ ಲಸಿಕೆಯೇ ಸುರಕ್ಷಿತವೇ? ಎನ್ನುವುದು ಬಹುಜನರ ಪ್ರಶ್ನೆ. ನಮ್ಮ ವ್ಯಾಕ್ಸಿನ್ (Vaccine) ಬಗ್ಗೆ ಯಾವುದೇ ಭಯ ಬೇಡ. ವದಂತಿಗಳಿಗೆ ಖಂಡಿತಾ ಕಿವಿಗೊಡಬೇಡಿ. ಕರೋನಾದಿಂದ (Coronavirus) ರಕ್ಷಿಸಿಕೊಳ್ಳಬೇಕಾದರೆ ಕರೋನಾ ಲಸಿಕೆ ಹಾಕಿಸಿಕೊಳ್ಳಲೇ ಬೇಕು. ಭಾರತದ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತ. ಅವುಗಳಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಇದು ಇಲ್ಲಿಯತನಕ ಋಜುವಾತಾಗಿದೆ. ನಿಮಗೆ ಗೊತ್ತಿರಲೇ ಬೇಕು. ನಮ್ಮ ದೇಶದಲ್ಲಿ ಸರ್ವಶ್ರೇಷ್ಠ ವಿಜ್ಞಾನಿಗಳು ವೈದ್ಯರುಗಳಿದ್ದಾರೆ. ವಿಶ್ವದ ಬೇರೆ ಯಾವುದೇ ದೇಶವನ್ನೂ ಮೀರಿಸುವಂತಹ ಪರಿಣಿತರು ನಮ್ಮಲ್ಲಿದ್ದಾರೆ. ನಮ್ಮ ವ್ಯಾಕ್ಸಿನ್ ಗೆ ಸಂಪೂರ್ಣ ವಿಶ್ವವೇ ಶಹಬ್ಬಾಸ್ ಹೇಳಿದೆ. ಮೆಡಿಕಲ್ ಸೇವೆಗಳಿಗಾಗಿ ಅಮೇರಿಕಾದಂತಹ ಮುಂದುವರಿದ ದೇಶದ ಜನರು ಭಾರತಕ್ಕೆ ಬರುತ್ತಿದ್ದಾರೆ. ಹಾಗಾಗಿ, ನಮ್ಮ ವೈದ್ಯರು, ಮೆಡಿಕಲ್ ಪಂಡಿತರ ಸಾಮರ್ಥ್ಯ ದ ಬಗ್ಗೆ ಯಾವುದೇ ಅನುಮಾನ ಬೇಡ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.