ನವದೆಹಲಿ: Mucormycosis: ಕೊರೊನಾದಿಂದ (Covid-19) ಗುಣಮುಖರಾಗಿರುವ ರೋಗಿಗಳಲ್ಲಿ ಹಲವು ಬಾರಿ ಕೆಮ್ಮು, ಜ್ವರ, ನೆಗಡಿಗಳಂತಹ ಲಕ್ಷಣಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಆದರೆ, ಇದರಿಂದ ಕೆಲ ಸಮಯದ ನಂತರ ಜನರು ಚೇತರಿಸಿಕೊಳ್ಳುತ್ತಾರೆ. ಆದರೆ, ಇದೀಗ ಭಾರತದಲ್ಲಿ ಕಾಣಿಸಿಕೊಂಡಿರುವ ಕೆಲ ಪ್ರಕರಣಗಳು ಬೀಚ್ಚಿಬೀಳಿಸಿವೆ. ಈ ಪ್ರಕರಣಗಳಲ್ಲಿ ಕೊರೊನಾದಿಂದ ಗುಣಮುಖರಾಗಿರುವ ರೋಗಿಗಳು ಹೊಸ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಈ ರೋಗದಲ್ಲಿ ರೋಗಿಗಳು ಸಾವನ್ನಪ್ಪುವ ಸಾಧ್ಯತೆ ಶೇ.50 ರಷ್ಟಿರುತ್ತದೆ ಎನ್ನಲಾಗಿದೆ. ಈ ಹೊಸ ರೋಗಕ್ಕೆ ಮ್ಯೂಕರ್ಮೈಕೊಸಿಸ್ (Mucormycosis) ಎಂದು ಹೆಸರಿಸಲಾಗಿದೆ.


COMMERCIAL BREAK
SCROLL TO CONTINUE READING

ಏನಿದು ಮ್ಯೂಕರ್ಮೈಕೊಸಿಸ್ (Mucormycosis)?
ಮ್ಯೂಕರ್ಮೈಕೊಸಿಸ್ (Mucormycosis) ಒಂದು ಫಂಗಲ್ ಇನ್ಫೆಕ್ಷನ್ ಕಾಯಿಲೆಯಾಗಿದೆ. ಇದರಿಂದ ರೋಗಿಗಳು ಬದುಕುಳಿಯುವ ಸಾಧ್ಯತೆ ಕೇವಲ ಶೇ.50 ರಷ್ಟು ಇರುತ್ತದೆ. ಕೊರೊನಾ ರೋಗದಿಂದ ಚೇತರಿಸಿಕೊಂಡ ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಜನರ ಕಣ್ಣಿನ ಗುಡ್ಡೆಗಳು ಹೊರಬರುತ್ತವೆ.  ಒಂದು ವೇಳೆ ರೋಗಿ ಈ ರೋಗದಿಂದ ಗುಣಮುಖನಾದರೂ ಕೂಡ ಆತ ದೃಷ್ಟಿ ಕಳೆದುಕೊಳ್ಳುತ್ತಾನೆ ಎನ್ನಲಾಗಿದೆ


5 ರಲ್ಲಿ ಇಬ್ಬರು ರೋಗಿಗಳು ಸಾವು
ಆಂಗ್ಲ ವೃತ್ತಪತ್ರಿಕೆ 'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಅಹ್ಮದಾಬಾದ್ ರೆಟಿನಾ ಅಂಡ್ ಆಕ್ಯುಲರ್ ಟ್ರಾಮಾ ಸರ್ಜನ್ ಡಾ.ಪಾರ್ಥ್ ರಾಣಾ ಈ ರೋಗದಿಂದ ಬಳಲುತ್ತಿರುವವರ ಕುರಿತು ಮಾಹಿತಿ ನೀಡಿದ್ದಾರೆ. ರೋಗದ ಕುರಿತು ಮಾಹಿತಿ ನೀಡಿರುವ ಅವರು, ಈ ರೋಗದಿಂದ ಬಳಲುತ್ತಿದ್ದ ಐವರು ರೋಗಿಗಳ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಬದುಕುಳಿದ ಇಬ್ಬರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಈ ಎಲ್ಲಾ ರೋಗಿಗಳು ಕೊವಿಡ್ 19 (Covid-19) ರೋಗದಿಂದ ಚೇತರಿಸಿಕೊಂಡಿದವರಾಗಿದ್ದರು.


ಇದನ್ನು ಓದಿ- African Malaria Genus Plasmodium Ovale: ಕೇರಳದಲ್ಲಿ Plasmodium Ovale ವೈರಸ್ ಪತ್ತೆ, ಸುಡಾನ್ ನಿಂದ ಮರಳಿದ ಸೈನಿಕನಿಗೆ ಸೋಂಕು


ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಅಪಾಯ
ಈ ರೋಗಕ್ಕೆ ತುತ್ತಾದ ರೋಗಿಗಳು ಸಕ್ಕರೆ ಕಾಯಿಲೆಗೆ ಗುರಿಯಾದ ರೋಗಿಗಳಾಗಿದ್ದರು ಅಥವಾ ಯಾವುದಾದರೊಂದು ಚಟಕ್ಕೆ ಬಲಿಯಾಗಿದ್ದರು. ಇವರಲ್ಲಿ ರೋಗ ಪ್ರತಿರೋಧಕ ಶಕ್ತಿ ತುಂಬಾ ಕಡಿಮೆಯಾಗಿತ್ತು. ಕೊರೊನಾ ಕಾಲಕ್ಕೂ ಮೊದಲು ಮ್ಯೂಕರ್ಮೈಕೊಸಿಸ್ (Mucormycosis)ಕಾಯಿಲೆ ಹರಡಲು 15 ರಿಂದ 30 ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಆದರೆ ಈ ಎಲ್ಲಾ ರೋಗಿಗಳಲ್ಲಿ ಈ ರೋಗ ಕೇವಲ 2-3 ದಿನಗಳಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದು ಡಾ.ರಾಣಾ ಮಾಹಿತಿ ನೀಡಿದ್ದಾರೆ.


ಇದನ್ನು ಓದಿ-No Alcohol after Covid Vaccine: ಕೊರೊನಾ ಲಸಿಕೆ ಹಾಕಿಸಿಕೊಂಡ 2 ತಿಂಗಳು ಮದ್ಯ ಸೇವಿಸಬಾರದೇ? ಇಲ್ಲಿದೆ Experts Advise


ಕಳೆದ ಮೂರು ತಿಂಗಳಿನಲ್ಲಿ 19 ಪ್ರಕರಣಗಳು
ಮ್ಯೂಕರ್ಮೈಕೊಸಿಸ್ (Mucormycosis) ಕಾಯಿಲೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ನಡೆಸುತ್ತಿರುವ ಡಾ. ಅತುಲ್ ಪಟೇಲ್ ಹೇಳುವ ಪ್ರಕಾರ, ಕೊರೊನಾ ರೋಗಿಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ ಎಂದಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಮ್ಯೂಕರ್ಮೈಕೊಸಿಸ್ (Mucormycosis)ನ ಒಟ್ಟು 19 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಹೇಳಿದ್ದಾರೆ. ಕೊರೊನಾ ರೋಗದಿಂದ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಡಯಾಬಿಟಿಸ್ ಹಾಗೂ ಚಟಕ್ಕೆ ಬಲಿಯಾದ ವ್ಯಕ್ತಿಗಳಲ್ಲಿಯೂ ಈ ಇನ್ಫೆಕ್ಷನ್ ಹರಡುವ ಸಾಧ್ಯತೆ ಹೆಚ್ಚು ಎಂದು ಡಾ.ಪಟೇಲ್ ಹೇಳಿದ್ದಾರೆ.