No Alcohol after Covid Vaccine: ಕೊರೊನಾ ಲಸಿಕೆ ಹಾಕಿಸಿಕೊಂಡ 2 ತಿಂಗಳು ಮದ್ಯ ಸೇವಿಸಬಾರದೇ? ಇಲ್ಲಿದೆ Experts Advise

ಕೆಲ ದಿನಗಳ ಹಿಂದೆಯಷ್ಟೇ ತನ್ನ ದೇಶದ ನಾಗರಿಕರಿಗೆ Sputnik V ಲಸಿಕೆಯನ್ನು ನೀಡಿರುವ ರಷ್ಯಾ ಸರ್ಕಾರ ನಂತರ ಮದ್ಯ ಸೇವಿಸದಂತೆ ಎಚ್ಚರಿಕೆ ನೀಡಿದೆ. ವ್ಯಾಕ್ಸಿನ್ ಶಾಟ್ ನೀಡಿದ ಬಳಿಕ ಮದ್ಯಪಾನದಿಂದ ದೂರವಿರಲು ಸರ್ಕಾರ ಏಕೆ ಹೇಳುತ್ತಿದೆ? ಅದರ ಹಿಂದಿನ ಕಾರಣವಾದರೂ ಎಂದು ತಿಳಿಯೋಣ ಬನ್ನಿ

Last Updated : Dec 11, 2020, 01:54 PM IST
  • 2 ತಿಂಗಳ ಕಾಲ ಮದ್ಯಪಾನದಿಂದ ದೂರ ಉಳಿಯಿರಿ.
  • ಮದ್ಯ ಸೇವನೆಯಿಂದ ಇಮ್ಯೂನ್ ಸಿಸ್ಟಂ ಶಕ್ತಿ ಕಳೆದುಕೊಳ್ಳುತ್ತದೆ.
  • ಭಾರತದಲ್ಲಿ ಶಾಸ್ತ್ರಜ್ಞರು ಹೇಳುವುದೇನು ?
No Alcohol after Covid Vaccine: ಕೊರೊನಾ ಲಸಿಕೆ ಹಾಕಿಸಿಕೊಂಡ 2 ತಿಂಗಳು ಮದ್ಯ ಸೇವಿಸಬಾರದೇ? ಇಲ್ಲಿದೆ Experts Advise title=
No Alcohol after Covid Vaccine

No Alcohol after Covid Vaccine: ವಿಶ್ವಕ್ಕೆ  ಕೊರೋನವೈರಸ್(Coronavirus) ವ್ಯಾಕ್ಸಿನ್ ನ ಮೊದಲ ಲಸಿಕೆ ಈಗಾಗಲೇ ಸಿಕ್ಕಿದೆ. ಬ್ರಿಟನ್, ಕೆನಡಾದಂತಹ ಕೆಲ ದೇಶಗಳು ಇದರ ಸಾರ್ವಜನಿಕ ಬಳಕೆಗೆ ಅನುಮತಿ ಕೂಡ ನೀಡಿವೆ. ಭಾರತಕ್ಕೂ ಶೀಘ್ರವೇ ಈ ವ್ಯಾಕ್ಸಿನ್ ಸಿಗುವ ನಿರೀಕ್ಷೆ ಇದೆ. ಆದರೆ, ವ್ಯಾಕ್ಸಿನ್ ಶಾಟ್ಸ್ ತೆಗೆದುಕೊಂಡ ಬಳಿಕ ಕೆಲ ಪಥ್ಯಗಳನ್ನು ಪಾಲಿಸಬೇಕಾಗಲಿದೆ ಎಂಬುದು ತಿಳಿಯುವುದು ಆವಶ್ಯಕವಾಗಿದೆ. ಈ ಕುರಿತು ತಜ್ಞರು ಹೇಳುವ ಪ್ರಕಾರ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಎರಡು ತಿಂಗಳು ಕಾಲ ಜನರು ಮದ್ಯಪಾನದಿಂದ ದೂರ ಉಳಿಯಬೇಕು ಎನ್ನಲಾಗುತ್ತಿದೆ.

ನಿರ್ಬಂಧನೆ ವಿಧಿಸಿದ ರಷ್ಯಾ
ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ರಷ್ಯಾ ಪ್ರಧಾನಮಂತ್ರಿ ತಾತಿಯಾನಾ ಗೊಲಿಕೊವ್, ವ್ಯಾಕ್ಸಿನ್ ಹಾಕಿಸಿಕೊಂಡ ರಷ್ಯಾ ನಾಗರಿಕರು ಮುಂದಿನ 42ದಿನಗಳ ಕಾಲ ವಿಶೇಷ ಎಚ್ಚರಿಕೆ ವಹಿಸುವ ಆವಶ್ಯಕತೆ ಇದೆ. ಜನಸಂದಣಿ ಇರುವ ಪ್ರದೇಶಕ್ಕೆ ಹೋಗುವುದನ್ನು ಅವರು ನಿಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಅನ್ನು ಕೂಡ ಬಳಸಬೇಕು ಮತ್ತು ಅದರಲ್ಲೂ ವಿಶೇಷವಾಗಿ ಮದ್ಯ ಸೇವನೆಯಿಂದ ದೂರ ಉಳಿಯಬೇಕು ಎಂದಿದ್ದರು.

ಇದನ್ನು ಓದಿ- Corona Vaccine ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇಬ್ಬರು ಅಸ್ವಸ್ಥ, ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ

ಮಧ್ಯ ಸೇವನೆಯಿಂದಾಗುವ ಹಾನಿ ಏನು?
ರಷ್ಯಾದಲ್ಲಿ ಗ್ರಾಹಕರ ಸುರಕ್ಷತೆಯ ಮೇಲೆ ನಿಗಾ ವಹಿಸುವ ಕನ್ಸ್ಯೂಮರ ಸೇಫ್ಟಿ ವಾಚ್ ಡಾಗ್ Rospotrebnadzor ನ ಮುಖ್ಯಸ್ಥರಾಗಿರುವ ಆನಾ ಪೋಪೋವಾ ಹೇಳುವ ಪ್ರಕಾರ, ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡ ಎರಡು ತಿಂಗಳು ಕಾಲ ಸಾರಾಯಿ ಸೇವನೆಯಿಂದ ದೂರ ಉಳಿಯಬೇಕು  ಎಂದಿದ್ದಾರೆ. ಏಕೆಂದರೆ ಮದ್ಯಪಾನ ಒತ್ತಡವನ್ನು ಹೆಚ್ಚಿಸುತ್ತದೆ ಹಾಗೂ ಒತ್ತಡ ನಮ್ಮ ಶರೀರದ ರೋಗ ಪ್ರತಿರೋಧಕ ಶಕ್ತಿ ಕುಗ್ಗಿಸುತ್ತದೆ. ಹೀಗಾಗಿ ಸದೃಢ ಶರೀರಕ್ಕಾಗಿ ಸಾರಾಯಿ ಸೇವನೆಯಿಂದ ದೂರ ಉಳಿಯಿರಿ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನು ಓದಿ- Corona Vaccine: Blue Print ಜಾರಿಗೊಳಿಸಿದ ಸರ್ಕಾರ, ಇಲ್ಲಿದೆ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ

ಭಾರತೀಯ ತಜ್ಞರ ಅಭಿಮತ ಏನು?
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ಮೈಕ್ರೋಬಯಾಲಾಜಿ ವಿಭಾದದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಜ್ಯೋತಿ ಮುಕ್ತಾ ಹೇಳುವ ಹಾಗೆ ಸದೃಢ ಶರೀರದಿಂದ ವ್ಯಾಕ್ಸಿನ್ ಗೆ ಉತ್ತಮ ಸಾಥ್ ಸಿಗಲಿ ಎಂಬ ಉದ್ದೇಶದಿಂದ ರಷ್ಯಾ ಈ ನಿರ್ಬಂಧನೆ ವಿಧಿಸಿದೆ ಎಂದಿದ್ದಾರೆ.

Trending News