COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು
COVID-19 vaccine: ಭಾರತದಲ್ಲಿ ಕೊವಿಡ್-19 ವಿರುದ್ಧ ಹೋರಾಡಲು ಒಟ್ಟು ಎರಡು ಲಸಿಕೆಗಳ ನಿರ್ಬಂಧಿತ ತುರ್ತು ಬಳಕೆಗೆ ಡಿಸಿಜಿಐ ಔಪಚಾರಿಕ ಅನುಮೋದನೆ ನೀಡಿದೆ.
ನವದೆಹಲಿ: COVID-19 vaccine - ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಔಷಧ ಮಹಾನಿರ್ದೆಶನಾಲಯ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ ಬಯೋಟೆಕ್ ಅಭಿವೃದ್ಧಿಗೊಳಿಸಿರುವ ಕೊರೊನಾ ಲಸಿಕೆಗಳಿಗೆ ಔಪಚಾರಿಕ ಅನುಮೋದನೆ ನೀಡಿದೆ. ಹೀಗಾಗಿ ದೇಶಾದ್ಯಂತ ವ್ಯಾಕ್ಸಿನ್ ವಿತರಣೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಜನವರಿ 2 ರಂದು ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕೆ ವಿತರಣೆಯ ತಾಲೀಮು ನಡೆಸಲಾಗಿದೆ.
ಅಭಿವೃದ್ಧಿಗೊಳಿಸಿದವರು ಮತ್ತು ಉತ್ಪಾದಕರು
ಕೋವಿ ಶೀಲ್ಡ್ ವ್ಯಾಕ್ಸಿನ್ ಅನ್ನು ಅಸ್ಟ್ರಾಜೇನಿಕಾ ಸಹಯೋಗದೊಂದಿಗೆ ಆಕ್ಸ್ಫರ್ಡ್ ವಿವಿ ಅಭಿವೃದ್ಧಿಗೊಳಿಸಿದೆ. ಪುಣೆ ಮೂಲಕ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ವ್ಯಾಕ್ಸಿನ್ ನ ಉತ್ಪಾದನೆಯ ಜವಾಬ್ದಾರಿ ಹೊತ್ತುಕೊಂಡಿದೆ.
ಕೊವ್ಯಾಕ್ಸಿನ್ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಗೊಳಿಸಿದೆ. ಇದು ಭಾರತದ ಮೊಟ್ಟಮೊದಲ ಸಂಪೂರ್ಣ ಸ್ವದೇಶಿ ಕೊವಿಡ್ ವ್ಯಾಕ್ಸಿನ್ ಆಗಿದೆ. ICMR ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ ಸಹಯೋಗದಿಂದ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ.
ಇದನ್ನು ಓದಿ- Corona Vaccineಗೆ ಸಂಬಂಧಿಸಿದಂತೆ ಇಂದು ದೊಡ್ಡ ಘೋಷಣೆ ಸಾಧ್ಯತೆ
ಈ ವ್ಯಾಕ್ಸಿನ್ ಗಳನ್ನು ಹೇಗೆ ಅಭಿವೃದ್ದಿಗೊಳಿಸಲಾಗಿದೆ?
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ DCGI,ಸಾಮಾನ್ಯ ಶೀತ ವೈರಸ್ ನ ದುರ್ಬಲಗೊಂಡ ಆವೃತ್ತಿಯನ್ನು ಆಧರಿಸಿ, ಪುನರಾವರ್ತನೆ ಕೊರತೆ ಇರುವ ಚಿಂಪಾಂಜಿಯಾ ವೈರಲ್ ವೆಕ್ತರ್ ಬಳಸಿ ಕೋವಿಶೀಲ್ಡ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಿದೆ . ಈ ವೈರಸ್ ಚಿಂಪಾಂಜಿಗಳಲ್ಲಿ ಸೋಂಕನ್ನು ಉಂಟುಮಾಡುತ್ತದೆ ಮತ್ತು SARS-CoV-2 ವೈರಸ್ ಸ್ಪೈಕ್ ಪ್ರೋಟೀನ್‌ನ ಆನುವಂಶಿಕ ವಸ್ತುಗಳನ್ನು ಹೊಂದಿರುತ್ತದೆ ಎಂದು DCGI ಹೇಳಿದೆ.
ಇನ್ನೊಂದೆಡೆ ಭಾರತ್ ಬಯೋಟೆಕ್ ವ್ಯಾಕ್ಸಿನ್ ಆಗಿರುವ ಕೊವಾಕ್ಸಿನ್ ಒಂದು ನಿಷ್ಕ್ರೀಯ ವ್ಯಾಕ್ಸಿನ್ ಆಗಿದ್ದು, ರೋಗಕ್ಕೆ ಕಾರಣವಾಗುವ ಜೀವಂತ ಮೈಕ್ರೋ ಆರ್ಗ್ಯಾನಿಸಮ್ ಗಳನ್ನು ನಿಷ್ಕೀಯಗೊಳಿಸಿ ಈ ವ್ಬ್ಯಾಕ್ಸಿನ್ ಆನ್ನು ಅಭಿವೃದ್ಧಿಗೊಳಿಸಲಾಗಿದೆ. ಇದು ಪ್ಯಾಥೋಜೇನ್ ಗಳ ಪುನರಾವರ್ತನೆಯ ಸಾಮರ್ಥ್ಯ ನಷ್ಟಗೊಳಿಸುತ್ತದೆ. ಆದರೆ, ಅವುಗಳನ್ನು ಹಾಗೆಯೇ ಇರಿಸುತ್ತದೆ. ರೋಗಪ್ರತಿರೋಧಕ ಶಕ್ತಿ ಅದನ್ನು ಗುರುತಿಸಿ ಪ್ರತಿರಕ್ಷಣಾ ಪ್ರತಿಕ್ರಿಯೆ ನೀಡುತ್ತದೆ.
ಇದನ್ನು ಓದಿ- BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO
ಟ್ರಯಲ್ ಮತ್ತು ಸಾಮರ್ಥ್ಯ
ಈ ಕುರಿತು ಹೇಳಿಕೆ ನೀಡಿರುವ ಔಷಧ ಮಹಾನಿರ್ದೆಶನಾಲಯ, ಸೀರಮ್ ಇನ್ಸ್ಟಿಟ್ಯೂಟ್ ಕ್ಲಿನಿಕಲ್ ಟ್ರಯಲ್ ಹಂತ 1ರ ದತ್ತಾಂಶಗಳನ್ನು ಒದಗಿಸಿದ್ದು, ಇದರಲ್ಲಿ ಓಟ್ಟು 23,745 ಅಭ್ಯರ್ಥಿಗಳಿಗೆ ಈ ಲಸಿಕೆ ನೀಡಲಾಗಿದ್ದು ಇದು ಶೇ.70.42ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಲಸಿಕೆಯ ಹಂತ 2 ಮತ್ತು 3ರ ಪ್ರಯೋಗಗಳು ಭಾರತದಲ್ಲಿ ನಡೆದಿದ್ದು, ಇದರಲ್ಲಿ ಒಟ್ಟು 1600 ಸ್ವಯಂಸೇವಕರು ಭಾಗವಹಿಸಿದ್ದರು. ಈ ಹಂತಗಳ ಫಲಿತಾಂಶಗಳು ಕೂಡ ಮೊದಲ ಹಂತದ ರೀತಿಯಲ್ಲೇ ಹೊರಬಂದಿವೆ.
ಭಾರತ್ ಬಯೋಟೆಕ್ ಮೊದಲೆರಡು ಹಂತಗಳಲ್ಲಿ ಒಟ್ಟು 800 ಕಾರ್ಯಕರ್ತರ ಮೇಲೆ ಲಸಿಕೆಯ ಪ್ರಯೋಗ ನಡೆಸಿದೆ. ಇದಲ್ಲದೆ ಹಲವು ಪ್ರಾಣಿಗಳ ಮೇಲೂ ಕೂಡ ತನ್ನ ಲಸಿಕೆಯ ಟ್ರಯಲ್ ನಡೆಸಿದೆ. ಲಸಿಕೆಯ ಮೂರನೇ ಹಂತದ ಟ್ರಯಲ್ ಜಾರಿಯಲ್ಲಿದ್ದು, 22,500 ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಕೊವಾಕ್ಸಿನ್ ಭಾರತದಲ್ಲಿ ತುಂಬಾ ಪ್ರಭಾವಶಾಲಿಯಾಗಿದೆ ಎಂದು DCGI ಹೇಳಿದೆ.
ಇದನ್ನು ಓದಿ-Covid-19 ವಿರುದ್ಧದ ಹೋರಾಟದಲ್ಲಿ Bharat Biotech ನ Covaxin ಗೆ ಸಿಕ್ತು ಅನುಮತಿ
ಬೆಲೆ ಎಷ್ಟು?
ಈ ಕುರಿತು ಶನಿವಾರ ಘೋಷಣೆ ಮಾಡಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ದೇಶದಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತರುವವರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿದ್ದರು.
ಈ ಹಿಂದೆ ತಮ್ಮ ಸಂಸ್ಥೆಯಲ್ಲಿ ಉತ್ಪಾದನೆಯಾಗುತ್ತಿರುವ ವ್ಯಾಕ್ಸಿನ್ ಕುರಿತು ನೀಡಿದ್ದ ಸಿರಮ್ ಇನ್ಸ್ಟಿಟ್ಯೂಟ್ ಸಿಇಓ ಅದರ್ ಪೂನಾವಾಲಾ, ಕೋವಿ ಶೀಲ್ಡ್ ಬೆಲೆ 400 ರೂ.ಗಳ ಆಸುಪಾಸಿನಲ್ಲಿರಲಿದೆ ಎಂದಿದ್ದರು. ಭಾರತ ಬಯೋಟೆಕ್ ಅಭಿವೃದ್ಧಿಗೊಳಿಸಿರುವ ಕೊವಾಕ್ಸಿನ್ ಲಸಿಕೆಯ ಬೆಲೆ ರೂ.100 ಗಿಂತ ಕಮ್ಮಿ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಇದನ್ನು ಓದಿ- BIG SUCCESS: ಕೊನೆಗೂ ಈ ಮಾರಕ ಕಾಯಿಲೆಗೆ ಮೊಟ್ಟಮೊದಲ ಸ್ವದೇಶಿ ವ್ಯಾಕ್ಸಿನ್ ಬಿಡುಗಡೆ ಮಾಡಿದ Serum Institute Of India
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.